ರಾಷ್ಟ್ರೀಯ

ಐಷಾರಾಮಿ ಜೀವನ, ತಮ್ಮ ಗರ್ಲ್‌ಫ್ರೆಂಡ್‌ಗಳ ಬೇಡಿಕೆಗಾಗಿ ವಿದ್ಯಾರ್ಥಿಗಳಿಂದ ಬೈಕ್ ಕಳ್ಳತನ

Pinterest LinkedIn Tumblr


ವಾರಾಣಸಿ: ಐಷಾರಾಮಿ ಜೀವನ ಹಾಗೂ ತಮ್ಮ ಗರ್ಲ್‌ಫ್ರೆಂಡ್‌ಗಳ ಬೇಡಿಕೆಗಳನ್ನು ಪೂರೈಸಲು ದ್ವಿತೀಯ ಪಿಯುಸಿ ಹಾಗೂ ಬಿಎಸ್ಸಿ ಪದವಿ ಕಲಿಯುತ್ತಿರುವ ವಿದ್ಯಾರ್ಥಿಗಳು ಬೈಕ್‌ ಕಳ್ಳತನ ಮಾಡುವ ದಾರಿ ಹಿಡಿದಿದ್ದಾರೆ. ಒಟ್ಟಾರೆ ಈವರೆಗೆ 110 ಬೈಕ್‌ಗಳನ್ನು ಕದ್ದಿರುವ ಯುವಕರು, ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಈ ವರೆಗೆ 19 ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ವಾರಾಣಸಿಯ ಯುಪಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ. ನಗರದಲ್ಲಿ ಬೈಕ್‌ ಕಳವಿನ ಬಗ್ಗೆ ತನಿಖೆ ಆರಂಭಿಸಿದ್ದ ಅಪರಾಧ ದಳದ ಪೊಲೀಸರು, ಬೈಕ್‌ ಕಳವಾದ ಜಾಗದ ವಿವಿಧ ಭಾಗದ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದಿದ್ದಾರೆ. ಈ ವೇಳೆ 18-22 ವರ್ಷದೊಳಗಿನ ಮಕ್ಕಳು ಬೈಕ್‌ ಕಳ್ಳತನ ಮಾಡುತ್ತಿರುವುದು ಪೊಲೀಸರಿಗೆ ಗೊತ್ತಾಗಿದೆ. ಈ ಸಂಬಂಧ ಕಾರ್ಯಾಚರಣೆಗೆ ಇಳಿದ ಪೊಲೀಸರು ಶಿವ್‌ಪುರದಿಂದ ನಾಲ್ವರನ್ನು ಬಂಧಿಸಿದ್ದು, ಉಳಿದವರಿಗಾಗಿ ಕಾರ್ಯಾಚರಣೆ ಮುಂದುವರೆಸಿದ್ದಾರೆ.

ಯುಪಿ ಕಾಲೇಜು ಹಾಸ್ಟೆಲ್‌ನಲ್ಲಿರುವ ನಾಲ್ವರು, ಮನೆಯಲ್ಲಿ ಪ್ರತಿ ತಿಂಗಳು 10 ಸಾವಿರ ರೂ. ಪಾಕೆಟ್‌ ಮನಿ ಎಂದು ಕೊಡುತ್ತಾರೆ. ಆದರೆ ದಿಲ್ಲಿ, ಮುಂಬಯಿಗೆ ಪ್ರವಾಸ, ಏರ್‌ ಟಿಕೆಟ್‌ಗೆ ಈ ಹಣ ಸಾಲುವುದಿಲ್ಲ. ಹೀಗಾಗಿ ಬೈಕ್‌ ಕಳವು ಮಾಡಿ ಹಣ ಸಂಪಾದಿಸುತ್ತಿದ್ದರು ಎಂದು ಹೇಳಿಕೆ ನೀಡಿದ್ದಾರೆ.

Comments are closed.