ಬೆಂಗಳೂರು: ಕಿಚ್ಚ ಸುದೀಪ್ ವೀರ ಮದಕರಿ ನಾಯಕನಾಗಿ ಮಿಂಚಲಿರೋದರ ಸುತ್ತ ನಾನಾ ಸುದ್ದಿಗಳು ಹರಿದಾಡಲಾರಂಭಿಸಿವೆ. ಸುದೀಪ್ ಅವರು ವೀರ ಮದಕರಿ ಚಿತ್ರವಾದ ನಂತರ ಮತ್ತೋರ್ವ ಕ್ರಾಂತಿಕಾರಿ ವೀರನೊಬ್ಬನ ಪಾತ್ರಕ್ಕೆ ಜೀವ ತುಂಬಲಿದ್ದಾರೆಂಬ ಮತ್ತೊಂದು ಸುದ್ದಿಯೂ ಇದೀಗ ಹಬ್ಬಿಕೊಂಡಿದೆ.
ವೀರಮದಕರಿಯ ಪಾತ್ರವನ್ನು ಸುದೀಪ್ ಅವರೇ ಮಾಡಬೇಕೆಂದು ನಾಯಕ ಸಮುದಾಯದ ಸ್ವಾಮೀಜಿಗಳು ಪಟ್ಟು ಹಿಡಿದಿದ್ದರು. ಇದೀಗ ಈ ಸಮುದಾಯದ ಗುರುಗಳಾದ ಪ್ರಸನ್ನಾನಂದ ಸ್ವಾಮೀಜಿ ಮತ್ತೊಂದು ಆಸೆಯನ್ನೂ ಹೊರ ಹಾಕಿದ್ದಾರೆ. ಸುದೀಪ್ ಅವರೇ ಮತ್ತೋರ್ವ ಸ್ವಾತಂತ್ರ್ಯ ವೀರ ವೀರ ಸಿಂಧೂರ ಲಕ್ಷ್ಮಣನ ಪಾತ್ರನ್ನೂ ನಿರ್ವಹಿಸಲಿ ಎಂಬ ಇಂಗಿತ ಪ್ರಸನ್ನಾನಂದರದ್ದು.
ಆ ಕಾಲಕ್ಕೆ ಮಹಾರಾಷ್ಟ್ರದ ಸಾಂಗ್ಲಿಯವನಾಗಿದ್ದ ವೀರ ಸಿಂಧೂರ ಲಕ್ಷ್ಮಣ ಕ್ರಾಂತಿ ಪಥದಲ್ಲಿಯೇ ಬ್ರಿಟಿಷರ ವಿರುದ್ಧ ಕತ್ತಿ ಝಳಪಿಸಿದ್ದವನು. ಕ್ರಾಂತಿಕಾರಿಯಾದ ವೀರ ಸಿಂಧೂರ ಲಕ್ಷ್ಮಣ ಈ ಮೂಲಕವೇ ಇತಿಹಾಸದ ಪುಟಗಳಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾನೆ.
ಇದು ಸುದೀಪ್ ಅವರ ಖದರಿಗೆ ಹೇಳಿ ಮಾಡಿಸಿದಂತಿರೋ ಪಾತ್ರ ಎಂಬುದರಲ್ಲಿ ಅನುಮಾನಗಳಿಲ್ಲ. ಆದರೆ ಇದಕ್ಕೆ ಅವರು ಒಪ್ಪಿಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
Comments are closed.