ಕರಾವಳಿ

ಗೃಹರಕ್ಷಕರಿಂದ ಅಕ್ಷರ ಕೈತೋಟ ನಿರ್ಮಾಣ : ಡಾ| ಮುರಲೀ ಮೋಹನ್ ಚೂಂತಾರು ಶ್ಲಾಘನೆ

Pinterest LinkedIn Tumblr

ಮಂಗಳೂರು ಅಕ್ಟೋಬರ್ 02: ಉಪ್ಪಿನಂಗಡಿ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲ ಬಿಸಿಯೂಟದ ಅಕ್ಷರ ದಾಸೋಹ ಕಾರ್ಯಕ್ರಮಕ್ಕೆ ಸಹಾಯಕವಾಗುವ ನಿಟ್ಟಿನಲ್ಲಿ ಉಪ್ಪಿನಂಗಡಿ ಗೃಹರಕ್ಷಕದಳದ ವತಿಯಿಂದ ಅಕ್ಷರ ಕೈತೋಟ ನಿರ್ಮಾಣ ಮಾಡಲಾಯಿತು.

ಗೃಹರಕ್ಷಕದಳದ ಸಮಾದೇಷ್ಟರಾದ ಡಾ| ಮುರಲೀ ಮೋಹನ್ ಚೂಂತಾರು ಉಪ್ಪಿನಂಗಡಿ ಘಟಕಕ್ಕೆ ಭೇಟಿ ನೀಡಿ ಉಪ್ಪಿನಂಗಡಿ ಗೃಹರಕ್ಷಕದಳದ ವತಿಯಿಂದ ನಿರ್ಮಿಸಲಾದ ಅಕ್ಷರ ಕೈತೋಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಶಾಲಾ ಪದವೀಧರ ಮುಖ್ಯ ಶಿಕ್ಷಕಿ ದೇವಕಿ.ಎಂ, ಇವರು, ಗೃಹರಕ್ಷಕದಳ ಉಪ್ಪಿನಂಗಡಿ ಘಟಕವು ಆರಕ್ಷಕರೊಂದಿಗೆ, ಗ್ರಾಮ ಪಂಚಾಯತ್‍ರೊಂದಿಗೆ ನೆರೆ ಬರುವ ಸಮಯದಲ್ಲಿ ಹೆಚ್ಚಿನ ಮುತುವರ್ಜಿಯಿಂದ ಕೆಲಸ ಮಾಡುತ್ತಿದ್ದು ಅದೇ ರೀತಿ ಸರಕಾರಿ ಮಾದರಿ ಶಾಲೆಯ ಎಲ್ಲಾ ಕಾರ್ಯಕ್ರಮದಲ್ಲೂ ಸಹಕರಿಸುತ್ತಿದೆ ಇಂತಹ ಸಮಾಜ ಸೇವೆಯನ್ನು ಮಡುತ್ತಿರುವ ಗೃಹರಕ್ಷಕದಳದ ಎಲ್ಲಾ ಸಿಬ್ಬಂದಿಗಳಿಗೂ ಕೃತಜ್ಞತೆ ಸಲ್ಲಿಸಿದರು.

ಶಾಲಾಭಿವೃದ್ದಿ ಸಮಿತಿಯ ಉಪಾಧ್ಯಕ್ಷೆ ಶೀಲಾವತಿ ಸದಸ್ಯರಾದ ಮಹಮ್ಮದ್, ಮಾಜಿ ಘಟಕಾಧಿಕಾರಿ ರಾಮಣ್ಣ ಆಚಾರ್ಯ, ಪ್ರಭಾರ ಘಟಕಾಧಿಕಾರಿ ದಿನೇಶ್ ಬಿ. ಹಾಗೂ ಘಟಕದ ಸಿಬ್ಬಂದಿಗಳು ಉಪಸ್ಥಿತರಿದ್ದರು.

Comments are closed.