ಮನೋರಂಜನೆ

ಹೆಣ್ಣಾಗಲಿ ಅಥವಾ ಗಂಡಾಗಲಿ ಅವರೊಂದಿಗೆ ಅಗೌರದಿಂದ ನಡೆದುಕೊಳ್ಳುವುದು ಕಿರುಕುಳ: ನಟಿ ರಾಗಿಣಿ

Pinterest LinkedIn Tumblr


ಹುಬ್ಬಳ್ಳಿ : ಮಹಿಳೆ ಅನುಭವಿಸುವ ಲೈಂಗಿಕ ಕಿರುಕುಳ ಮಾತ್ರ ಕಿರುಕುಳವಲ್ಲ. ಹೆಣ್ಣಾಗಲಿ ಅಥವಾ ಗಂಡಾಗಲಿ ಅವರೊಂದಿಗೆ ಅಗೌರದಿಂದ ನಡೆದುಕೊಂಡು ನೀಡುವ ಎಲ್ಲ ರೀತಿಯ ಹಿಂಸೆಯೂ ಕಿರುಕುಳವೇ ಎಂದು ನಟಿ ರಾಗಿಣಿ ದ್ವಿವೇದಿ ಹೇಳಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಮೀ ಟೂ’ ಆಂದೋಲವನ್ನು ಒಂದು ಕ್ರಾಂತಿಯೆಂದೇ ನಾನು ಭಾವಿಸಿದ್ದೇನೆ. ಎಲ್ಲ ಕ್ಷೇತ್ರಗಳಲ್ಲಿ ನಡೆಯುವ ಇಂತಹ ಅಮಾನುಷ ಕೃತ್ಯದ ವಿರುದ್ಧ ನಾವು ವಿಳಂಬವಾಗಿ ಹೋರಾಟ ಆರಂಭಿಸಿದ್ದೇವೆ. ವಿಳಂಬವಾದರೂ ಇದೊಂದು ಅಪೂರ್ವ ಮತ್ತು ಅದ್ಭುತವಾದ ಹೋರಾಟವಾಗಿದೆ ಎಂದರು.

ಯಾರಿಗೂ ಸಮಾಜದಲ್ಲಿ ಕಿರುಕುಳ ಉಂಟಾಗಬಾರದು. ಈಗ ‘ಹೀ ಟೂ’ ಎಂಬ ಹೋರಾಟ ಸಹ ಆರಂಭವಾಗಿದೆ ಎಂದು ಕೇಳಿದ್ದೇನೆ. ಅದನ್ನು ಸಹ ನಾನು ಬೆಂಬಲಿಸುತ್ತೇನೆ. ಕಾರಣ ಪುರುಷರು ಕಿರುಕುಳದಿಂದ ಹೊರತಲ್ಲ ಎಂಬುದು ನನ್ನ ಭಾವನೆ ಎಂದ​ರು.

ನಾನು ಮಹಿಳಾಪರ ಹೋರಾಟಗಾರ್ತಿ. ಹಾಗಂತಾ ಸದಾ ಮಹಿಳೆಯರನ್ನು ಮಾತ್ರ ಬೆಂಬಲಿಸುವುದಿಲ್ಲ. ನ್ಯಾಯದ ಪರ ನಿಲ್ಲುತ್ತೇನೆ. ಅದು ಮಹಿಳೆಯಾಗಿರಬಹುದು ಅಥವಾ ಪುರುಷರಾಗಿರಬಹುದು.

‘ಮೀ ಟೂ’ ಹೋರಾಟಕ್ಕೆ ವಿರುದ್ಧವಾಗಿ ನಡೆದುಕೊಳ್ಳುವವರು ಇದ್ದಾ​ರೆ. ತಮ್ಮತನವನ್ನು ಮಾರಿಕೊಳ್ಳುವವರು ಸಮಾಜದಲ್ಲಿ ದೊರಕುತ್ತಾರೆ. ಅಂಥವರನ್ನು ವಿರೋಧಿಸುತ್ತೇನೆ. ನಟಿ ಸಂಗೀತಾ ಭಟ್‌ ಅವರು ತಮಗಾದ ಲೈಂಗಿಕ ಕಿರುಕುಳದ ಬಗ್ಗೆ ನೀಡಿರುವ ವಿವರವನ್ನು ನಾನು ಸಂಪೂರ್ಣವಾಗಿ ಓದಿದ್ದೇನೆ.

ಸಂಗೀತಾ ಅವರಿಗೆ ಆದ ಘಟನೆಗಳನ್ನು ಓದಿ ಮನಸ್ಸಿಗೆ ತುಂಬಾ ನೋವು ಎನಿಸಿತು. ತಮ್ಮತನವನ್ನು ಮಾರಿಕೊಳ್ಳುವ ಮೊದಲು ಎಲ್ಲರೂ ಸಂಗೀತಾ ಭಟ್‌ ಅವರಿಗೆ ಆಗಿರುವ ಕಿರುಕುಳದ ಬಗ್ಗೆ ಓದಿ ಅರ್ಥೈಸಿಕೊಂಡು ‘ಮೀ ಟೂ’ದಂತಹ ಪರಿಣಾಮಕಾರಿಯಾದ ಆಂದೋಲನಕ್ಕೆ ಕೈಜೋಡಿಸುವ ಅಗತ್ಯವಿದೆ. ಅಲ್ಲದೆ ‘ಮೀ ಟೂ’ ಆಂದೋ​ಲ​ನವನ್ನು ಕೆಲ​ವರು ದುರ್ಬ​ಳಕೆ ಮಾಡಿ​ಕೊ​ಳ್ಳು​ತ್ತಿ​ದ್ದಾರೆ. ಇದಕ್ಕೆ ತಮ್ಮ ವಿರೋ​ಧ​ವಿದೆ ಎಂದ​ರು.

Comments are closed.