ಕರಾವಳಿ

ದಸರಾ ಹಬ್ಬದ ಮುನ್ನ ಮಾಡಲೇ ಬೇಕಾದ ಈ ಏಳು ಕಾರ್ಯಗಳು

Pinterest LinkedIn Tumblr

ಇನ್ನೇನು ದಸರಾ ಹಬ್ಬ ಬರಲಿದೆ, ದುರ್ಗಾ ಪರಮೇಶ್ವರಿ ತಾಯಿ ದುಷ್ಟ ಸಂಹಾರ ಮಾಡುವ ದಿನವನ್ನು ದಸರಾ ಎಂದು ಆಚರಿಸಲಾಗುತ್ತದೆ ಹಾಗಾಗಿ ದಸರಾ ಹಬ್ಬದ ಮುನ್ನ ಈ ಏಳು ವಸ್ತುಗಳನ್ನು ಮನೆಯಿಂದ ಹೊರಹಾಕಬೇಕು, ಆ ವಸ್ತುಗಳು ಯಾವುದೆಂದು ಮುಂದೆ ತಿಳಿಸಲಾಗಿದೆ ಒಮ್ಮೆ ನೋಡಿ.

1) ಯಾವುದೇ ಬಿರುಕು ಬಿಟ್ಟಿರುವ ಅಥವಾ ಒಡೆದಿರುವ ದೇವರ ಮೂರ್ತಿಗಳನ್ನು ಮನೆಯಲ್ಲಿ ಇಡಬಾರದು, ಇದರಿಂದ ಆರ್ಥಿಕ ನಷ್ಟ ಉಂಟಾಗುತ್ತದೆ.

2) ನಿಮ್ಮ ಮನೆಯಲ್ಲಿ ಹಳೆಯ ಉಪಕರಣವಿದ್ದರೆ ಅದನ್ನು ಈಗಲೇ ತೆಗೆದುಹಾಕಿ, ಇಲ್ಲವಾದರೆ ನಕರಾತ್ಮಕ ಶಕ್ತಿಯ ತೊಂದರೆಗಳು ಕಾಣಿಸಿಕೊಳ್ಳುತ್ತದೆ.

3) ಮನೆಯಲ್ಲಿನ ಒಡೆದ ಅಥವಾ ಮುರಿದ ಕುರ್ಚಿ ಅಥವಾ ಟೇಬಲ್ ಇದ್ದರೆ ಹೊರ ಹಾಕುವುದು ಉತ್ತಮ.

4) ಯಾವುದೇ ಉಪಕರಣದ ಬಾಗಿಲನ್ನು ಉಪಯೋಗಿಸಿದ ಕೂಡಲೇ ಮುಚ್ಚಬೇಕು, ಇಲ್ಲವಾದರೆ ಮನೆಯಲ್ಲಿ ಹಣದ ನಷ್ಟ ಉಂಟಾಗುತ್ತದೆ.

5) ಮನೆಯಲ್ಲಿರುವ ಜೇಡರ ಬಲೆಗಳನ್ನು ಆದಷ್ಟು ಸ್ವಚ್ಛಗೊಳಿಸಬೇಕು, ಇಲ್ಲವಾದರೆ ಸಂಸಾರದಲ್ಲಿ ತೊಂದರೆ ಉಂಟಾಗಲಿದೆ.

6) ಬಾಡಿ ಹೋದ ಅಥವಾ ಒಣಗಿದ ಗಿಡಗಳನ್ನು ಮನೆಯಲ್ಲಿ ಇಡಬಾರದು, ಇದರಿಂದ ದುರ್ಗಾ ಪರಮೇಶ್ವರಿ ಕೋಪಗೊಳ್ಳುತ್ತಾರೆ.

7) ಹರಿದ ಪರ್ಸ್ ಅನ್ನು ಎಂದಿಗೂ ಉಪಯೋಗಿಸಬಾರದು, ಇದರಿಂದ ಮನುಷ್ಯನ ಆರ್ಥಿಕ ಪರಿಸ್ಥಿತಿಯಲ್ಲಿ ನಷ್ಟ ಉಂಟಾಗುತ್ತದೆ.

Comments are closed.