ಕರಾವಳಿ

ಕದ್ರಿ ಪಾರ್ಕ್‌ನಲ್ಲಿ ಹಣಕ್ಕಾಗಿ ಪೀಡಿಸುತ್ತಿದ್ದ ಇಬ್ಬರು ನಕಲಿ ಮಂಗಳ ಮುಖಿಯರ ಬಣ್ಣ ಬಯಲು : ವಿಡೀಯೋ ವೈರಲ್

Pinterest LinkedIn Tumblr

ಮಂಗಳೂರು: ಸಾರ್ವಜನಿಕರಲ್ಲಿ ಹಣಕ್ಕಾಗಿ ಪೀಡಿಸುತ್ತಿದ್ದ ಇಬ್ಬರು ನಕಲಿ ಮಂಗಳ ಮುಖಿಯರನ್ನು ಸಾಮಾಜಿಕ ಕಾರ್ಯಕರ್ತರೊಬ್ಬರು ಕಾರ್ಯಾಚರಣೆ ನಡೆಸಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಇದೀಗ ಈ ಪ್ರಕರಣ ಸಾಮಾಜಿಕ ಜಲತಾಣಗಗಳಲ್ಲಿ ವೈರಲ್ ಆಗಿದೆ.

ಮಂಗಳೂರಿನ ಕದ್ರಿ ಪಾರ್ಕ್ ಗೆ ಬರುವ ಪ್ರೇಮಿಗಳಲ್ಲಿ ಹಾಗೂ ಸಾರ್ವಜನಿಕರಿಂದ ಹಣಕ್ಕಾಗಿ ಪೀಡುಸುತ್ತಿದ್ದ ನಕಲಿ ಮಂಗಳಮುಖಿಯರನ್ನು ಸಾಮಾಜಿಕ ಕಾರ್ಯಕರ್ತ ಸೌರಾಜ್​ ಅವರು ಫೇಸ್‌ಬುಕ್‌ ಲೈವ್ ಮಾಡುತ್ತಲೇ ಬಯಲಿಗೆಳೆದಿದ್ದಾರೆ. ಹೊರರಾಜ್ಯದಿಂದ ಬಂದ ಯುವಕರು ಮಂಗಳಮುಖಿಯರ ವೇಷ ಧರಿಸಿ ಕದ್ರಿ ಪಾರ್ಕ್ ನಲ್ಲಿ ಇರುವುದನ್ನು ಕಂಡ ಸೌರಾಜ್​ ಸಾರ್ವಜನಿಕವಾಗಿ ನಕಲಿಗಳ ಬಣ್ಣವನ್ನು ಬಯಲು ಮಾಡಿದ್ದಾರೆ.

ಸೌರಜ್ ಮಂಗಳೂರು

ಮಂಗಳಮುಖಿಯರ ಮೇಲಿನ ಅನುಕಂಪದಿಂದ ಮಂಗಳಮುಖಿಯರು ಬಳಿ ಬಂದಾಗ ಸಾರ್ವಜನಿಕರು ಅವರಿಗೆ ಹಣವನ್ನು ನೀಡುವುದು ಸಾಮಾನ್ಯ. ಆದರೆ ಇದನ್ನು ದುರುಪಯೋಗ ಪಡಿಸಿಕೊಂಡು ಕೆಲವು ಯುವಕರು ಮಂಗಳಮುಖಿ ವೇಷ ಹಾಕಿಕೊಂಡು ಸಾರ್ವಜನಿಕರಿಗೆ ತೊಂದರೆ ಕೊಡುತ್ತಿರುವ ವಿಚಾರವನ್ನು ತಿಳಿದು ಮಂಗಳಮುಖಿಯರನ್ನು ಬೆನ್ನತ್ತಿದ್ದ ಸೌರಜ್ ಈ ನಕಲಿ ಮುಂಗಳ ಮುಖಿಯರ ಅಸಲಿಯತ್ತನ್ನು ಬಯಲು ಮಾಡಿದ್ದಾರೆ.

ಈ ಇಬ್ಬರು ತಲೆಗೆ ಬಣ್ಣ ಬಣ್ಣದ ವಿಗ್ ಹಾಗೂ ಟೋಪನ್ ಹಾಕಿ, ತಮ್ಮ ದೇಹವನ್ನು ಮಂಗಳಮುಖಿಯರಂತೆ ಕಾಣುವಂತೆ ವೇಷ ಧರಿಸಿ ಕದ್ರಿ ಪಾರ್ಕ್‌ನಲ್ಲಿ ಜನರನ್ನು ಸುಲಿಗೆ ಮಾಡುತ್ತಿದ್ದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಸೌರಜ್ ಕುಡಿದು ತೂರಾಡುತ್ತಾ ಜನರನ್ನು ಹಣಕ್ಕಾಗಿ ಪೀಡಿಸುತ್ತಿದ್ದ ಇಬ್ಬರು ನಕಲಿ ಮಂಗಳ ಮುಖಿಯರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಸೌರಜ್ ಪತ್ತೆ ಹಚ್ಚಿದ ಈ ನಕಲಿ ಮಂಗಳ ಮುಖಿಯರಲ್ಲಿ ಇಬ್ಬರು ಪುರುಷರಾಗಿದ್ದು, ಈ ಪೈಕಿ ಒಬ್ಬಾತನ ಹೆಸರು ಗೋಪಿ ಎಂದಾಗಿದೆ. ಮತ್ತೊಬ್ಬ ತಮ್ಮ ಸತ್ಯಾಂಶ ಬಯಲಾಗುತ್ತಿದ್ದಂತೆ ಅಲ್ಲಿಂದ ಪರಾರಿಯಾಗಿದ್ದಾನೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ನಕಲಿ ಮಂಗಳ ಮುಖಿಯರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

Comments are closed.