ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಬ್ಯಾಂಕ್ವೊಂದಕ್ಕೆ ನುಗ್ಗಿದ ದರೋಡೆಕೋರರು ಕ್ಯಾಶಿಯರ್ನನ್ನು ಕೊಲೆ ಮಾಡಿ 3 ಲಕ್ಷ ರೂ. ನಗದು ದೋಚಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
#WATCH: CCTV footage of a corporation bank being robbed in Delhi's Khaira yesterday by armed assailants. Cashier was shot dead. Investigation underway. pic.twitter.com/4XSz1JX8AF
— ANI (@ANI) October 13, 2018
ದಕ್ಷಿಣ ದೆಹಲಿಯ ಚಾವ್ಲಾ ಟೌನ್ನ ಕಾರ್ಪೊರೇಶನ್ ಬ್ಯಾಂಕ್ನಲ್ಲಿ ಶುಕ್ರವಾರ ಮಧ್ಯಾಹ್ನ ಘಟನೆ ನಡೆದಿದ್ದು, ದೆಹಲಿಯಲ್ಲಿ ನಡೆದ ಮೊದಲ ಬ್ಯಾಂಕ್ ದರೋಡೆ ಪ್ರಕರಣ ಇದಾಗಿದೆ.
ಆರು ಮುಸುಕುಧಾರಿಗಳು ಬ್ಯಾಂಕ್ಗೆ ನುಗ್ಗಿ 16 ಜನರಿಗೆ ಗನ್ ಪಾಯಿಂಟ್ ತೋರಿಸಿ ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದಾರೆ. ಕ್ಯಾಶಿಯರ್ ಸಂತೋಷ್ ಕುಮಾರ್ ಬಳಿ ಹಣ ದೋಚಲು ಯತ್ನಿಸಿದ್ದಾರೆ. ಸಂತೋಷ್ ದುಡ್ಡು ಕೊಡಲು ನಿರಾಕರಿಸಿದಾಗ ಅವರ ಮೇಲೆ ಗುಂಡು ಹಾರಿಸಿ ಮೂರು ಲಕ್ಷ ರೂ. ದೋಚಿಕೊಂಡು ಪರಾರಿಯಾಗಿದ್ದಾರೆ. ಇದಕ್ಕೂ ಮುಂಚೆ ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ ನಡೆಸಿದ್ದಾರೆ. ಸಂತೋಷ್ ಕುಮಾರ್ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಪ್ರಯೋಜನವಾಗಿಲ್ಲ. ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
Comments are closed.