ಕರಾವಳಿ

ದೀಪೇಶ್ ನಾಯಕ್‌ರಿಗೆ ರೈಫಲ್ ಖರೀದಿಗೆ ಕೊಡಿಯಾಲ್ ಸ್ಫೋರ್ಟ್ ಅಸೋಸಿಯೇಶನ್‌ನಿಂದ ಲಕ್ಷಾಂತರ ರೂ.ಧನಸಹಾಯ

Pinterest LinkedIn Tumblr

ಮಂಗಳೂರು : ಅರ್ಥಿಕ ಸಮಸ್ಯೆಯಿಂದ ಕ್ರೀಡಾ ಪರಿಕರಗಳನ್ನು ಖರೀದಿಸಲು ಅಸಹಾಯಕಾರದ ರಾಷ್ಟ್ರೀಯ ಏರ್ ರೈಫಲ್ ಪಟು ದೀಪೇಶ್ ನಾಯಕ್ ಅವರಿಗೆ ಕೊಡಿಯಾಲ್ ಸ್ಫೋರ್ಟ್ ಅಸೋಸಿಯೇಶನ್‌ ವತಿಯಿಂದ ರೈಫಲ್ ಖರೀದಿಗೆ ಲಕ್ಷಾಂತರ ರೂ. ಧನಸಹಾಯ ಮಾಡಲಾಯಿತು.

ನವದೆಹಲಿಯಲ್ಲಿ ನವೆಂಬರ್ ನಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಹತ್ತು ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಭಾಗವಹಿಸಲು ಮಂಗಳೂರಿನ ಯುವಕ ದೀಪೇಶ್ ನಾಯಕ್ ಅವರಿಗೆ ಆಧುನಿಕ ರೈಫಲ್ ವಾಲ್ಟರ್ ಎಲ್ ಜಿ 400 ಅಲುಆಟೊಮೆಟಿಕ್ ರೈಫಲ್ ಅಗತ್ಯ ಇತ್ತು.

ಆರ್ಥಿಕ ಸಮಸ್ಯೆಯಿಂದ ದೀಪೇಶ್ ನಾಯಕ್ ಅವರಿಗೆ ಅದನ್ನು ಖರೀದಿಸುವುದು ಸಾಧ್ಯವಿರಲಿಲ್ಲ. ಪ್ರತಿಭಾವಂತ ಕ್ರೀಡಾಪಟುವಿನ ಈ ತೊಂದರೆಯನ್ನು ಮನಗಂಡ ಕೊಡಿಯಾಲ್ ಸ್ಫೋರ್ಟ್ ಅಸೋಸಿಯೇಶನ್, 2,26,560 ರೂಪಾಯಿ ಚೆಕ್ ನೀಡಿ ಪ್ರೋತ್ಸಾಹಿಸಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಡಿ ವೇದವ್ಯಾಸ ಕಾಮತ್ ಅವರು ಜಿಎಸ್ ಬಿ ಸಮುದಾಯದ ಪ್ರತಿಭಾವಂತ ಕ್ರೀಡಾಪಟುಗಳಿಗೆ ಯಾವುದೇ ರೀತಿಯ ಆರ್ಥಿಕ ಸಹಾಯದ ಅವಶ್ಯಕತೆ ಬಂದಾಗ ಕೊಡಿಯಾಲ್ ಸ್ಫೊರ್ಟ್ ಅಸೋಸಿಯೇಶನ್ ಸಹಾಯಕ್ಕೆ ಧಾವಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯ, ಇದರ ಎಲ್ಲಾ ಪದಾಧಿಕಾರಿಗಳಿಗೆ, ಕಾರ್ಯಕರ್ತರಿಗೆ ಇಂತಹ ಸಮಾಜಮುಖಿ ಕಾರ್ಯ ಮಾಡಲು ಹೆಚ್ಚೆಚ್ಚು ಪ್ರೋತ್ಸಾಹ ಸಿಗಲಿ ಎಂದರು.

ರಾಧಾಕೃಷ್ಣ ಭಗತ್ ಪುತ್ತೂರು, ಎಂ ವರದರಾಯ ಕಾಮತ್ , ನರೇಶ ಶೆಣೈ, ಶಿವಾನಂದ ಶೆಣೈ, ಮಂಜು ನಿರೇಶ್ವಾಲ್ಯ, ನರೇಶ್ ಪ್ರಭು, ಚೇತನ ಕಾಮತ್, ಸಂತೋಷ ಭಂಡಾರಿ, ಸಂಜಯ ಪೈ, ಪಾಂಡುರಂಗ ನಾಯಕ್, ಪ್ರಥ್ವೀಶ್ ಶೆಣೈ ಉಪಸ್ಥಿತರಿದ್ದರು.

ಎರಡು ಯಶಸ್ವಿ ಜಿಪಿಎಲ್ ಕ್ರಿಕೆಟ್ ಪಂದ್ಯಾಟದ ಬಳಿಕ ಮೂರನೇ ಋತುವಿನ ಕ್ರಿಕೆಟ್ ಟೂರ್ನಮೆಂಟ್ ಮುಂದಿನ ಫೆಬ್ರವರಿ 22, 23 ಮತ್ತು 24 ರಂದು ಅಡ್ಯಾರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಹುಲ್ಲುಹಾಸಿನ ಮೈದಾನದಲ್ಲಿ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

Comments are closed.