ಮನೋರಂಜನೆ

ರಕ್ಷಿತ್​ ಶೆಟ್ಟಿ ಜೊತೆಗಿನ ಲವ್ ಬ್ರೇಕ್​ ಅಪ್​ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಹೇಳಿದ್ದೇನು ಗೊತ್ತೇ..?

Pinterest LinkedIn Tumblr

ಬೆಂಗಳೂರು: ಸ್ಯಾಂಡಲ್​ವುಡ್​ನ ಕ್ಯೂಟೆಸ್ಟ್​ ಜೋಡಿ ರಕ್ಷಿತ್​ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಬ್ರೇಕ್​ ಅಪ್​ ಸುದ್ದಿ ಹಳೆಯದ್ದೆ…ಆದರೆ, ಈ ಕುರಿತು ರಶ್ಮಿಕಾ ಮಂದಣ್ಣ ಮೊದಲ ಬಾರಿಗೆ ಮೌನ ಮುರಿದಿದ್ದು, ಬ್ರೇಕ್​ ಅಪ್​ಗೆ ಕಾರಣವೇನು ಎಂಬುದನ್ನು ತಿಳಿಸಿದ್ದಾರೆ.

ಹೌದು, ತೆಲುಗು ಮಾಧ್ಯಮದ ಸಂದರ್ಶನವೊಂದರಲ್ಲಿ ಲವ್​, ಎಂಗೇಜ್​ಮೆಂಟ್​ ಮತ್ತು ಬ್ರೇಕ್​ ಅಪ್​ ಬಗ್ಗೆ ಮುಕ್ತವಾಗಿ ಮಾತನಾಡಿರುವ ರಶ್ಮಿಕಾ, ಬ್ರೇಕ್​ ಅಪ್​ ಸುದ್ದಿಯನ್ನು ಖಚಿತಪಡಿಸಿದ್ದಾರೆ.

ಕಿರಿಕ್ ಪಾರ್ಟಿ ಶೂಟಿಂಗ್ ಸಮಯದಲ್ಲಿ ರಕ್ಷಿತ್ ಪರಿಚಯವಾಗಿತ್ತು. ಪರಿಚಯದ ನಂತರ ನಮ್ಮಿಬ್ಬರ ನಡುವೆ ಸ್ನೇಹವಾಯ್ತು. ಸ್ನೇಹ ಪ್ರೇಮಕ್ಕೆ ತಿರುಗಿತ್ತು. ಈ ವಿಷಯವನ್ನು ನನ್ನ ತಾಯಿ ಬಳಿ ಹೇಳಿದೆ. ನನ್ನ ತಾಯಿ ಕೂಡಾ ನನ್ನ ಪ್ರೀತಿಗೆ ಓಕೆ ಎಂದು, ನಿನ್ನ ಇಷ್ಟದಂತೆ ಇರು, ನಾವು ಅಡ್ಡ ಬರಲ್ಲ ಎಂದು ಹೇಳಿದ್ದರು. ಎಲ್ಲವು ಅಂದುಕೊಂಡಂತೆ ಸರಿಯಾಗೇ ನಡೆಯುತ್ತಿತ್ತು ಎಂದು ರಕ್ಷಿತ್​ ಜತೆಗಿನ ಪ್ರೇಮ ಮತ್ತು ಮದುವೆ ಪ್ರಸ್ತಾಪದ ಬಗ್ಗೆ ಹೇಳಿದ್ದಾರೆ.

ಮುಂದುವರಿದು, ನಿಶ್ಚಿತಾರ್ಥ ಆದ ನಂತರ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯಗಳು ಶುರುವಾದವು. ನಮ್ಮಿಬ್ಬರ ನಡುವೆ ತಪ್ಪು ಒಪ್ಪುಗಳು ಕಾಣಿಸಿದವು. ಹೀಗಾಗಿ ಮದುವೆಗೂ ಮುನ್ನ ಬ್ರೇಕಪ್ ನಿರ್ಣಯ ತೆಗೆದುಕೊಂಡೆವು. ಮನಸ್ತಾಪಗಳು ಚಿಕ್ಕದಾಗಿದ್ದಾಗಲೇ ಸಂಬಂಧ ಮುರಿದುಕೊಂಡಿದ್ದೇವೆ. ಸದ್ಯಕ್ಕೆ ನಾನು ಸಿನಿಮಾವನ್ನು ಮಾತ್ರ ಪ್ರೀತಿಸುತ್ತಿದ್ದೇನೆ ಎಂದಿದ್ದಾರೆ.

Comments are closed.