ಕರ್ನಾಟಕ

ಬೆಳಗಾವಿ ರೈತರಿಗೆ ಕೊಲ್ಕತ್ತಾ ಹೈಕೋರ್ಟ್​ ಮೂಲಕ ನೋಟಿಸ್​

Pinterest LinkedIn Tumblr


ಬೆಳಗಾವಿ: ರಾಜ್ಯದಲ್ಲಿ ರೈತರ ಸಾಲ ವಸೂಲಿಗೆ ಬ್ಯಾಂಕ್ ನೋಟಿಸ್ ನೀಡಬಾರದು ಎಂದು ಸಿಎಂ ಹೆಚ್​ಡಿಕೆ ಖಡಕ್​ ಆದೇಶ ಕೊಟ್ಟಿದ್ದಾರೆ. ಆದರೂ ಆ್ಯಕ್ಸಿಸ್​ ಬ್ಯಾಂಕ್,​ ಸರ್ಕಾರದ ಆದೇಶಕ್ಕೆ ಬೆಲೆಯೇ ಕೊಟ್ಟಿಲ್ಲ. ಬೆಳಗಾವಿಯ ರೈತರಿಗೆ ದೂರದ ಕೊಲ್ಕತ್ತಾ ಹೈಕೋರ್ಟ್​ ಮೂಲಕ ನೋಟಿಸ್​ ನೀಡಿದೆ. ಅಷ್ಟಕ್ಕೂ ಬೆಳಗಾವಿಗೂ, ಪಶ್ಚಿಮ ಬಂಗಳಕ್ಕೂ ಏನ್​ ಸಂಬಂಧ ಅಂತಿರಾ? ಇಲ್ಲಿದೆ ವಿವರ.

ಬೆಳಗಾವಿ ಜಿಲ್ಲೆಯ ಸವದತ್ತಿ, ರಾಮದುರ್ಗ ಹಾಗೂ ಬೈಲಹೊಂಗಲದ 25ಕ್ಕೂ ಹೆಚ್ಚು ರೈತರಿಗೆ ಆ್ಯಕ್ಸಿಸ್​ ಬ್ಯಾಂಕ್​ ಬಿಗ್​ ಶಾಕ್​ ನೀಡಿದೆ. ರಾಜ್ಯ ಸರ್ಕಾರ ಇತ್ತೀಚೆಗೆ ರೈತರ ಸಾಲಮನ್ನಾ ಮಾಡಿ ಆದೇಶ ಹೊರಡಿಸಿದೆ. ಆದರೂ ಬೆಳಗಾವಿಯ ಆ್ಯಕ್ಸಿಸ್​ ಬ್ಯಾಂಕ್​ ಸರ್ಕಾರದ ಆದೇಶಕ್ಕೆ ಸವಾಲ್​ ಹಾಕಿದೆ. ಸಾಲ ಕಟ್ಟದ ರೈತರಿಗೆ ಪಶ್ಚಿಮ ಬಂಗಾಳದ ಕೊಲ್ಕತ್ತಾ ಕೋರ್ಟ್​ನಿಂದ ವಾರೆಂಟ್​ ನೋಟಿಸ್ ಜಾರಿ ಮಾಡಿಸಿದೆ. ಇದರಿಂದ ರೊಚ್ಚಿಗೆದ್ದ ರೈತರು ಬೆಳಗಾವಿಯ ಬೈಲಹೊಂಗಲ ಬ್ರಾಂಚ್​ಗೆ ಮುತ್ತಿಗೆ ಹಾಕಿ ಮ್ಯಾನೇಜರ್​ಗೆ ತರಾಟೆ ತೆಗೆದುಕೊಂಡರು.

ಈ ಹಿಂದೆಯೂ ಆ್ಯಕ್ಸಿಸ್​ ಬ್ಯಾಂಕ್​, ಸಾಲ ಮರುಪಾವತಿಸುವಂತೆ ರೈತರಿಗೆ ನೋಟಿಸ್ ನೀಡಿತ್ತು. ಈಗ ಚೆಕ್​ ಬೌನ್ಸ್ ಕೇಸ್ ದಾಖಲಿಸಿ ಕೋಲ್ಕತ್ತಾ ಮ್ಯಾಜಿಸ್ಟ್ರೇಟ್ ಕೋರ್ಟ್ ಮೂಲಕ ರೈತರಿಗೆ ನೋಟಿಸ್ ಕೊಡಿಸಿದೆ.

ಸಾಲಮನ್ನಾಕ್ಕೆ ಬ್ಯಾಂಕ್​ಗಳು ಎಳೆದಾಡಿಸುತ್ತಿವೆ. ದೋಸ್ತಿ ಸರ್ಕಾರ ದುಡ್ಡನ್ನೂ ಕಟ್ಟುತ್ತಿಲ್ಲ. ಹೀಗಾಗಿ ರೈತರ ಗೋಳೂ ತಪ್ಪಿಲ್ಲ, ಇದೆನ್ನೆಲ್ಲಾ ನೋಡಿದ ಕುಮಾರಸ್ವಾಮಿ ಬ್ಯಾಂಕ್​ಗಳ ಜೊತೆ ಮಾತಾಡ್ತೇನೆ ಎಂದಿದ್ದಾರೆ. ಅದು ಯಾವಾಗ ಮಾತನಾಡುತ್ತಾರೋ.. ಅದೇನು ಮಾಡುತ್ತಾರೋ ನೋಡಬೇಕು.

Comments are closed.