ಕರಾವಳಿ

ಬಿಜೈಯಲ್ಲಿ ಅಮೃತಾ ಉಚಿತ ಚಿಕಿತ್ಸಾ ಶಿಬಿರ – ಆರೋಗ್ಯ ಪೂರ್ಣ ಜೀವನಕ್ಕೆ ಆಯುರ್ವೇದ ಸೂಕ್ತ : ಡಾ.ದೇವದಾಸ್

Pinterest LinkedIn Tumblr

ಮಂಗಳೂರು, ಆಕ್ಟೋಬರ್.07 ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್ ಕದ್ರಿ ಹಿಲ್ಸ್, ಮಂಗಳೂರು ಮತ್ತು ಶ್ರೀ ರಾಮಕೃಷ್ಣ ಭಜನಾ ಮಂಡಳಿ , ಬಟ್ಟಗುಡ್ಡೆ ಇವರ ಆಶ್ರಯದಲ್ಲಿ ಮಂಗಳೂರಿನ ಮಾತಾ ಅಮೃತಾನಂದಮಯಿ ಮಠದ ವೈದ್ಯಕೀಯ ಸೇವಾ ಘಟಕದ ವತಿಯಿಂದ ಭಾನುವಾರ ನಗರದ ಬಿಜೈಯಲ್ಲಿ ಅಮೃತಾ ಉಚಿತ ಚಿಕಿತ್ಸಾ ಶಿಬಿರ ಜರುಗಿತು.

ಶಿಬಿರವನ್ನು ರಾಮಕೃಷ್ಣ ಭಜನಾ ಮಂಡಳಿಯ ಅಧ್ಯಕ್ಷರಾದ ಶ್ರೀ ಎಮ್.ಸುಕುಮಾರ್ ಸುವರ್ಣ ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು. ಕದ್ರಿ ಲಯನ್ಸ್ ಕ್ಲಬ್ ಇದರ ಅಧ್ಯಕ್ಷರಾದ ಲಯನ್ ಗೀತಾ ರೀತೇಶ್ ರಾವ್ ಅಧ್ಯಕ್ಷತೆ ವಹಿಸಿದ್ದರು. ತಜ್ಞ ವೈದ್ಯರಾದ ಡಾ.ಸುಚಿತ್ರಾ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಆಯುರ್ವೇದ ತಜ್ಞ ಡಾ.ದೇವದಾಸ್ ಈ ಸಂದರ್ಭದಲ್ಲಿ ಮಾತನಾಡಿ “ಆರೋಗ್ಯ ಪೂರ್ಣ ಜೀವನಕ್ಕಾಗಿ ಆಯುರ್ವೇದದಲ್ಲಿ ಸಹಸ್ರಾರು ವರ್ಷಗಳ ಹಿಂದೆಯೇ ತಿಳಿಸಿರುವಂತೆ ದಿನಚರ್ಯೆ, ಋತುಚರ್ಯೆ,ಸದ್ವೃತ್ತ, ಆಹಾರ ಸೇವನೆ ಹಾಗೂ ಪಥ್ಯಾಪಥ್ಯಗಳ ಮೂಲಕ ಆರೋಗ್ಯ ರಕ್ಷಣೆ ಮಾಡುವಂತೆ ಮಾಹಿತಿ ನೀಡಿದರು.

ಡಾ.ಜಗದೀಶ್ ಧನ್ಯವಾದ ಸಲ್ಲಿಸಿದರು. ಲಯನ್ ಎಮ್. ಸುಜಿತ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಲಯನ್ಸ್  ಮಾಜಿ ಅಧ್ಯಕ್ಷ ವಿಜಯ ಶೆಟ್ಟಿ, ಸುಮಿತ್ರಾ ಶೆಟ್ಟಿ, ರತ್ನಾಕರ್ ಪಿ,ರೇಮಂಡ್ ಮೊಂತೆರೋ,ಎನ್.ಟಿ.ರಾಜ್,ಗೋವಿಂದ ಶರ್ಮಾ, ಉಮಾನಾಥ್, ಸುಬ್ರಹ್ಮಣ್ಯ  ಭಟ್, ಮಂಜುನಾಥ್ ಉಪಸ್ಥಿತರಿದ್ದರು.

ಮಾತಾ ಅಮೃತಾನಂದಮಯಿ ಮಠದ ಸೇವಾರ್ಥಿಗಳಾದ ಸುಂದರ ಮೆಂಡನ್,ಪೂರ್ಣಿಮಾ, ಸತ್ಯರಾಜ್, ರೂಪಾ, ದಾಮೋದರ್ ಮೊದಲಾದವರು ಸೇವೆಗೈದರು. ಬಿಜೈ ಪರಿಸರದ ಸಾರ್ವಜನಿಕರು ಇದರ ಪ್ರಯೋಜನ ಪಡೆದರು.

Comments are closed.