ರಾಷ್ಟ್ರೀಯ

5ರ ಬಾಲಕಿ ಮೇಲೆ ಅಪ್ರಾಪ್ತ ಸಹೋದರನಿಂದ ಅತ್ಯಾಚಾರ

Pinterest LinkedIn Tumblr


ಸೂರತ್: ಗುಜರಾತ್‌ನ ಸೂರತ್‌ ನಗರದ ದಿಂಡೋಲಿ ಪ್ರದೇಶದಲ್ಲಿ ಕಳೆದ ವಾರ ಇಬ್ಬರು ಐದು ವರ್ಷಗಳ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಗಳ ಆರೋಪಿಗಳ ಪೈಕಿ ಒಂದನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ವೇಳೆ, ಬಾಲಕಿಯ ಸಹೋದರನೇ ಆಕೆಯ ಮೇಲೆ ಅತ್ಯಾಚಾರ ನಡೆಸಿರುವ ಹೀನ ಕೃತ್ಯ ಬೆಳಕಿಗೆ ಬಂದಿದೆ.

ಬಾಲಕನ ಬಟ್ಟೆಯಲ್ಲಿ ರಕ್ತದ ಕಲೆ ಹಾಗೂ ದಿಂಡೋಲಿ ಪ್ರದೇಶದ ಮೋದಿ ಎಸ್ಟೇಟ್‌ ಬಳಿ ದೊರೆತ ವೀರ್ಯಗಳ ಆಧಾರದ ಮೇಲೆ 15 ವರ್ಷದ ಬಾಲಕನೇ ಅತ್ಯಾಚಾರ ನಡೆಸಿರುವುದು ಎಂದು ಅರಿತ ಪೊಲೀಸರು ಆತನ ಮೇಲೆ ವಿಚಾರಣೆ ನಡೆಸಿ ಬಂಧಿಸಿದ್ದಾರೆ. ಇನ್ನು, ಸೆಪ್ಟೆಂಬರ್ 30ರಂದು ತನ್ನ ತಂಗಿ ಮೇಲೆ ಅತ್ಯಾಚಾರ ನಡೆಸಿರುವುದು ತಾನೇ ಎಂದು ಆತ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೊಂದೆಡೆ, ಆತನ ಪೈಶಾಚಿಕ ಕೃತ್ಯ ಬಾಲಕಿಯ ಪೋಷಕರ ಗಮನಕ್ಕೆ ಬಂದರೂ, ಅವರು ಪೊಲೀಸರ ಹಾದಿ ತಪ್ಪಿಸಿ ಈ ಕೃತ್ಯವನ್ನು ಹೊರಗಿನವರೇ ಮಾಡಿದ್ದಾರೆ ಎಂದು ಆರೋಪಿಸಿರುವ ಅಂಶ ಸಹ ಬೆಳಕಿಗೆ ಬಂದಿದೆ. ಅವರ ಮನೆಯ ಬಳಿಯ ಪೊದೆಗಳ ಬಳಿಯಿಂದ ಬಟ್ಟೆಯ ತುಂಡು ಸಹ ದೊರೆತಿದ್ದು, ಅದರಿಂದ ಆತ ತನ್ನ ದೇಹದ ಮೇಲಿನ ರಕ್ತದ ಕಲೆ ಹಾಗೂ ಸಂತ್ರಸ್ಥೆ ಸಹೋದರಿಗಾದ ಗಾಯವನ್ನು ಒರೆಸಿದ್ದಾನೆ ಎನ್ನಲಾಗಿದೆ. ಸದ್ಯ, ಸಂತ್ರಸ್ಥೆಯ ಖಾಸಗಿ ಅಂಗಾಂಗಗಳಿಗೆ ಗಂಭೀರ ಗಾಯಗಳಾಗಿದ್ದು, ನ್ಯೂ ಸಿವಿಲ್ ಆಸ್ಪತ್ರೆ ( ಎನ್‌ಸಿಎಚ್‌)ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಆಕೆಯ ದೇಹದ ಮೇಲಾಗಿರುವ ಗಾಯಗಳು ಬೆಳಕಿಗೆ ಬರದಿದ್ದರೆ ಪೋಷಕರು ಆತನ ಕೃತ್ಯವನ್ನು ಗಮನಕ್ಕೆ ತರುತ್ತಿರಲಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಶನಿವಾರ ರಾತ್ರಿ 11 ಗಂಟೆಗೆ ಬಾಲಕ ಮನೆಗೆ ಬಂದಿದ್ದು, ಆ ವೇಳೆಗೆ ಅವರ ಪೋಷಕರು ಹಾಗೂ ಬಾಲಕಿ ಮಲಗಿದ್ದರು. ನಂತರ, ಆತ ಊಟ ಮಾಡುತ್ತಿದ್ದಾಗ ಎದ್ದು ಬಂದ ಸಂತ್ರಸ್ಥೆ ಶೌಚಕ್ಕೆ ಹೋಗಲು ಸಿದ್ಧವಾಗಿದ್ದಳು. ಅವರ ಗುಡಿಸಲಿನಲ್ಲಿ ಶೌಚಾಲಯ ಇರದ ಕಾರಣ ಮನೆಯ ಹೊರಗೆ ಆಕೆಯನ್ನು ಕರೆದುಕೊಂಡ ಹೋದ ನೀಚ ಸಹೋದರ ರಸ್ತೆ ದಾಟಿಸಿ ಅಲ್ಲಿದ್ದ ಪೊದೆಗಳ ಬಳಿ ಕರೆದುಕೊಂಡು ಹೋಗಿದ್ದಾನೆ ಎಂದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.

ನಂತರ, ”ಆಕೆಯ ಮೇಲೆ ಅತ್ಯಾಚಾರ ನಡೆಸಿದ ಬಾಲಕ ಅವಳನ್ನು ಅಲ್ಲೇ ಬಿಟ್ಟು ಆತ ಮನೆಗೆ ಹೋಗಿ ಮಲಗುತ್ತಾನೆ. ಕೆಲ ಹೊತ್ತಿನ ಬಳಿಕ ಅಳುತ್ತಾ ಬಂದ ಬಾಲಕಿ ನಡೆದಿದ್ದನ್ನು ಅವಳ ತಾಯಿಗೆ ಹೇಳಿದಾಗ ಆಕೆ ತನ್ನ ಪುತ್ರನ ಮೇಲೆ ಕೈ ಮಾಡಿದ್ದಾಳೆ. ಆದರೆ, ಪೊಲೀಸರಿಗೆ ಮಾಹಿತಿ ನೀಡದಿರಲು ನಿರ್ಧರಿಸಿದ ಪೋಷಕರು ಆ ರಾತ್ರಿಯಲ್ಲಿ ವೈದ್ಯಕೀಯ ಸಹಾಯವನ್ನು ಪಡೆಯಲಿಲ್ಲ. ನಂತರ, ಬಾಲಕಿ ನೋವಿನಿಂದ ನರಳುತ್ತಿದ್ದ ಹಿನ್ನೆಲೆ ಸೋಮವಾರ ಬೆಳಗ್ಗೆ ಆಸ್ಪತ್ರೆಗೆ ಹೋದಾಗ ವೈದ್ಯರು ಆಕೆಯ ಮೇಲೆ ಅತ್ಯಾಚಾರ ನಡೆದಿರುವುದನ್ನು ಪೊಲೀಸರ ಗಮನಕ್ಕೆ ತಂದರು” ಎಂದು ಪೊಲೀಸ್ ಅಧಿಕಾರಿ ಹೇಳಿದರು.

ಬಳಿಕ, ”ಕೃತ್ಯ ನಡೆದಿರಬಹುದಾದ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಹೊರಗಿನವರ ಕೃತ್ಯ ನಡೆದಿರುವ ಸಾಧ್ಯತೆ ಇಲ್ಲ ಎಂಬುದು ನನ್ನ ಗಮನಕ್ಕೆ ಬಂದಿದೆ. ನಂತರ, ಕುಟುಂಬ ಸದಸ್ಯರ ಮೇಲೆ ಗಮನವಿಡುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೆ” ಎಂದು ನಗರದ ಪೊಲೀಸ್ ಕಮೀಷನರ್ ಸತೀಶ್‌ ಶರ್ಮಾ ಮಾಹಿತಿ ನೀಡಿದ್ದಾರೆ. ಇನ್ನು, ಆರೋಪಿ ಬಾಲಕನನ್ನು ಕೋರ್ಟ್‌ಗೆ ಹಾಜರುಪಡಿಸಿದ ಬಳಿಕ ಆತನನ್ನು ರಿಮ್ಯಾಂಡ್‌ ಹೋಮ್‌ಗೆ ಕಳಿಸಲಾಗುವುದು. ಅಪ್ರಾಪ್ತ ವಯಸ್ಸಿನ ಬಾಲಕನಾಗಿರುವ ಆತ ಎರಡನೇ ತರಗತಿಯ ಬಳಿಕ ಓದುವುದನ್ನು ಬಿಟ್ಟಿದ್ದ. ಕೇವಲ ಗೆಳೆಯರ ಜತೆ ಹರಟೆ ಹೊಡೆಯುತ್ತಿದ್ದ. ಅವರ ಪೋಷಕರು ಕಾರ್ಮಿಕರಾಗಿದ್ದರು ಎಂದು ತಿಳಿದುಂದಿದೆ.

Comments are closed.