ಕರ್ನಾಟಕ

ಪೆಟ್ರೋಲ್‌, ಡೀಸೆಲ್ ವ್ಯಾಟ್‌ ಕಡಿಮೆ ಮಾಡುವುದು ಅಸಾಧ್ಯ: ಕುಮಾರಸ್ವಾಮಿ

Pinterest LinkedIn Tumblr


ಬೆಂಗಳೂರು: ಈಗಾಗಲೇ ರಾಜ್ಯದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್ ಮೇಲಿನ ಸೆಸ್‌ 2 ರೂಪಾಯಿಯಷ್ಟು ಇಳಿಕೆ ಮಾಡಿದ್ದೇವೆ, ಮತ್ತೆ 2.50 ರೂಪಾಯಿಯಷ್ಟು ವ್ಯಾಟ್‌ ಕಡಿಮೆ ಮಾಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಗುರುವಾರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ತೈಲ ಕಂಪನಿಗಳಿಂದ ಒಂದು ರೂಪಾಯಿ ಕಡಿತ ಹಾಗೂ ಕೇಂದ್ರ ಅಬಕಾರಿ ಸುಂಕ 1.50 ರೂ. ಕಡಿತ ಮಾಡುವುದಾಗಿ ಘೋಷಿಸಿದ ಬೆನ್ನಲ್ಲೇ ಸಿಎಂ ಈ ಸ್ಪಷ್ಟನೆ ನೀಡಿದ್ದಾರೆ.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದ ಸಿಎಂ ಈಗಲಾದರೂ ಕೇಂದ್ರ ಸರಕಾರಕ್ಕೆ ಜನರ ಕಷ್ಟ ಅರ್ಥವಾಯಿತಲ್ಲ ಎಂದರು.

ಕೇಂದ್ರ ಸರ್ಕಾರದಷ್ಟೇ ಪಾಲನ್ನು ರಾಜ್ಯ ಸರ್ಕಾರಗಳೂ ಕೂಡಾ (2.50 ರೂಪಾಯಿ ವ್ಯಾಟ್) ಕಡಿತ ಮಾಡಬೇಕು ಎಂದು ರಾಜ್ಯ ಸರ್ಕಾರಗಳಿಗೆ ಪತ್ರ ಬರೆದು ಮನವಿ ಮಾಡುವುದಾಗಿ ಜೇಟ್ಲಿ ಹೇಳಿದ್ದರು.

ಕೇಂದ್ರದಷ್ಟೇ ಪಾಲನ್ನು ರಾಜ್ಯ ಸರಕಾರ ಮಾಡಿದರೆ ಒಟ್ಟು ಪ್ರತಿ ಲೀಟರ್ ದರ 5 ರೂಪಾಯಿಯಷ್ಟು ಕಡಿತವಾಗುತ್ತಿತ್ತು.

2.50 ರೂಪಾಯಿ ಇಳಿಕೆಯಿಂದ ಕೇಂದ್ರ ಸರಕಾರಕ್ಕೆ ಒಂದು ವರ್ಷಕ್ಕೆ 21 ಸಾವಿರ ಕೋಟಿ ಹೊರೆ ಬೀಳಲಿದೆ ಎಂದು ಜೇಟ್ಲಿ ಹೇಳಿದರು.

Comments are closed.