ಕರಾವಳಿ

ಮಾತಾ ಅಮೃತಾನಂದಮಯಿ ಮಠದ ವತಿಯಿಂದ ಗಾಂಧೀ ಜಯಂತಿ ಪ್ರಯುಕ್ತ ವಿಶೇಷ ಸ್ವಚ್ಚತಾ ( ಅಭಿಯಾನ) ಕಾರ್ಯಕ್ರಮ

Pinterest LinkedIn Tumblr

ಮಂಗಳೂರು, ಅಕ್ಟೋಬರ್.03 : ಶ್ರೀ ಮಾತಾ ಅಮೃತಾನಂದಮಯಿ ಮಠದ ವತಿಯಿಂದ ಸ್ವಚ್ಛ, ಸುಂದರ ಹಾಗೂ ಆರೋಗ್ಯ ಪೂರ್ಣ ಭಾರತದ ಪರಿಕಲ್ಪನೆಯ “ಅಮಲ ಭಾರತ” ಸ್ವಚ್ಚತಾ ಜನ ಜಾಗೃತಿ ಅಭಿಯಾನ ಕಾರ್ಯಕ್ರಮ ಮಂಗಳವಾರ ಬೆಳಗ್ಗೆ ಬೋಳೂರು ಹಾಗೂ ಸುಲ್ತಾನ್ ಬತ್ತೇರಿ ಪ್ರದೇಶದಲ್ಲಿ ಜರುಗಿತು.

ಶ್ರೀ ಮಾತಾ ಅಮೃತಾನಂದಮಯಿ ಮಠದ ವತಿಯಿಂದ ಗಾಂಧೀ ಜಯಂತಿ ಪ್ರಯುಕ್ತ ವಿಶೇಷವಾಗಿ ಹಮ್ಮಿಕೊಳ್ಳಲಾದ ಈ ಕಾರ್ಯಕ್ರಮಕ್ಕೆ ನಗರದ ಕೆನಾರ ಪದವಿ ಕಾಲೇಜಿನ ವಿದ್ಯಾರ್ಥಿಗಳು ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು, ಅಯುಧ್ ಮಂಗಳೂರು, ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್ ಬೋಳೂರು ಹಾಗೂ ಮೊಗವೀರ ಮಹಿಳಾ ಸಭಾ ಬೋಳುರು ಇವರು ಸಹಕಾರ ನೀಡಿದರು. ಕಾರ್ಯಕ್ರಮದ ಪ್ರಯೋಜಕತ್ವವನ್ನು ಒ‌ಎನ್‌ಜಿಸಿ ಎಮ್‌ಆರ್‌ಪಿ‌ಎಲ್ ವಹಿಸಿಕೊಂಡಿತ್ತು.

ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ಸಂಚಾಲಕ ಮಾದವ ಸುವರ್ಣ ಅವರು ಸ್ವಚ್ಚತಾ ಪರಿಕಲ್ಪನೆ ಬಗ್ಗೆ ಹಾಗೂ ಸ್ವಚ್ಚತೆಯಿಂದ ಆಗುವ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು.

ಕೆನಾರ ಕಾಲೇಜಿನ ಪ್ರಾಂಶುಪಾಲರಾದ ಪ್ರೋ.ಮಾಲಿನಿ, ರಾಷ್ಟ್ರೀಯ ಸೇವಾ ಯೋಜನೆ ( NSS ) ಯ ಅಧಿಕಾರಿ ದೇಜಮ್ಮ, ಸೇವಾ ಸಮಿತಿಯ ಪ್ರಮುಖರಾದ ಸುರೇಶ್ ಅಮಿನ್, ಮಾದವ ಸುವರ್ಣ, ರವಿ ಉಚ್ಚಿಲ, ಎಸ್ ಎಸ್ ಶೆಟ್ಟಿಗಾರ್, ರಾಜನ್, ಪ್ರಕಾಶ್ ಕರ್ಕೇರಾ, ಸುಂದರ್ ಮೆಂಡನ್ ಹಾಗೂ ಮತ್ತಿತ್ತರರು ಈ ವೇಳೆ ಉಪಸ್ಥಿತರಿದ್ದರು.

ಕೆನಾರ ಪದವಿ ಕಾಲೇಜಿನ ವಿದ್ಯಾರ್ಥಿಗಳು ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ನೂರಕ್ಕೂ ಹೆಚ್ಚು ಮಂದಿ ಸ್ವಚ್ಚತಾ ಕಾರ್ಯಕ್ರಮದಲ್ಲಿ ಕೈಜೋಡಿಸಿದರು.

Comments are closed.