ಕರ್ನಾಟಕ

ಇಸ್ಕಾನ್ ಆಯೋಜಿಸಿದ್ದ ಭಗವದ್ಗೀತೆ ಕ್ವಿಜ್ ಸ್ಪರ್ಧೆ: ಪ್ರಶಸ್ತಿ ಪಡೆದ ಮುಸ್ಲಿಮ್‌ ಬಾಲಕ

Pinterest LinkedIn Tumblr


ಬೆಂಗಳೂರು: ಸಂಜಯನಗರದಲ್ಲಿ ಇಸ್ಕಾನ್ ಆಯೋಜಿಸಿದ್ದ ಭಗವದ್ಗೀತೆ ಕ್ವಿಜ್ ಸ್ಪರ್ಧೆಯಲ್ಲಿ ಮುಸ್ಲಿಮ್‌ ಬಾಲಕನೋರ್ವ ಪ್ರಶಸ್ತಿ ಪಡೆದಿದ್ದಾನೆ.

14 ಶಾಲೆಗಳಿಂದ ಸುಮಾರು 400 ಮಂದಿ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು, ಸುಭಾಷ್ ಮೆಮೋರಿಯಲ್ ಇಂಗ್ಲಿಷ್ ಸ್ಕೂಲ್‌ನ 9ನೇ ತರಗತಿ ವಿದ್ಯಾರ್ಥಿ, 14 ವರ್ಷದ ಶೇಖ್ ಮೊಹಿಯುದ್ದೀನ್ ಭಗವದ್ಗೀತೆಗೆ ಸಂಬಂಧಿಸಿದ ಎಲ್ಲ 41 ಬಹು ಆಯ್ಕೆಯ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿ ಮೊದಲ ಬಹುಮಾನ ಪಡೆದಿದ್ದಾನೆ.

ಪ್ಯಾಕೇಜಿಂಗ್ ಘಟಕ ನಡೆಸುತ್ತಿರುವ ಹೆಬ್ಬಾಳದ ಬಾಲಾಜಿ ಲೇಔಟ್‌ನ ಶೇಖ್‌ ಸಲಾಹುದ್ದೀನ್ ಮತ್ತು ಸಬಿಹಾ ಮಹಮ್ಮದ್ ಅವರ ಪುತ್ರನಾಗಿರುವ ಮೊಹಿಯುದ್ದೀನ್, 11 ವರ್ಷದವನಾಗಿದ್ದ ಸಂದರ್ಭದಲ್ಲಿ ಗೀತೆ ಮತ್ತು ಧಾರ್ಮಿಕ ವಿಚಾರಗಳ ಕುರಿತು ಜನರಲ್ ನಾಲೆಜ್‌ ಪುಸ್ತಕ ಓದಿ ತಿಳಿದುಕೊಂಡಿದ್ದ. ಮತ್ತು ಪಾಲಕರಲ್ಲಿ ಗೀತೆ ಕುರಿತಾದ ವಿವಿಧ ಪ್ರಶ್ನೆ ಕೇಳಿ ಸಂದೇಹ ಬಗೆಹರಿಸಿಕೊಳ್ಳುತ್ತಿದ್ದ.

ಈ ಸಂದರ್ಭದಲ್ಲಿ ಅವನಿಗೆ ತಾಯಿ ಭಗವದ್ಗೀತೆಯ ಪ್ರತಿ ತಂದುಕೊಟ್ಟಿದ್ದರು. ಆತನ ಅಜ್ಜಿ ಅಸಿಯಾ ಖಾನುಂ ಸಹಾಯದಿಂದ ಭಗವದ್ಗೀತೆ ಓದಿ ತಿಳಿದುಕೊಂಡಿದ್ದ ಮೊಹಿಯುದ್ದೀನ್ ಗೀತೆ ಕುರಿತ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದುಕೊಂಡಿರುವುದು ಸಂತಸ ತಂದಿದೆ ಎಂದು ಆತನ ಪಾಲಕರು ಹೇಳಿದ್ದಾರೆ.

Comments are closed.