ಕರ್ನಾಟಕ

ತಡರಾತ್ರಿ ಸಿಟಿ ರೌಂಡ್ ಹಾಕಿದ ಬಿಬಿಎಂಪಿ ನೂತನ ಮೇಯರ್!

Pinterest LinkedIn Tumblr


ಬೆಂಗಳೂರು: ಬಿಬಿಎಂಪಿ ನೂತನ ಮೇಯರ್ ಗಂಗಾಂಬಿಕೆ ಅವರು ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ನಗರದ ಪ್ರಗತಿ ಪರಿಶೀಲನಾ ಕಾರ್ಯ ಆರಂಭಿಸಿದ್ದಾರೆ. ಸಿಲಿಕಾನ್ ಸಿಟಿಯ ರಸ್ತೆಗುಂಡಿಯ ಪರಿಶೀಲನೆ ಹಾಗೂ ಅಕ್ರಮ ಹೋರ್ಡಿಂಗ್ಸ್ ಗಳನ್ನು ತೆರವುಗೊಳಿಸಲು ಸ್ವತಃ ಮೇಯರ್ ತಡರಾತ್ರಿ ಕಾರ್ಯಾಚರಣೆ ನಡೆಸಿದರು.

ಮಂಗಳವಾರ ರಾತ್ರಿ ತಮ್ಮ ದ್ವಿಚಕ್ರ ವಾಹನದಲ್ಲೇ ಉಪಮೇಯರ್ ರಮೀಳಾ ಹಾಗೂ ಬಿಬಿಎಂಪಿ ಅಧಿಕಾರಿಗಳ ಜೊತೆ ಫುಲ್ ಸಿಟಿ ರೌಂಡ್ಸ್ ಹೊಡೆದ ಮೇಯರ್ ಗಂಗಾಬಿಕೆ ಅವರು ಅಕ್ರಮ ಹೋರ್ಡಿಂಗ್ಸ್ ಗಳನ್ನು ತೆರವುಗೊಳಿಸಲು ಮುಂದಾದರು. ಬೆಂಗಳೂರಿನ ಕಸ್ತೂರ್ ಬಾ ರಸ್ತೆ, ಕನ್ನಿಂಗ್ ಹ್ಯಾಂ ರಸ್ತೆ, ಜೆ.ಸಿ. ನಗರ ಸೇರಿ ಹಲವು ಭಾಗಗಳಿಗೆ ಭೇಟಿ ನೀಡಿ ಅಕ್ರಮವಾಗಿ ಹಾಕಲಾದ ಹೋರ್ಡಿಂಗ್ಸ್ ಗಳನ್ನು ತೆರವುಗೊಳಿಸಿದರು.

ಇದೇ ವೇಳೆ ಮಾತನಾಡಿದ ಮೇಯರ್ ಗಂಗಾಂಬಿಕೆ ಬೆಂಗಳೂರಿನಲ್ಲಿ ಈ ಭಾರಿ ಬಾರೀ ಪ್ರಮಾಣದಲ್ಲಿ ಮಳೆಯಾಗಿದೆ, ಆ ಕಾರಣಕ್ಕಾಗಿ ಎಲ್ಲೆಲ್ಲೂ ರಸ್ತೆಗುಂಡಿಗಳು ಕಾಣಿಸುತ್ತಿವೆ. ಆದಷ್ಟು ಬೇಗ ಉಳಿದಿರುವ ರಸ್ತೆಗುಂಡಿಗಳನ್ನು ಮುಚ್ಚುವಂತಹ ಕೆಲಸ ಮಾಡಲಾಗುವುದು. ಅದೇ ರೀತಿ ಅಕ್ರಮವಾಗಿ ಹಾಕಲಾದ ಹೋರ್ಡಿಂಗ್ಸ್ ಗಳನ್ನು ಆದಷ್ಟು ಬೇಗ ತೆರವುಗೊಳಿಸುತ್ತೇವೆ ಎಂದು ಹೇಳಿದರು.

ಬೆಂಗಳೂರು ಪೂರ್ವ ಭಾಗದಲ್ಲಿ 400ಕ್ಕೂ ಹೆಚ್ಚು ಅನಧಿಕೃತ ಹೋರ್ಡಿಂಗ್ಸ್​ಗಳಿವೆ. ಅವುಗಳ ಪೈಕಿ 85 ಹೋರ್ಡಿಂಗ್ಸ್​ಗಳನ್ನ ತೆಗೆಯಲಾಗಿದೆ. ಉಳಿದ ಹೋರ್ಡಿಂಗ್ಸ್​ ತೆಗೆಯಲು ಅ.26 ತನಕ ಕಾಲವಕಾಶವಿದೆ. ಸಂಜಯನಗರ, ಕನ್ನಿಂಗ್​ ಹ್ಯಾಮ್ ರೋಡ್, ಆರ್.ಟಿ.ನಗರ ಮೊದಲಾದ ಕಡೆ ರಸ್ತೆಗುಂಡಿ ಮುಚ್ಚುವ ಕಾರ್ಯ, ಅನಧಿಕೃತ ಜಾಹೀರಾತು ತೆರವಿನ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ನಗರದಲ್ಲಿ ಗುಣಮಟ್ಟದ ರಸ್ತೆ ನಿರ್ಮಿಸಲು ಮುಂದಿನ ದಿನಗಳಲ್ಲಿ ಯೋಜನೆ ರೂಪಿಸಲಾಗುತ್ತದೆ. ವಾರ್ಡ್ ಮಟ್ಟದಲ್ಲಿ ಪ್ರೋಗ್ರಾಮ್ ಆಫ್ ವರ್ಕ್ಸ್ ಗೆ ಟೆಂಡರ್ ಕರೆಯಲಾಗಿದ್ದು ಸದ್ಯದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದು ತಿಳಿಸಿದ ಅವರು, ಸೂರ್ಯ- ಚಂದ್ರ ಇರುವ ತನಕ ಸಮಸ್ಯೆಗಳು ಇದ್ದಿದ್ದೇ, ಸಾಧ್ಯವಾದಷ್ಟು ಬೇಗ ಅವುಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಗುಂಡಿ ರಸ್ತೆಗಳ ಬಗ್ಗೆ ಪರೋಕ್ಷವಾಗಿ ತಪ್ಪೊಪ್ಪಿಕೊಂಡರು.

Comments are closed.