ರಾಷ್ಟ್ರೀಯ

ಹಿಟ್ಲರ್‌ಗೂ ಪತ್ರ ಬರೆದಿದ್ದರು ಗಾಂಧಿ!

Pinterest LinkedIn Tumblr


ಬಹುಶಃ ಮಹಾತ್ಮ ಗಾಂಧಿ ಕುರಿತು ಬಂದಷ್ಟು ಸಾಹಿತ್ಯ ಬೇರೆ ಯಾವುದೇ ನಾಯಕನ ಕುರಿತು ಬಂದಿಲ್ಲ. ಇಡೀ ಜಗತ್ತಿನಾದ್ಯಂತ ಪ್ರಭಾವ ಬೀರಿದ್ದ ಗಾಂಧಿ ಮತ್ತು ಅವರ ಹೋರಾಟದ ಪರಿ ಇಂದಿಗೂ ಸೂಜಿಗವೇ ಸರಿ. ಅವರ ಬಗ್ಗೆ ಗೊತ್ತಿಲ್ಲದ ಒಂದಿಷ್ಟು ಸಂಗತಿಗಳು ಇಲ್ಲಿವೆ.

1. ನೊಬೆಲ್‌ ಪುರಸ್ಕಾರಕ್ಕೆ 5 ಬಾರಿ ನಾಮಕರಣ

ಶಾಂತಿ ಮತ್ತು ಅಹಿಂಸೆಯಿಂದಲೇ ಖ್ಯಾತರಾಗಿದ್ದ ಮಹಾತ್ಮ ಗಾಂಧಿಗೆ ನೊಬೆಲ್‌ ಶಾಂತಿ ಪುರಸ್ಕಾರ ಏಕೆ ದೊರೆಯಲಿಲ್ಲ ಎಂಬ ಪ್ರಶ್ನೆ ಈಗಲೂ ಬಹುತೇಕರಲ್ಲಿ ಆಶ್ಚರ್ಯವಿದೆ. ವಿಶೇಷ ಎಂದರೆ, ಗಾಂಧಿ ಅವರು ಈ ಪುರಸ್ಕಾರಕ್ಕೆ ಐದು ಬಾರಿ ನಾಮಕರಣಗೊಂಡಿದ್ದರು. ಆದರೂ, ಈ ಗೌರವ ದೊರೆಯಲಿಲ್ಲ. ಇದಕ್ಕೆ ನೊಬೆಲ್‌ ಸಮಿತಿ ವಿಷಾದ ಕೂಡ ವ್ಯಕ್ತಪಡಿಸಿದೆ.

2. 8 ಕಿ.ಮೀ. ಉದ್ದದ ಅಂತಿಮಯಾತ್ರೆ!

1948 ಜನವರಿ 30ರಂದು ನಾಥೂರಾಮ್‌ ಗೋಡ್ಸೆ ಗಾಂಧಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ. ಗಾಂಧಿ ಅಂತಿಮ ಯಾತ್ರೆಗೆ ಲಕ್ಷಾಂತರ ಜನರು ಬಂದಿದ್ದರು. ಅಂತಿಮ ಯಾತ್ರೆ 8 ಕಿ.ಮೀ.ರಷ್ಟು ಉದ್ದವಿತ್ತು. ಗಾಂಧಿಯ ಮೂರನೇ ಮಗ ರಾಮದಾಸ್‌ ಗಾಂಧಿ ಅಗ್ನಿಸ್ಪರ್ಶ ಮಾಡಿದ್ದರು.

3. ಬ್ರಿಟನ್‌ನಿಂದ ಅಂಚೆ ಬಿಡುಗಡೆ

ಗಾಂಧಿ ತಮ್ಮ ಇಡೀ ಜೀವನವನ್ನು ಬ್ರಿಟಿಷ್‌ರ ವಿರುದ್ಧವೇ ಹೋರಾಡಿದ್ದರು. ಗಾಂಧಿ ಸತ್ತು 21 ವರ್ಷದ ಬಳಿಕ ಬ್ರಿಟನ್‌ ಸರಕಾರ ಅವರ ಸ್ಮರಾರ್ಣರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತ್ತು. ಈವರೆಗೆ 150 ರಾಷ್ಟ್ರಗಳ ಗಾಂಧಿ ಸ್ಮರಣೆಯಲ್ಲಿ ಅಂಚಿ ಚೀಟಿ ಬಿಡುಗಡೆ ಮಾಡಿವೆ!

4. ಹಿಟ್ಲರ್‌, ಟಾಲ್‌ಸ್ಟಾಯ್‌ ಜತೆ ಪ್ರತ ವ್ಯವಹಾರ

ಜರ್ಮನಿಯು ಜಕೋಸ್ಲೋವಿಯಾವನ್ನು ಆಕ್ರಮಿಸಿಕೊಂಡ ಬಳಿಕ ಯುರೋಪ್‌ನಲ್ಲಿ ಯುದ್ಧದ ಕಾರ್ಮೋಡಗಳು ಆವರಿಸಿದ್ದವು. ಆಗ ಗಾಂಧಿ ಹಿಟ್ಲರ್‌ಗೆ ಪತ್ರ ಬರೆದು, ಯುದ್ಧವನ್ನು ತಪ್ಪಿಸುವಂತೆ ಕೋರಿದ್ದರು. ಆದರೆ, ಬ್ರಿಟಿಷ್‌ ಸರಕಾರದಿಂದಾಗಿ ಹಿಟ್ಲರ್‌ಗೆ ಗಾಂಧಿ ಬರೆದ ಈ ಪತ್ರ ತಲುಪಲೇ ಇಲ್ಲ. ಟಾಲ್‌ ಸ್ಟಾಯ್‌ ಸೇರಿದಂತೆ ಬಹುತೇಕರ ಜತೆ ಗಾಂಧಿ ಪತ್ರ ವ್ಯವಹಾರ ಇಟ್ಟುಕೊಂಡಿದ್ದರು.

5. ಕಾಂಗ್ರೆಸ್‌ ವಿಸರ್ಜಿಸಲು ಸೂಚಿಸಿದ್ದರು

ಹತ್ಯೆಯಾಗುವುದಕ್ಕಿಂತ ಕೆಲವು ದಿನಗಳ ಮುಂಚೆ ಗಾಂಧಿ ತಮ್ಮ ಹರಿಜನ ಪತ್ರಿಕೆಯಲ್ಲಿ ಬರೆದ ಲೇಖನದಲ್ಲಿ, ಕಾಂಗ್ರೆಸ್‌ ಸಂಘಟನೆ ವಿಸರ್ಜಿಸುವಂತೆ ಕೋರಿದ್ದರು.

Comments are closed.