ಕ್ರೀಡೆ

ಟಿ20 ಕ್ರಿಕೆಟ್: ಕನಿಷ್ಠ ರನ್ ಬಾರಿಸಿ ಚೀನಾ ಕಳಪೆ ವಿಶ್ವದಾಖಲೆ!

Pinterest LinkedIn Tumblr


ಬಂಗಿ(ಮಲೇಷ್ಯಾ): ಟಿ20 ಕ್ರಿಕೆಟ್ ಇತಿಹಾಸದಲ್ಲೇ ಕನಿಷ್ಠ ರನ್ ಬಾರಿಸುವ ಮೂಲಕ ಚೀನಾ ಕಳಪೆ ಮಟ್ಟದ ದಾಖಲೆಯನ್ನು ಮಾಡಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಯ ವಿಶ್ವ ಟಿ20 ಏಷ್ಯಾ ವಲಯದ ಕ್ವಾಲಿಫೈಯರ್ ಪಂದ್ಯದಲ್ಲಿ ಥಾಯ್ಲೆಂಡ್ ವಿರುದ್ಧ ಚೀನಾ ಒಟ್ಟಾರೆ 35 ರನ್ ಬಾರಿಸುವ ಮೂಲಕ ಕನಿಷ್ಟ ಮತ್ತ ದಾಖಲೆ ಮಾಡಿದೆ.
ಚೀನಾದ ಆಟಗಾರ ವಾಂಗ್ ಯಾ ಬಾರಿಸಿದ 8 ರನ್ ಪಂದ್ಯದಲ್ಲಿ ಚೀನಾ ಆಟಗಾರನೊಬ್ಬರ ಬಾರಿಸಿದ ಅತಿ ಹೆಚ್ಚು ರನ್ ಇದಾಗಿದೆ. 20 ಓವರ್ ಮುಕ್ತಾಯಕ್ಕೆ ಚೀನಾ 9 ವಿಕೆಟ್ ನಷ್ಟಕ್ಕೆ 35 ರನ್ ಗಳಿಸಿತ್ತು.
ಚೀನಾ ನೀಡಿದ ಅಲ್ಪ ಮೊತ್ತ 36 ರನ್ ಗಳ ಬೆನ್ನಟ್ಟಿದ ಥಾಯ್ಲೆಂಡ್ ಕೇವಲ 2.4 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಗುರಿ ತಲುಪಿ ಹತ್ತು ವಿಕೆಟ್ ಗಳ ಭರ್ಜರಿ ಜಯ ಗಳಿಸಿತು

Comments are closed.