ಮನೋರಂಜನೆ

50ಕ್ಕೂ ಹೆಚ್ಚು ಕಿಸ್ಸಿಂಗ್ ಸೀನ್: ನಿರ್ದೇಶಕನ ವಿರುದ್ಧ ಸಂಜನಾ ಆರೋಪ

Pinterest LinkedIn Tumblr


ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಸಂಜನಾ ತಮ್ಮ ಮೊದಲ ಚಿತ್ರದ ಶೂಟಿಂಗ್ ವೇಳೆ ತಮ್ಮ ಮೇಲೆ ಉಂಟಾದ ಲೈಂಗಿಕ ದೌರ್ಜನ್ಯದ ಬಗ್ಗೆ ಬಿಚ್ಚಿಟ್ಟಿದ್ದು, `ಗಂಡ-ಹೆಂಡತಿ’ ಚಿತ್ರದ ನಿರ್ದೇಶಕ ರವಿ ಶ್ರೀವತ್ಸಾ ಶೂಟಿಂಗ್ ವೇಳೆ ಹೀನಾಯವಾಗಿ ನಡೆಸಿಕೊಂಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಮಾಧ್ಯಮಗಳೊಂದಿಗೆ ತಮ್ಮ ಸಿನಿ ಜರ್ನಿಯಲ್ಲಿ ನಡೆದ ಹಿಂಸೆಯ ಬಗ್ಗೆ ತೆರೆದಿಟ್ಟ ಅವರು, ನನಗೂ ಚಿತ್ರರಂಗದಲ್ಲಿ ತುಂಬಾ ಹೀನಾಯವಾಗಿ ನಡೆಸಿಕೊಂಡಿದ್ದಾರೆ. ನಿನ್ನ ವೃತ್ತಿ ಜೀವನ ಚೆನ್ನಾಗಿರಬೇಕು ಅಂದರೆ ಕಿಸ್ಸಿಂಗ್ ಸೀನ್ ಮಾಡು ಎಂದು ನಿರ್ದೇಶಕರು ಒತ್ತಾಯ ಮಾಡಿದ್ದರು. ಅಲ್ಲದೇ ಒಮ್ಮೆಲೇ 50ಕ್ಕೂ ಹೆಚ್ಚು ಕಿಸ್ಸಿಂಗ್ ಸೀನ್ ಮಾಡಿಸಿದ್ದರು. ಬ್ಯಾಕ್ ಲೆಸ್ ಸೀನ್ ಮಾಡುವಾಗಲು ಇಂತಹದ್ದೇ ಹಿಂಸೆಯಾಗಿತ್ತು. ಚಿತ್ರೀಕರಣದ ಸಮಯದಲ್ಲಿ ಭಯ ಹುಟ್ಟಿಸುವ ವಾತಾವರಣ ಇತ್ತು. ನನ್ನ ಮೇಲೆ ದಬ್ಬಾಳಿಕೆ ಮಾಡಿ ಕಿಸ್ಸಿಂಗ್ ಸೀನ್ ಗಳನ್ನು ಮಾಡಿಸಿಕೊಂಡರು. ಈ ವೇಳೆ ವಿದೇಶದಲ್ಲಿ ಶೂಟಿಂಗ್ ನಡೆಯುತ್ತಿತ್ತು. ಬ್ಯಾಕಾಂಕ್ ನಿಂದ ಬಂದ ನಂತರವೂ ಬೆಂಗಳೂರಿನಲ್ಲಿ ಕಿಸ್ಸಿಂಗ್ ಸೀನ್ ಮಾಡಿಸಿದ್ದರು ಎಂದು ನಟಿ ಸಂಜನಾ ಆರೋಪಿಸಿದರು.

ಮೀಟೂ ಕುರಿತ ಅಭಿಯನಕ್ಕೆ ತಮ್ಮ ಮನಸ್ಸಿನ ನೋವು ಹೇಳುಕೊಳ್ಳಲು ಸರಿಯಾದ ಸಮಯ ಎಂದು ಮಾತು ಮುಂದುವರಿಸಿದ ಅವರು, ಗಂಡ-ಹೆಂಡತಿ ಸಿನಿಮಾ ಮಾಡಿದಾಗ ನನಗೆ 16 ವರ್ಷ ಅಷ್ಟೇ ಆಗಿತ್ತು, ಎರಡುಕಾಲು ಲಕ್ಷ ರೂ. ಸಿಗುತ್ತೆ ಎಂದು ಸಿನಿಮಾ ಒಪ್ಪಿಕೊಂಡೆ. ನಿಮ್ಮನ್ನ ಮನೆ ಮಗಳ ತರ ನೋಡಿಕೊಳ್ಳುತ್ತೇವೆ ಹೇಳಿದ್ದ ನಿರ್ದೇಶಕರು ಬಳಿಕ ಕೆಟ್ಟದಾಗಿ ನಡೆಸಿಕೊಂಡರು. ಮೊದಲ ದಿನದ ಶೂಟಿಂಗ್ ಚೆನ್ನಾಗಿತ್ತು. ಆದರೆ ಚಿತ್ರೀಕರಣದ ಮೂರನೇ ದಿನ ಅಮ್ಮನನ್ನು ನನ್ನ ಜೊತೆ ಬರಲು ಬಿಡದೇ ಹೋಟೆಲ್‍ನಲ್ಲೇ ಬಿಟ್ಟಿದ್ದರು. ಅಲ್ಲದೇ ಅಮ್ಮನನ್ನ ಕಾರಣ ಹೇಳಿ ವಾಪಾಸ್ ಕಳಿಸಲು ಪ್ರಯತ್ನ ಮಾಡಿದ್ದರು. ಒಂದೇ ಕಿಸ್ಸಿಂಗ್ ಸೀನ್ ಅಂತ ಹೇಳಿ ಆಮೇಲೆ ಎರಡನೇ ಕಿಸ್ಸಿಂಗ್ ಸೀನ್ ಮಾಡಲು ಹೇಳಿ ಸುಮಾರು 50ಕ್ಕೂ ಹೆಚ್ಚು ಕಿಸ್ಸಿಂಗ್ ಸೀನ್ ಮಾಡಿಸಿದ್ದರು ಎಂದು ಬೇಸರ ತೋಡಿಕೊಂಡರು.

ಸಿನಿಮಾಗೂ ಒಪ್ಪಿಕೊಳ್ಳುವ ಮೊದಲು `ಮರ್ಡರ್’ ಸಿನಿಮಾ ನೋಡಲು ಹೇಳಿದ್ದರು, ಆದರೆ ಆ ಸಿನಿಮಾ ನೋಡಿ ಬಹಳ ಬೇಜಾರಾಗಿತ್ತು. ಈ ಸಿನಿಮಾ ಮಾಡಲು ನನಗೆ ಧೈರ್ಯ ಇಲ್ಲ ಅಂತ ಹೇಳಿದ್ದೆ. ಆದರೆ ನಮ್ಮ ನೇಟಿವಿಟಿಗೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳುತ್ತೇವೆ. ಒಂದು ಕಿಸ್ ಸೀನ್ ಮಾತ್ರ ಮಾಡಬಹುದು, ಸಿನಿಮಾಗಾಗಿ ಅಷ್ಟು ಮಾಡದೇ ಇದ್ದರೆ ಹೇಗೆ? ಸಿನಿಮಾ ಕ್ಷೇತ್ರದಲ್ಲಿ ಇವೆಲ್ಲಾ ಸಾಮಾನ್ಯ ಎಂದು ಹೇಳಿದ್ದರು. ಆದರೆ ಒಂದೇ ಸೀನ್ ಎಂದು ಹೇಳಿ ಆ ವಯಸ್ಸಿಗೆ ಓಕೆ ಎಂದು ಹೇಳಿದ್ದೆ. ಬಳಿಕ ಎಲ್ಲವೂ ಬದಲಾವಣೆಯಾದವು ಎಂದು ಹಿಂದಿನ ಘಟನೆಯನ್ನು ತೆರೆದಿಟ್ಟರು.

ಮನೆಯಲ್ಲಿಯೂ ಈ ಕುರಿತು ಹೇಳಲು ಸಾಧ್ಯವಾಗಲಿಲ್ಲ. ಏಕೆಂದರೆ ಸಿನಿಮಾ ಕ್ಷೇತ್ರಕ್ಕೆ ಬಂದಿದ್ದ ಕಾರಣ ಏನನ್ನು ಹೇಳವು ಸಾಧ್ಯವಾಗಿರಲಿಲ್ಲ. ಆದರೆ ಚಿತ್ರ ಶೂಟಿಂಗ್ ವೇಳೆ ಅಸಭ್ಯವಾಗಿ ನಡೆಸಿಕೊಂಡ ಪ್ರತಿಯೊಂದು ದೃಶ್ಯವೂ ನನಗೆ ನೆನಪಿದೆ. ಕಠಿಣ ದೃಶ್ಯಗಳಲ್ಲಿ ನಟಿಸುವ ವೇಳೆಯೂ ಸುರಕ್ಷತೆ ಇರಲಿಲ್ಲ. ಇದನ್ನು ಮಾಡದಿದ್ದರೆ ನೀನು ಸಾಯುವುದೇ ಲೇಸು ಎಂದು ಗದರಿದ್ದರು. ನಿನಗೆ ಬ್ರೇಕ್ ಸಿಕ್ಕರೆ ಮತ್ತೆ ನಮ್ಮತ್ತ ಬರಲ್ಲ, ಸಿನಿಮಾಗಾಗಿ ಎಲ್ಲವನ್ನೂ ಮಾಡಬೇಕು ಎಂದು ಹಿಂಸೆ ನೀಡಿದ್ದರು ಎಂದು ತಿಳಿಸಿದ್ದರು. ಆದರೆ ಎಲ್ಲಾ ನಿರ್ದೇಶಕರು ಹೀಗೆ ಎಂದು ಹೇಳಲ್ಲಾ. ಸಿನಿಮಾ ರಂಗ ಉತ್ತಮವಾಗಿದೆ ಎಂದರು.

ಶಿವಕೇಶವ ಸಿನಿಮಾ ಸಂದರ್ಭದಲ್ಲಿ ಹೀಗೇ ಆಗಿತ್ತು. ತಂದೆ ಜೊತೆಯಲ್ಲಿ ಬರಲು ಸಮಸ್ಯೆ ಮಾಡಿದ್ದರು. ಪ್ರತಿ ಎರಡು ಮೂರು ಗಂಟೆ ಸಮಯಕ್ಕೆ ತಂದೆ ಯಾಕೆ ಬರುತ್ತಾರೆ. ಪಾರ್ಟಿಗೆ ಬರುವುದಿಲ್ಲವಾ, ಫೈನಾನ್ಶಿಯರ್ ಜೊತೆ ಪಾರ್ಟಿಗೆ ಬರುವುದಿಲ್ಲವಾ ಅಂತ ಕೇಳಿ ಹಿಂಸೆ ಮಾಡಿದ್ದರು. ಈ ಸಂದರ್ಭದಲ್ಲಿ ಎಲ್ಲಾ ಹೆಣ್ಣು ಮಕ್ಕಳಿಗೆ ಧೈರ್ಯ ಹೇಳುವ ನಾನು ನನ್ನಲ್ಲಿ ನೋಡಿಕೊಂಡರೆ ನನ್ನ ಘಟನೆಯ ಬಗ್ಗೆಯೂ ಹೇಳಿಕೊಳ್ಳಬೇಕೆನಿಸಿದೆ. ಅದ್ದರಿಂದ ಎಲ್ಲವನ್ನೂ ಇಂದು ಹೇಳಿದ್ದೇನೆ ಎಂದು ವೃತ್ತಿ ಜೀವನದ ಕಹಿ ಘಟನೆಗಳನ್ನು ಬಿಚ್ಚಿಟ್ಟರು.

Comments are closed.