ಕರ್ನಾಟಕ

ಗೂಗಲ್ ಆ್ಯಪ್ ಮೂಲಕ ಕ್ಯಾಮೆರಾ ಬಳಸಿ ತಮಿಳನ್ನು ಕನ್ನಡಕ್ಕೆ ಅನುವಾದ ಮಾಡಬಹುದು

Pinterest LinkedIn Tumblr


ಗೂಗಲ್ ಅಪ್ಲಿಕೇಶನ್​ಗಳಲ್ಲಿ ಅತ್ಯಂತ ಪ್ರಮುಖ ಆ್ಯಪ್ ಎಂದರೆ ಗೂಗಲ್ ಟ್ರಾನ್ಸ್​ಲೇಷನ್. ಸುಮಾರು 103 ಕ್ಕೂ ಹೆಚ್ಚಿನ ಭಾಷೆಗಳನ್ನು ತಜುರ್ಮೆ ಮಾಡುವ ಅವಕಾಶವಿರುವುದು ಈ ಆ್ಯಪ್​ನ ವಿಶೇಷತೆ. ಇದೀಗ ಆ್ಯಪ್​ನಲ್ಲಿ ಮತ್ತಷ್ಟು ಹೊಸ ಫೀಚರ್ಸ್​ಗಳನ್ನು ನೀಡಲಾಗಿದ್ದು, ಆ ಮೂಲಕ ನೀವು ಯಾವುದಾದರೂ ಭಾಷೆಯನ್ನು ಕ್ಯಾಮೆರಾ ಮೂಲಕ ಕೂಡ ಭಾಷಾಂತರಿಸಬಹುದು. ಅಂಡ್ರಾಯ್ಡ್​ ಮತ್ತು ಐಒಎಸ್​ ಮೊಬೈಲ್​ಗಳಲ್ಲಿ ಬಳಸಬಹುದಾದ ಈ ಆ್ಯಪ್​ಗೆ ಕನ್ನಡ, ಪಂಜಾಬಿ ಮತ್ತು ನೇಪಾಳಿ, ತಮಿಳು ಸೇರಿದಂತೆ 13 ಭಾಷೆಗಳು ಹೊಸ ಸೇರ್ಪಡೆಯಾಗಿದೆ. ಇನ್ನು ಮುಂದೆ ಈ ಆ್ಯಪ್​ನ ಕ್ಯಾಮೆರಾ ಬಳಸಿ ಬಳಕೆದಾರರು ಭಾಷೆಯನ್ನು ತರ್ಜುಮೆ ಮಾಡಿಕೊಳ್ಳಬಹುದು.

ಕ್ಯಾಮೆರಾ ಟ್ರಾನ್ಸ್​ಲೇಟ್ ಬಳಕೆ ಮಾಡುವುದು ಹೇಗೆ?
ಗೂಗಲ್ ಟ್ರಾನ್ಸ್​ಲೇಟರ್ ಆ್ಯಪ್ ಓಪನ್ ಮಾಡಿ.

ಇಲ್ಲಿ ಹಲವು ಮಾದರಿಯ ಟ್ರಾನ್ಸ್​ಲೇಟ್ ಆಯ್ಕೆಗಳಿರುತ್ತದೆ.
ಅದರಲ್ಲಿ ಕ್ಯಾಮೆರಾ ಐಕಾನ್ ಮೇಲೆ ಟ್ಯಾಪ್ ಮಾಡಿ.
ನಂತರ ತರ್ಜುಮೆ ಮಾಡಬೇಕಾದ ಬರಹದ ಮೇಲೆ ಕ್ಯಾಮೆರಾ ಇಟ್ಟು ಕ್ಲಿಕ್ ಮಾಡಿ.
ಇಲ್ಲಿ ಹಲವು ಪದಗಳಿದ್ದರೆ ನಿಮಗೆ ಬೇಕಾದ ಪದವನ್ನು ಆಯ್ಕೆ ಮಾಡಲು ತಿಳಿಸುತ್ತದೆ.
ನೀವು ಯಾವ ಬರಹದ ಮೇಲೆ ಕ್ಲಿಕ್ ಮಾಡಿರುತ್ತೀರಾ ಆ ಪದದ ಅರ್ಥವು ನಿಮಗೆ ಬೇಕಾದ ಭಾಷೆಗೆ ತರ್ಜುಮೆಯಾಗಿರುತ್ತದೆ.

ಹಳೆಯ ಫೀಚರ್?
ಹೌದು, ಗೂಗಲ್​ ಸಂಸ್ಥೆಯು 2015ರಲ್ಲೇ ವಿಶುವೆಲ್ ಟ್ರಾನ್ಸ್​ಲೇಟರ್​ನ್ನು ಪರಿಚಯಿಸಿತ್ತು. ಆದರೆ ಇಲ್ಲಿ ಕೇವಲ 27 ಭಾಷೆಗಳನ್ನಷ್ಟೇ ತರ್ಜುಮೆ ಮಾಡಬಹುದಿತ್ತು. ಇದರಿಂದಾಗಿ ವಿಶುವೆಲ್ ಟ್ರಾನ್ಸ್​ಲೇಟರ್​ನ್ನು ಹೆಚ್ಚಾಗಿ ಯಾರೂ ಬಳಸುತ್ತಿರಲಿಲ್ಲ. ಇದೀಗ ಪ್ರಪಂಚದ ಪ್ರಮುಖ ಭಾಷೆಗಳನ್ನು ಈ ಆ್ಯಪ್ ಸಪೋರ್ಟ್​ ಮಾಡುತ್ತಿದ್ದು, ಬಳಕೆದಾರರು ಕೂಡ ಹೆಚ್ಚಾಗಿದ್ದಾರೆ.

ಯಾರಿಗೆ ಅನುಕೂಲ?
ಸಾಮಾನ್ಯವಾಗಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಹೋದಾಗ ಸ್ಥಳದ ಹೆಸರುಗಳು ತಿಳಿದಿರುವುದಿಲ್ಲ. ಮೈಲುಗಲ್ಲುಗಳ ಮೇಲೆ ಅಥವಾ ಯಾವುದಾದರೂ ಅಂಗಡಿಗಳಲ್ಲಿ ಸ್ಥಳೀಯ ಭಾಷೆಗಳನ್ನು ಬಳಸಿರುತ್ತಾರೆ. ಇಂತಹ ಸಂದರ್ಭದಲ್ಲಿ ಗೂಗಲ್ ಟ್ರಾನ್ಸ್​ಲೇಟರ್​ ಸಹಾಯದಿಂದ ಕ್ಲಿಕ್ ಮಾಡುವ ಮೂಲಕ ಹೆಸರುಗಳನ್ನು ನಮ್ಮ ಭಾಷೆಗೆ ತರ್ಜುಮೆ ಮಾಡಿಕೊಳ್ಳಬಹುದು.

ಗೂಗಲ್ ಒನ್
ಗೂಗಲ್ ಸಂಸ್ಥೆಯು ತನ್ನ ಹೊಸ ಕ್ಲೌಡ್​ ಸ್ಟೋರೇಜ್ ಸಬ್ಸ್​ಕ್ರಿಪ್ಷನ್ ‘Google One’ನ್ನು ಭಾರತದಲ್ಲಿ ಆರಂಭಿಸಿದೆ. ಇದರ ಅಡಿಯಲ್ಲಿ ಕಂಪನಿಯು Google Photos, Gmail ಮತ್ತು Google Drive ನಂತಹ ಉತ್ಪನ್ನಗಳ ಮೇಲೆ 100GB ಯಿಂದ 30TB ವರೆಗಿನ ಶೇಖರಣಾ ಆಯ್ಕೆಗಳನ್ನು ನೀಡಲು ಯೋಜಿಸಿದೆ ಎನ್ನಲಾಗಿದೆ.

Comments are closed.