ಕರ್ನಾಟಕ

ಮಹೇಶ್​ ರಾಜೀನಾಮೆಯಿಂದ ಹಾನಿ ಇಲ್ಲ: ಸಿದ್ದರಾಮಯ್ಯ

Pinterest LinkedIn Tumblr


ಬೆಂಗಳೂರು: ಬಿಎಸ್​ಬಿ ನಾಯಕ ಮಹೇಶ್​ ರಾಜೀನಾಮೆಗೂ ನಮಗೂ ಏನು ಸಂಬಂಧ ಅವರು ಬೇರೆ ಪಕ್ಷ. ನಮ್ಮದು ಬೇರೆ ಪಕ್ಷ. ಇದರಿಂದ ನಮಗೆ ಯಾವುದೇ ಹಾನಿ ಇಲ್ಲ ಎಂದು ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ

ಮೈತ್ರಿ ಸರ್ಕಾರ ರಚನೆಯಾಗಿ ನಾಲ್ಕುವರೆ ತಿಂಗಳಲ್ಲೇ ತಮ್ಮ ಸಚಿವ ಸ್ಥಾನಕ್ಕೆ ದಿಢೀರ್​ ರಾಜೀನಾಮೆ ನೀಡಿದ ಮಹೇಶ್ ನಿರ್ಧಾರ ಕುರಿತು ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಅವರನ್ನೇ ಹೋಗಿ ಪ್ರಶ್ನಿಸಿ ಎಂದು ಕೂಡ ಉತ್ತರಿಸಿದರು.

ಕೇಂದ್ರದಲ್ಲಿನ ಮಹಾಘಟ್​ ಬಂಧನದಿಂದ ಹೊರಬಂದಿದ್ದಕ್ಕೆ ಈ ನಿರ್ಧಾರವಾ ಎಂಬ ಪ್ರಶ್ನೆಗೂ ಅವರನ್ನೇ ಹೋಗಿ ಕೇಳಿದರೆ ಮಾಹಿತಿ ಸಿಗುತ್ತದೆ. ಅವರು ರಾಜೀನಾಮೆಯಿಂದ ಸರ್ಕಾರಕ್ಕೆ ಯಾವುದೇ ರೀತಿಯ ಹಾನಿಯಾಗುವುದಿಲ್ಲ ಎಂದು ಕೂಡ ಸ್ಪಷ್ಟಪಡಿಸಿದರು.

ಎನ್​ ಮಹೇಶ್​ ರಾಜೀನಾಮೆ ಕುರಿತು ಜೆಡಿಎಸ್​, ಕಾಂಗ್ರೆಸ್​ ನಾಯಕರು ಯಾವುದೇ ಪ್ರತಿಕ್ರಿಯೆ ನೀಡಲು ಮುಂದಾಗಿಲ್ಲ. ಅಲ್ಲದೇ ಇದು ಅವರ ಪಕ್ಷದ ಆಂತರಿಕ ವಿಷಯ. ಈ ಬಗ್ಗೆ ನಾವು ಯಾವುದೇ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.

ಬಳ್ಳಾರಿ ಅಭ್ಯರ್ಥಿ ಆಯ್ಕೆ ವಿಚಾರಕ್ಕೆ ಮಾಜಿ ಸಿಎಂ ಪ್ರವೇಶ

ಬಳ್ಳಾರಿ ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಯಾರು ಎಂಬ ಬಗ್ಗೆ ಇನ್ನು ನಿರ್ಧಾರ ಅಂತಿಮವಾಗದ ಹಿನ್ನಲೆ ಖುದ್ದು ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಪ್ರವೇಶ ಮಾಡುವ ಸಾಧ್ಯತೆ ಇದೆ.

ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಿಕೆ ಶಿವಕುಮಾರ್​ ನೇತೃತ್ವದಲ್ಲಿ ನಡೆದ ಸಭೆ ವಿಫಲವಾಗಿತ್ತು. ಸಭೆಗೆ ಜಿಲ್ಲೆಯ ಪ್ರಮುಖ ಮುಖಂಡರಾದ ಅನಿಲ್​ ಲಾಡ್, ಸಂತೋಷ್ ಲಾಡ್, ಆನಂದ್ ಸಿಂಗ್, ಪಿ.ಟಿ.ಪರಮೇಶ್ವರ ನಾಯ್ಕ್​, ಇ.ತುಕಾರಾಂ ಅವರು ಗೈರಾಗಿದ್ದರಿಂದ ಸಭೆಯಲ್ಲಿ ಯಾರ ಹೆಸರು ಅಂತಿಮವಾಗಿರಲಿಲ್ಲ.

ಇದರಿಂದಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಬಳ್ಳಾರಿ ಮುಖಂಡರ ಸಭೆ ನಡೆಸಲು ತೀರ್ಮಾನಿಸಲಾಗಿದ್ದು, ಸಭೆಗೆ ಉಸ್ತುವಾರಿ ಸಚಿವ ಡಿಕೆಶಿವಕುಮಾರ್, ಸೇರಿ ಬಳ್ಳಾರಿ ಶಾಸಕರು ಭಾಗಿಯಾಗಲಿದ್ದಾರೆ.

Comments are closed.