ರಾಷ್ಟ್ರೀಯ

ವಾರಾಣಸಿ: ಗೂಗಲ್‌ ಮೂಲಕ ನಿಮ್ಮ ಹತ್ತಿರದ ಟಾಯ್ಲೆಟ್ ಹುಡುಕಬಹುದು

Pinterest LinkedIn Tumblr


ವಾರಾಣಸಿ: ಹಿಂದೂಗಳ ಪವಿತ್ರ ಕ್ಷೇತ್ರವಾದ ವಾರಾಣಸಿಯಲ್ಲಿ ಇನ್ನು ಶೌಚಾಲಯ ಹುಡುಕುವುದು ಅತಿ ಸುಲಭ.

ಗೂಗಲ್‌ನಲ್ಲಿ ಸ್ವಚ್ಛ ಟಾಯ್ಲೆಟ್ ಎಂದು ಸರ್ಚ್‌ ಮಾಡಿದರೆ, ನೀವಿರುವ ಜಾಗಕ್ಕೆ ಹತ್ತಿರವಿರುವ ಶೌಚಾಲಯವನ್ನು ತೋರಿಸುತ್ತದೆ.
ದಿಲ್ಲಿ, ಮುಂಬಯಿ ಹಾಗೂ ಭೋಪಾಲ್‌ನಲ್ಲಿ ಈ ವ್ಯವಸ್ಥೆ ಈಗಾಗಲೇ ಜಾರಿಯಲ್ಲಿದ್ದು, ಇದೀಗ ಆಧುನಿಕ ತಂತ್ರಜ್ಞಾನದ ವ್ಯವಸ್ಥೆಯನ್ನು ವಾರಾಣಸಿಗೂ ವಿಸ್ತರಿಸಲಾಗಿದೆ.

ವಾರಾಣಸಿ ಮುನ್ಸಿಪಲ್‌ ಕಾರ್ಪೋರೇಷನ್‌ ಒಟ್ಟಾರೆ 235 ಶೌಚಾಲಯವನ್ನು ಆನ್‌ಲೈನ್‌ ತಂತ್ರಜ್ಞಾನದೊಂದಿಗೆ ಜೋಡಣೆ ಮಾಡಿರುವುದರಿಂದ ಪ್ರವಾಸಿಗರಿಗಿದ್ದ ಸಂಕಷ್ಟ ತಪ್ಪಿದೆ. ಯಾರೇ ಆದರೂ ಶೌಚಾಲಯಕ್ಕೆ ತೆರಳಲು ಗೂಗಲ್‌ನಲ್ಲಿ ಹುಡುಕಿ ತೆರಳುವಂತಹ ವ್ಯವಸ್ಥೆ ಮಾಡಲಾಗಿದೆ.

ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ವೇಳೆ ಶೌಚಾಲಯ ಹುಡುಕುವುದು ಅತ್ಯಂತ ಕಷ್ಟದ ಕೆಲಸ. ಇದಕ್ಕಾಗಿ ಶೌಚಾಲಯಗಳನ್ನು ಗೂಗಲ್‌ ಸರ್ಚ್‌ ಎಂಜಿನ್‌ಗೆ ಮಾಹಿತಿ ಸಿಕ್ಕುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಆಯುಕ್ತ ನಿತಿನ್‌ ಬನ್ಸಾಲ್‌ ಹೇಳಿದ್ದಾರೆ.

ಈ ಶೌಚಾಲಯಗಳಲ್ಲಿ ಅಭಿಪ್ರಾಯ ಸಂಗ್ರಹಣೆಯನ್ನೂ ಮಾಡಲಾಗುತ್ತದೆ. ಹಸಿರು (ಉತ್ತಮ), ಹಳದಿ (ಸಾಧಾರಣ), ಹಾಗೂ ಕೆಂಪು (ಅತ್ಯಂತ ಕೆಟ್ಟ) ಎಂದು ನಮೂದಿಸಲು ಅವಕಾಶ ಇದೆ ಎಂದು ಅವರು ಹೇಳಿದ್ದಾರೆ.

Comments are closed.