ರಾಷ್ಟ್ರೀಯ

ರೈತರ ಒಂದು ಪೈಸೆಯನ್ನೂ ಮನ್ನಾ ಮಾಡಿಲ್ಲ: ಮೋದಿ ವಿರುದ್ಧ ರಾಹುಲ್

Pinterest LinkedIn Tumblr


ಜೈಪುರ: ರೈತರ ಸಾಲಮನ್ನಾ ವಿಚಾರವಾಗಿ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಮತ್ತೊಮ್ಮೆ ಪ್ರಧಾನಿ ಮೋದಿ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ರಾಜಸ್ಥಾನದ ದೌಲ್​ಪುರದಲ್ಲಿ ನಡೆದ ಸಮಾವೇಶವೊಂದರಲ್ಲಿ ಮಾತನಾಡಿದ ರಾಹುಲ್​ ಗಾಂಧಿ, ಪ್ರಧಾನಿ ಮೋದಿಯನ್ನು ಆರೋಪಿಸುತ್ತಾ ‘ಅವರು ಹಲವಾರು ಭರವಸೆಗಳನ್ನು ನೀಡಿದ್ದಾರೆ. ಆದರೆ ಈವರೆಗೂ ರೈತರು ಮಾಡಿರುವ ಸಾಲದಲ್ಲಿ ಒಂದು ಪೈಸೆಯನ್ನೂ ಮನ್ನಾ ಮಾಡಿಲ್ಲ’ ಎಂದಿದ್ದಾರೆ.

ರಾಜಸ್ಥಾನದಲ್ಲಿ ಕಾಂಗ್ರೆಸ್​ ಪಕ್ಷದ ಪ್ರಚಾರ ನಡೆಸುತ್ತಾ ಮಾತನಾಡಿದ ರಾಹುಲ್​ ಗಾಂಧಿ “ಪ್ರಧಾನಿ ಮೋದಿ ರೈತರು ಮಾಡಿದ್ದ ಸಾಲದಲ್ಲಿ ಒಂದು ಪೈಸೆಯನ್ನೂ ಮನ್ನಾ ಮಾಡಿಲ್ಲ. ವಿಪಕ್ಷಗಳು ಮನ್ನಾ ಮಾಡಿ ಎಂದು ಮನವಿ ಮಾಡಿಕೊಂಡಾಗ ಒಂದು ಮಾತನ್ನೂ ಆಡಿಲ್ಲ” ಎಂದಿದ್ದಾರೆ.

ರಾಜಸ್ಥಾನ ಸಿಎಂ ವಸುಂಧರಾ ರಾಜೆಯನ್ನು ಗುರಿಯಾಗಿಸಿಕೊಂಡು ಮಾತನಾಡಿದ ಕಾಂಗ್ರೆಸ್​ ಅಧ್ಯಕ್ಷ ರಾಹುಲ್ ಗಾಂಧಿ “ಚುನಾವಣೆಗೂ ಒಂದು ತಿಂಗಳ ಮೊದಲು ರಾಜೆಯವರು ರೈತರಿಗೆ ಉಚಿತ ವಿದ್ಯುತ್​ ನೀಡುತ್ತೇವೆಂಬ ಭರವಸೆ ನೀಡಿದ್ದರು. ಆದರೆ ಕಳೆದ ನಾಲ್ಕೂವರೆ ವರ್ಷಗಳಿಂದ ಅವರೇನು ಮಾಡುತ್ತಿದ್ದಾರೆ ನಾನು ಕೇಳಲಿಚ್ಛಿಸುತ್ತೇನೆ” ಎಂದಿದ್ದಾರೆ.

ರಾಜಸ್ಥಾನದಲ್ಲಿ ಗೆಲುವು ಸಾಧಿಸಲು ಕಾರ್ಯಕರ್ತರಿಗೆ ಸಲಹೆಗಳನ್ನು ನೀಡಿದ ‘ರಾಗಾ’

ಕಾರ್ಯಕರ್ತರಿಗೆ ಸಲಹೆ ನೀಡಿದ ರಾಹುಲ್ ಗಾಂಧಿ “ಕಳೆದ ಬಾರಿ ಮಂತ್ರಿಗಳು ಕಾರ್ಯಕರ್ತರು ಮಾಡಿದ್ದ ಮನವಿಗಳಿಗೆ ಸ್ಪಂದಿಸಿರಲಿಲ್ಲ ಎಂಬ ವಿಚಾರ ನನಗೆ ತಿಳಿದಿದೆ. ಆದರೆ ಈ ಬಾರಿ ಮುಖ್ಯಮಂತ್ರಿ ಹಾಗೂ ಮಂತ್ರಿಗಳ ಬಾಗಿಲು ಜನಸಾಮಾನ್ಯರಿಗೂ ತೆರೆದಿರುತ್ತವೆ ಎಂಬ ಭರವಸೆ ನಾನು ನೀಡುತ್ತೇನೆ. ಪಕ್ಷವು ಜಯ ಸಾಧಿಸಲು ಒಗ್ಗಟ್ಟಿನಿಂದ ಶ್ರಮಿಸುತ್ತಿದೆ” ಎಂದಿದ್ದಾರೆ.

200 ಸದಸ್ಯರಿರುವ ರಾಜಸ್ಥಾನ ವಿಧಾನಸಭಾ ಚುನಾವಣೆಯು ಸಪ್ಟೆಂಬರ್​ 7 ರಂದು ನಡೆಯಲಿದೆ. ಒಂದು ಹಂತದಲ್ಲಿ ನಡೆಯುವ ಈ ಚುನಾವಣೆಯಲ್ಲಿ ಈಗಾಗಲೇ ಅಧಿಕಾರದಲ್ಲಿರುವ ಬಿಜೆಪಿ ಹಾಗೂ ವಿಪಕ್ಷಗಳ ನಡುವೆ ತೀವ್ರ ಪೈಪೋಟಿ ನಡೆಯಲಿದೆ.

Comments are closed.