ಕರಾವಳಿ

ನಾಳೆ ಮಂಗಳೂರು ಪುರಭವನದಲ್ಲಿ ಕಾರಂತ ಹುಟ್ಟುಹಬ್ಬ ಆಚರಣೆ : ಕವಿ ಬಿ.ಎ. ಸನದಿ ಅವರಿಗೆ ಪ್ರಶಸ್ತಿ ಪ್ರದಾನ

Pinterest LinkedIn Tumblr

ಮಂಗಳೂರು, ಆಕ್ಟೋಬರ್.09 : ಜ್ಞಾನಪೀಠ ಪ್ರಶಸ್ತಿ ವಿಜೇತಕೋಟಕಾರಂತರ 116ನೇ ಹುಟ್ಟುಹಬ್ಬವನ್ನು‌ಅಕ್ಟೋಬರ್ 10ರಂದು ಮಂಗಳೂರು ಪುರಭವನದಲ್ಲಿ‌ಆಚರಿಸಲಾಗುವುದು. ದ.ಕ. ಜಿಲ್ಲಾಕನ್ನಡಸಾಹಿತ್ಯ ಪರಿಷತ್ತು ಹಾಗೂ ಕಲ್ಕೂರ ಪ್ರತಿಷ್ಠಾನದ‌ ಆಶ್ರಯಲ್ಲಿ ಜರಗಲಿರುವ ಈ ಸಮಾರಂಭವನ್ನು ಮಂಗಳೂರು ಮಹಾನಗರ ಪಾಲಿಕೆಯ ಮೇಯರ್‌ಕೆ. ಭಾಸ್ಕರ್ ಮೊಲಿ ಉದ್ಘಾಟಿಸುವರು.

ಸಂಜೆ 4ರಿಂದ ಸಮಾರಂಭ‌ಆರಂಭ ಗೊಳ್ಳಲಿದ್ದು ಪಂಪ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಬಿ.ಎ. ಸನದಿಯವರಿಗೆಕಾರಂತ ಪ್ರಶಸಿ’ ಪ್ರದಾನಮಾಡಲಾಗುವುದು.

ದ.ಕ. ಜಿಲ್ಲಾ‌ಉಸ್ತುವಾರಿ ಸಚಿವಯು. ಟಿ.ಖಾದರ್ ಪ್ರಶಸ್ತಿ ಪ್ರದಾನ ಮಾಡಲಿದ್ದು, ಕರ್ಣಾಟಕ ಬ್ಯಾಂಕ್‌ನ‌ ಅಧ್ಯಕ್ಷ  ಪಿ. ಜಯರಾಮ ಭಟ್ ಪುಷ್ಪ ನಮನ ಸಲ್ಲಿಸಲಿದ್ದಾರೆ. ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ‌ ಎಸ್. ಪ್ರದೀಪ ಕುಮಾರ ಕಲ್ಕೂರ‌ ಅಧ್ಯಕ್ಷತೆಯಲ್ಲಿ ಜರಗಲಿರುವ ಈ ಕಾರ್ಯಕ್ರಮದಲ್ಲಿ ಕಾರಂತರ ವಿಭಿನ್ನ ಮುಖಗಳ ಚಿಂತನೆಯನ್ನು ಹಿರಿಯ ಸಾಹಿತಿ ಹಾಗೂ ವಿಮರ್ಶಕಡಾ. ಪ್ರಭಾಕರ ಶಿಶಿಲ ನಡೆಸಲಿದ್ದಾರೆ. ಶಾಸಕ ವೇದ ವ್ಯಾಸ ಕಾಮತ್‌ ಕಾರ್ಡಿನಲ್ಲಿ ಕಾರಂತರ ಚಿತ್ರ ರಚನಾ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸುವರು. ಕರ್ನಾಟಕ ಬ್ಯಾರಿ ಸಾಹಿತ್ಯ‌ಅಕಾಡೆಮಿಯ ಮಾಜಿ‌ಅಧ್ಯಕ್ಷ ಮಹಮ್ಮದ್ ಹನೀಫ್ ಪ್ರಬಂಧ ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡುವರು.

ಅಬ್ಯಾಗತರಾಗಿ ಧರ್ಮದರ್ಶಿ ಹರಿಕೃಷ್ಣ ಪುನರೂರು, ಪ್ರೊ| ಎಂ. ಬಿ. ಪುರಾಣಿಕ್, ಜಿಲ್ಲಾ ವಾರ್ತಾಧಿಕಾರಿ ಶ್ರೀಮತಿ ರೋಹಿಣಿ ,ಕನ್ನಡ ಸಂಸ್ಕೃತಿ‌ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ., ರತ್ನಾಕರ ಜೈನ್, ದಿವಾಣ ಗೋವಿಂದ ಭಟ್ ಭಾಗವಹಿಸಲಿದ್ದಾರೆ.

ಕಲ್ಕೂರ ಸಾಧನಾ ಪ್ರಶಸ್ತಿ ಪ್ರದಾನ:

ಧರ್ಮಾಸ್ಥಳ ಶಾಂತಿವನಟ್ರಸ್ಟ್‌ನ ಕಾರ್ಯದರ್ಶಿ ಸೀತಾರಾಮ ತೋಳ್ಪಾಡಿತ್ತಾಯವರಿಗೆ ಜೀವಮಾನ ಸಾಧನೆಗಾಗಿ ‘ಕಲ್ಕೂರ ಸಾಧನಾ ಪ್ರಶಸ್ತಿ’ ನೀಡಿಗೌರವಿಸಲಾಗುವುದು.

ಕನ್ನಡ ಸಂಸ್ಕೃತಿ‌ಇಲಾಖೆಯ ಹಿರಿಯ ಸಿಬ್ಬಂದಿ ಪ್ರಭಾಕರ್, ಅಧ್ಯಾಪಕ ಪದ್ಮನಾಭ ಭಟ್, ಸಮಾಜ ಸೇವಕ ತಾರಾನಾಥ ಹೊಳ್ಳ, ಚಿತ್ರಕಲಾ ಶಿಕ್ಷಕ ತಾರಾನಾಥ ಕೈರಂಗಳ ಅವರಿಗೆ ‘ಕಲ್ಕೂರ ಸೇವಾ ಪ್ರಶಸ್ತಿ‘, ರಾಷ್ಟ್ರೀಯ ಮಟ್ಟದಲ್ಲಿ ಮಿಂಚಿರುವತಬ್ಲಾ ವಾದಕ ಮಾ| ವಿಜಿತ್ ಕೆ. ಹಾಗೂ ರಾಷ್ಟ್ರೀಯ ಮಟ್ಟದಚೆಸ್ ಸ್ಪರ್ಧೆಯಲ್ಲಿ ಗುರುತಿಸಿಕೊಂಡಿರುವ ವಿಶೇಷ ಚೇತನ ವಿದ್ಯಾರ್ಥಿನಿ ಅವರಿಗೆ ‘ಕಲ್ಕೂರ ಯುವ ಪ್ರಶಸ್ತಿ’ ಅಲ್ಲದೆ ವಿಶೇಷವಾಗಿ ಕನ್ನಡ ಚಿತ್ರರಂಗದಲ್ಲಿ ಕನ್ನಡ ಜಾಗೃತಿ ಮೂಡಿಸಿರುವ ಹಾಗೂ ಪ್ರೇಕ್ಷಕ ವರ್ಗದಲ್ಲಿ ಸಂಚಲನ ಉಂಟು ಮಾಡಿರುವ‌ ಅಪರೂಪದ ಸಿನಿಮಾ ಸರ್ಕಾರಿ ಹಿ. ಪ್ರಾ. ಶಾಲೆ ಕಾಸರಗೊಡು ,ಇದರ ಬಾಲನಟರಾದ ರಂಜನ್ ಸಾಜು, ಸಂಪತ್‌ ಗಣೇಶ್, ಅತೀಶ್‌ ಎಸ್. ಶೆಟ್ಟಿ, ಸಪ್ತ ಕಾವೂರು, ಪ್ರಕೃತಿ ಡಿ. ಅಮೀನ್‌ಅವರಿಗೆ ‘ಕಾರಂತ ಹುಟ್ಟುಹಬ್ಬ ಸಾಧನಾ ಪ್ರಶಸ್ತಿ ನೀಡಿ‌ ಅಭಿನಂದಿಸಲಾಗುವುದು.

ಸಭಾಕಾರ್ಯಕ್ರಮಕ್ಕಿಂತ ಮುಂಚಿತವಾಗಿ ಸರಕಾರಿ ಪ್ರಥಮದರ್ಜೆ ಕಾಲೇಜು‌ ಉಪ್ಪಿನಂಗಡಿ ಹಾಗೂ ಶಾರದಾ ವಿದ್ಯಾಲಯ ಮಂಗಳೂರು ಇಲ್ಲಿನ ವಿದ್ಯಾರ್ಥಿಗಳಿಂದ ಭಾವಗೀತೆ ಹಾಗೂ ವಿವಿಧ ಮಹಿಳಾ ಮಂಡಳಿಗಳಿಂದ ಗೀತಾ ಗಾಯನ ಕಾರ್ಯಕ್ರಮ ನಡೆಯಲಿದ್ದು, ಸಭಾಕಾರ್ಯಕ್ರಮದ ಬಳಿಕ ಶಶಿಕಾಂತ ಶೆಟ್ಟಿನೇತೃತ್ವದ ಶ್ರೀ ದೇವಿ ಲಲಿತಕಲಾ ವೃಂದ ಕಾರ್ಕಳ ಇವರಿಂದ ಶಶಿಪ್ರಭಾ ಪರಿಣಯ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿರುವುದೆಂದು ದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನ‌ ಅಧ್ಯಕ್ಷರಾದ‌ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಈ ಹಿಂದೆಕಾರಂತ ಪ್ರಶಸ್ತಿ ಪಡೆದವರು:

2003 ಬಿ.ಎಂ.ಇದಿನಬ್ಬ *2006 ಸದಾನಂದ ಸುವರ್ಣ * 2010 ಡಾ. ಅಮೃತ ಸೋಮೇಶ್ವರ* 2011 ಮಾಸ್ಟರ್ ವಿಠಲ್ * 2012 ಡಾ. ಎನ್.ಎ. ಮಧ್ಯಸ್ಥ * 2013 ನಾ. ಡಿಸೋಜಾ * 2014 ಪ್ರೊ. ಅಮೃತ ಸೋಮೇಶ್ವರ ದಂಪತಿಗಳು * 2015 ಏರ್ಯಲಕ್ಷ್ಮೀ ನಾರಾಯಣ ಆಳ್ವ * 2016 ಡಾ. ಲೀಲಾ ಉಪಾಧ್ಯಾಯ * 2017 ಪ್ರೊ| ಕೆ.ಎಸ್. ನಿಸಾರ್‌ಅಹಮ್ಮದ್.

Comments are closed.