ಕರಾವಳಿ

ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವ ವಸ್ತು ಯಾವುದು ಗೋತ್ತೆ..?

Pinterest LinkedIn Tumblr

ಬಿದಿರು ಕಾಡು ಬೆಳೆಯಾದರೂ, ಈಗೀಗ ಶೃಂಗಾರಕ್ಕೆಂದು ಅದನ್ನು ಉದ್ಯಾನವನಗಳಲ್ಲೂ ಮನೆಯಂಗಳದಲ್ಲೂ ಬೆಳೆಯುತ್ತಿದ್ದಾರೆ. ಇದು ಹುಲ್ಲಿನ ಜಾತಿಗೆ ಸೇರಿದೆ.ಸಂಸ್ಕೃತಭಾಷೆಯಲ್ಲಿ, ವಂಶ, ವೇಣು, ಯುವಫಲ, ಶತಪರ್ವ, ಎಂದು ಕರೆಸಿಕೊಳ್ಳುವ ಬಿದಿರನ್ನು ಹಿಂದೂಸ್ತಾನಿಯಲ್ಲಿ ‘ಬಾಸ್,’ ಎನ್ನುತ್ತಾರೆ ಇದರಲ್ಲಿ ಬಾಸುರಿ (ಕೊಳಲು) ತಯಾರಿಸಲಾಗುತ್ತದೆ.

ಇವು ದಿನಕ್ಕೆ 3-4 ಅಂಗುಲಗಳಷ್ಟು ಶೀಘ್ರವಾಗಿ ಬೆಳೆಯುತ್ತದೆ. ಎಳೆಬಿದಿರಿನ ಬುಡದಭಾಗವನ್ನು ‘ಕಳಲೆ,’ ಕತ್ತರಿಸಿ, ಪಲ್ಯ, ಸಾಂಬಾರು , ಉಪ್ಪಿನಕಾಯಿ-ಹೀಗೆ ವಿವಿಧ ವ್ಯಂಜನಗಳನ್ನು ತಯಾರಿಸಿಕೊಳ್ಳುವವರಿದ್ದಾರೆ. ಆದರೆ ಕಳಲೆಯನ್ನು ಬಳಸುವ ಮುನ್ನ ಅದನ್ನು ಕನಿಷ್ಠ 3 ದಿನಗಳ ಕಾಲ ನೀರಿನಲ್ಲಿ ನೆನೆಸಿಡಬೇಕು. ನೆನೆಸದೆ ಹಾಗೇ ಬಿಟ್ಟರೆ ವಿಷಕಾರಿಯಾಗಿ ಕೆಲಸಮಾಡುತ್ತದೆ. ಕಳಲೆಯನ್ನು ಸಂಸ್ಕರಿಸಿದ ಬಳಿಕ, ಅದರ ಸಿಪ್ಪೆ ತುಂಡು ಇತ್ಯಾದಿಗಳನ್ನು ಜಾನುವಾರುಗಳ ಬಾಯಿಗೆ ಸಿಕ್ಕದಂತೆ ದೂರಕ್ಕೆ ಒಯ್ದು ಒಂದೆಡೆ ಹೂತುಹಾಕುವುದು ಕ್ಷೇಮಕರ. ಬಿದಿರಿನ ಅಕ್ಕಿ, ನಾವು ಸಾಮಾನ್ಯವಾಗಿ ಬಳಸುವ ಅಕ್ಕಿ-ಗೋಧಿಗಳಿಗಿಂತ ಅಧಿಕ ಪೌಷ್ಟಿಕಾಂಶಯುಕ್ತವಾಗಿದೆ.

ಹೌದು ಕೊಳಲನ್ನ ಬಿದಿರಿನಿಂದ ಮಾಡಲಾಗುತ್ತದೆ. ಬಿದಿರನ್ನ ದೈವಿಕವೆಂದು ಪರಿಗಣಿಸಲಾಗಿದೆ. ಈ ಬಿದಿರನ್ನು ಹಲವಾರು ದೇವರ ಕಾರ್ಯಗಳಲ್ಲಿ ಬಳಕೆ ಮಾಡುತ್ತಾರೆ. ಬಿದಿರಿನಿಂದ ಮಾಡಿದ ಕೊಳಲು ಪ್ರಗತಿ ಮತ್ತು ಸಮೃದ್ಧಿಯ ಸಂಕೇತ ಎಂದು ಹೇಳುತ್ತಾರೆ.ಮದುವೆ ಅಥವಾ ಇನ್ನಿತರೇ ಯಾವುದೇ ಶುಭ ಸಮಾರಂಭಗಳಿರಲಿ ಅಲ್ಲಿ ಕೊಳಲು ರೂಪದಲ್ಲಿ ತಯಾರಾಗುವ ಬಿದಿರನ್ನು ಬಳಸಲಾಗುತ್ತದೆ.

ಪೆಂಗ್ಯುಯಿ ಪ್ರಕಾರ ಮನೆಯಲ್ಲಿ ವಸ್ತು ದೋಷವಿದ್ದರೆ ಮನೆಯ ಮುಖ್ಯ ದ್ವಾರದಲ್ಲಿ ಎರಡು ಕೊಳಲನ್ನು ಇಡಿ. ಇದು ಅಲುಗಾಡಿದಾಗ ಬರುವ ಶಬ್ದ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಿ ಸಕಾರಾತ್ಮಕ ಶಕ್ತಿ ಪ್ರವೇಶಕ್ಕೆ ನೆರವಾಗುತ್ತದೆ. ಮಲಗುವ ಕೊನೆಯಲ್ಲಿ ತಲೆ ಮೇಲೆ ಮರದ ತೊಲೇ ಇರುವುದು ವಸ್ತು ಶಾಸ್ತ್ರದ ಪ್ರಕಾರ ಅಶುಭ. ಇದರಿಂದ ಮಾನಸಿಕ ಒತ್ತಡ ಹೆಚ್ಚಾಗಿ ವಿವಾಹ ಜೀವನದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ. ಹಾಗಾಗಿ ತೆಲೆಯ ಎರಡು ಕಡೆ ಕೊಳಲನ್ನು ಕಟ್ಟಿ. ಕೊಳಲಿನ ಬಾಯಿ ಬೆಡ್ ಕಡೆ ಇರುವಂತೆ ನೋಡಿಕೊಳ್ಳಿ ಇದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ ಮತ್ತು ಸಾಂಸಾರಿಕ ಜೀವನದಲ್ಲಿ ಒಳ್ಳೆಯಾಗಲಿದೆ

ಬಿದಿರಿನ ಕೊಳಲನ್ನು ಡ್ರಾಯಿಂಗ್ ರೂಮ್ನಲ್ಲಿಟ್ಟರೆ ಮನೆ ಸುಖ ಶಾಂತಿ ವೃದ್ಧಿಯಾಗಲಿದೆ ಹಾಗು ಮನೆಯವರ ಮನೋಶಕ್ತಿ ಹೆಚ್ಚಾಗುತ್ತದೆ ಅಷ್ಟೇ ಅಲ್ಲದೆ ಮನೆ ಮಂದಿಯಲ್ಲಿ ಅದೃಷ್ಟ ಖುಲಾಯಿಸುತ್ತದೆ.

Comments are closed.