ಅಂತರಾಷ್ಟ್ರೀಯ

ಭಾರತ ಮೂಲದ ನಿಕ್ಕಿ ಹ್ಯಾಲೆ ಅಮೆರಿಕಾ ರಾಯಭಾರಿ ಸ್ಥಾನಕ್ಕೆ ರಾಜೀನಾಮೆ

Pinterest LinkedIn Tumblr


ವಾಷಿಂಗ್ಟನ್​: ವಿಶ್ವಸಂಸ್ಥೆಯಲ್ಲಿ ಅಮೆರಿಕಾದ ರಾಯಭಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ನಿಕ್ಕಿ ಹ್ಯಾಲೆ ಮಂಗಳವಾರದಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅತ್ತ ಅಮೆರಿಕಾ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಕೂಡಾ ಅವರ ರಾಜೀನಾಮೆಯನ್ನು ಸ್ವೀಕರಿಸಿದ್ದಾರೆ. ಡೊನಾಲ್ಡ್​ ಟ್ರಂಪ್​ರವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ನಿಕ್ಕಿಯವರು ರಾಜೀನಾಮೆ ನೀಡಲು ಕಾರಣವೇನು ಎಂಬುವುದು ಇನ್ನೂ ತಿಳಿದು ಬಂದಿಲ್ಲ.

ಈ ಕುರಿತಾಗಿ ANI ಟ್ವೀಟ್​ ಒಂದನ್ನು ಮಾಡಿದ್ದು, ‘ವಿಶ್ವಸಂಸ್ಥೆಯಲ್ಲಿ ಅಮೆರಿಕಾದ ರಾಯಭಾರಿಯಾಗಿದ್ದ ನಿಕ್ಕಿ ಹ್ಯಾಲೆ 2020ರ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಬದಲಾಗಿ ಡೊನಾಲ್ಡ್​ ಟ್ರಂಪ್​ ಪರವಾಗಿ ಪ್ರಚಾರ ಕಾರ್ಯ ನಡೆಸಲಿದ್ದಾರೆ” ಎಂದು ಬರೆದುಕೊಂಡಿದೆ.

ಭಾರತೀಯ ಮೂಲಕ ನಿಕ್ಕಿ ಹ್ಯಾಲೆಯವರ ರಾಜೀನಾಮೆ ಸುದ್ದಿಯು ಟ್ರಂಪ್​ರವರ ಟ್ವೀಟ್​ ಒಂದರ ಬಳಿಕ ಕೆಳಿ ಬಂದಿದೆ. ಟ್ರಂಪ್​ರವರು ನಾಳೆ ಬೆಳಿಗ್ಗೆ 10:30ಕ್ಕೆ ಸರಿಯಾಗಿ ಓವಲ್​ ಆಫಿಸ್​ನಲ್ಲಿ ನಿಕ್ಕಿ ಹ್ಯಾಲೆಯವರೊಂದಿಗೆ ಬಹುದೊಡ್ಡ ಘೋಷಣೆ ಮಾಡುತ್ತಿರುವುದಾಗಿ ಟ್ವೀಟ್​ ಮಾಡಿದ್ದರು.

ರಾಯ್ಟರ್ಸ್​ ಅನ್ವಯ ನಿಕ್ಕಿಯವರ ರಾಜೀಮೆ ಬಳಿಕ ಮತ್ತೊಂದು ಟ್ವೀಟ್​ ಮಾಡಿದ್ದ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಹ್ಯಾಲೆ ಅದ್ಭುತವಾಗಿ ಕಾರ್ಯ ನಿರ್ವಹಿಸಿದ್ದಾರೆ. ಅವರು ವರ್ಷದ ಕೊಮನೆಯಲ್ಲಿ ತಮ್ಮ ಕೆಲಸಕ್ಕೆ ವಿದಾಯ ಹೇಳುತ್ತಿದ್ದಾರೆ. ಈ ಮೂಲಕ ಕೊಂಚ ಬಿಡುವು ತೆಗೆದುಕೊಳ್ಳಲು ಬಯಸಿದ್ದಾರೆ” ಎಂದಿದ್ದಾರೆ.

ನಿಕ್ಕಿ ಹ್ಯಾಲೆ ಅಮೆರಿಕಾದ ಸಿಖ್​ ಕುಟುಂಬದವರಾಗಿದ್ದಾರೆ. ಈ ಕುಟುಂಬವು ಮೂಲತಃ ಅಂಬಾಲಾದಲ್ಲಿ ನೆಲೆಸಿದ್ದು, ಬಳಿಕ ಅಮೆರಿಕಾಗೆ ತೆರಳಿತ್ತು. ನಿಕ್ಕಿಯವರು ಈ ಹಿಂದೆ ದಕ್ಷಿಣ ಕರೋಲಿನಾದ 116ನೇ ರಾಜ್ಯಪಾಲೆ ಹುದ್ದೆಯನ್ನು ಅಲಂಕರಿಸಿದ್ದರು. ಈ ಮೂಲಕ ಆ ಹುದ್ದೆಗೇರಿದ್ದ ಎರಡನೇ ಇಂಡೋ ಅಮೆರಿಕನ್ ಎನಿಸಿಕೊಂಡಿದ್ದರು.

ನಿಕ್ಕಿಯವರನ್ನು ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ರವರ ಆಪ್ತ ಸಲಹೆಗಾರರಲ್ಲಿ ಗುರುತಿಸಲಾಗುತ್ತದೆ. ಕೆಲ ವರ್ಷಗಳ ಹಿಂದೆ ನಿಕ್ಕಿ ಹಾಗೂ ಡೊನಾಲ್ಡ್​ ಟ್ರಂಪ್​ರವರ ನಡುವೆ ಸಂಬಂಧವಿದೆ ಎಂಬ ವಿಚಾರವೂ ಸದ್ದು ಮಾಡಿತ್ತು. ಆಗ ನಿಕ್ಕಿಯವರು ಈ ಕುರಿತಾಗಿ ಸ್ಪಷ್ಟನೆಯನ್ನೂ ನೀಡಿದ್ದರು.

ಅಮೆರಿಕಾದ ರಾಯಭಾರಿಯಾಗಿದ್ದ ಸಂದರ್ಭದಲ್ಲಿ ನಿಕ್ಕಿ ಹ್ಯಾಲೆಯವರು ಭಯೋತ್ಪಾದನೆ ವಿಚಾರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನಕ್ಕೆ ಹಲವಾರು ಬಾರಿ ಎಚ್ಚರಿಕೆ ನೀಡಿದ್ದರು ಎಂಬುವುದು ಗಮನಾರ್ಹ.

Comments are closed.