ರಾಷ್ಟ್ರೀಯ

ಪುರಿ ಜಗನ್ನಾಥ ದೇವಾಲಯದೊಳಗೆ ಶಸ್ತ್ರ, ಶೂ ಧರಿಸಿದ ಪೊಲೀಸರಿಗೆ ಪ್ರವೇಶವಿಲ್ಲ: ಸುಪ್ರೀಂ

Pinterest LinkedIn Tumblr


ನವದೆಹಲಿ: 12 ನೇ ಶತಮಾನದ ಪುರಿ ಜಗನ್ನಾಥ ದೇವಾಲಯದೊಳಕ್ಕೆ ಶಸ್ತ್ರ ಮತ್ತು ಬೂಟುಗಳ ಮೂಲಕ ಪೋಲಿಸರು ಪ್ರವೇಶಿಸದಂತೆ ಸುಪ್ರೀಂಕೋರ್ಟ್ ಬುಧುವಾರದಂದು ಆದೇಶಿಸಿದೆ.

ನ್ಯಾಯಮೂರ್ತಿ ಮದನ್.ಬಿ ಲೋಕೂರ್ ಮತ್ತು ಜಸ್ಟಿಸ್ ದೀಪಕ್ ಗುಪ್ತಾ ಅವರನ್ನೊಳಗೊಂಡ ಪೀಠವು ಪೊಲೀಸರು ಸಶಸ್ತ್ರ ಮತ್ತು ಬೂಟುಗಳನ್ನು ಧರಿಸಿ ದೇವಾಲಯಕ್ಕೆ ಪ್ರವೇಶಿಸಬಾರದು ಎಂದು ತೀರ್ಪು ನೀಡಿದೆ. ಅಲ್ಲದೆ ಒಡಿಶಾ ಸರ್ಕಾರವು ಎರಡು ವಾರಗಳಲ್ಲಿ ಈ ಕುರಿತಾಗಿ ವರದಿ ಸಲ್ಲಿಸುವಂತೆ ಸುಪ್ರಿಂಕೋರ್ಟ್ ಆದೇಶಿಸಿದೆ.

ದೇವಸ್ತಾನದ ಆಡಳಿತ ಮಂಡಳಿ ಇತ್ತೀಚಿಗೆ ಕ್ಯೂ ಪದ್ಧತಿಯನ್ನು ಪ್ರಾರಂಭಿಸಿದ ಹಿನ್ನಲೆಯಲ್ಲಿ ಇದನ್ನು ವಿರೋಧಿಸಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು.ಇದಕ್ಕೆ ಕಾರಣ ಅಕ್ಟೋಬರ್ 3 ರಂದು ಪೊಲೀಸರು ದೇವಾಲಯದೊಳಗೆ ಗನ್ ಗಳ ಮೂಲಕ ಪ್ರವೇಶಿಸಿರುವುದು ಎಂದು ದೇಬಶಿಶ್ ಮಿಶ್ರಾ ಅವರು ಅರ್ಜಿಯನ್ನು ಸಲ್ಲಿಸಿದ್ದರು.ಈ ಅರ್ಜಿ ವಿಚಾರಣೆ ನಡೆಸಿ ಸುಪ್ರಿಂಕೋರ್ಟ್ ಈ ಕ್ರಮವನ್ನು ತಗೆದುಕೊಂಡಿದೆ ಎನ್ನಲಾಗಿದೆ.

Comments are closed.