ಕರಾವಳಿ

ಈ ಮರದ ಹೂವು ಮತ್ತು ಮರದ ಚಕ್ಕೆಯಲ್ಲಿದೆ ಔಷಧೀಯ ಗುಣ

Pinterest LinkedIn Tumblr

ಸುವಾಸಿತ ಸಂಪಿಗೆ ಹೂವನ್ನು ದೇವರಿಗೆ ಹಾಗೂ ಹೆಣ್ಣು ಮಕ್ಕಳು ತಲೆಗೆ ಮುಡಿಯಲು ಬಳಸುತ್ತಾರೆ ಇದರಲ್ಲಿ 2 ಬಗೆ ಕೆಂಡ ಸಂಪಿಗೆ ಮತ್ತು ಬಿಳಿ ಸಂಪಿಗೆ. ಸಂಪಿಗೆ ಹೂವು ಮತ್ತು ಮರದ ಚಕ್ಕೆ ಔಷಧೀಯ ಗುಣಗಳನ್ನು ಹೊಂದಿದೆ.

ಸಂಪಿಗೆ ಮರದ ಚಕ್ಕೆಯ ಕಷಾಯವನ್ನು ಮಾಡಿ ಅದಕ್ಕೆ ಜೇನುತುಪ್ಪ ಬೆರೆಸಿ ಸೇವಿಸಿದರೆ ಜ್ವರ ಕಡಿಮೆಯಾಗುತ್ತದೆ.

ಸಂಪಿಗೆಯ ಹೂಗಳನ್ನು ಕುದಿಯುವ ನೀರಿನಲ್ಲಿ ಹಾಕಿ ಮುಚ್ಚಿಡಬೇಕು ಅದು ತಣ್ಣಗಾದ ನಂತರ ನೀರನ್ನು ಸೇವಿಸಿದರೆ ಹೊಟ್ಟೆ ಉರಿ ಕಡಿಮೆಯಾಗುತ್ತದೆ.

ಸಂಪಿಗೆ ಮರದ ಎಲೆಗಳ ರಸವನ್ನು ಜೇನುತುಪ್ಪದ ಜೊತೆ ಸೇವಿಸಿದರೆ ಹೊಟ್ಟೆ ನೋವು ಕಡಿಮೆಯಾಗುತ್ತದೆ.

ಸಂಪಿಗೆ ಹೂವಿನಿಂದ ತಯಾರಿಸಿದ ಎಣ್ಣೆಯನ್ನು ತಲೆ ನೋವು ಮತ್ತು ದೇಹದಲ್ಲಾಗುವ ಗಂಟುಗಳ ನೋವಿಗೆ ಹಚ್ಚಿದರೆ ನೋವು ಕಡಿಮೆಯಾಗುತ್ತದೆ.

ಹೆಣ್ಣು ಮಕ್ಕಳ ಮುಟ್ಟಿನ ಸಮಯದ ಕಡಿಮೆ ರಕ್ತಸ್ರಾವ ಆಗುತ್ತಿದ್ದರೆ ಸಂಪಿಗೆ ಮರದ ಚಕ್ಕೆಯ ರಸಕ್ಕೆ ಜೀರಿಗೆ ಪುಡಿ ಮತ್ತು ಸಕ್ಕರೆ ಸೇರಿಸಿ ಸೇವಿಸಿದರೆ ರಕ್ತಸ್ರಾವ ಸರಿಯಾದ ಪ್ರಮಾಣದಲ್ಲಿ ಆಗುತ್ತದೆ.

ಸಂಪಿಗೆಯ ಹೂಗಳನ್ನು ಕುದಿಯುವ ನೀರಿನಲ್ಲಿ ಹಾಕಿ ಮುಚ್ಚಿಡಬೇಕು ಅದು ಆರಿದ ನಂತರ ಸೇವಿಸಿದರೆ ಕಟ್ಟಿಕೊಂಡಿರುವ ಮೂತ್ರ ಸಲೀಸಾಗಿ ಹೋಗುತ್ತದೆ.

ದೇಹದ ಯಾವುದಾದರು ಭಾಗದಲ್ಲಿ ದೊಡ್ಡ ಗಾಯವಾಗಿದ್ದರೆ ಸಂಪಿಗೆ ಮರದ ಚಕ್ಕೆಯ ಕಷಾಯದಿಂದ ಗಾಯವನ್ನು ತೊಳೆದರೆ ಗಾಯ ಬೇಗ ವಾಸಿಯಾಗುತ್ತದೆ.

ಪ್ರತಿ ದಿನ ಸಂಪಿಗೆ ಮರದ ಎಲೆಗಳನ್ನು ಬಿಸಿ ನೀರಲ್ಲಿ ಹಾಕಿ ಆ ನೀರಲ್ಲಿ ಕಾಲಿಟ್ಟುಕೊಳ್ಳಬೇಕು ನಂತರ ಸಂಪಿಗೆಯ ಮೊಗ್ಗು ಮತ್ತು ಬೀಜವನ್ನು ಅರೆದು ಹಿಮ್ಮಡಿಗೆ ಲೇಪಮಾಡುತ್ತಿದ್ದರೆ ಹಿಮ್ಮಡಿ ಒಡೆಯುವುದು ಕಡಿಮೆಯಾಗುತ್ತದೆ.

Comments are closed.