ಹಾಲು ಆರೋಗ್ಯಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಹೊಂದಿದ್ದು, ಅದು ಆರೋಗ್ಯಕ್ಕೆ ಅತ್ಯುತ್ತಮ ಎಂಬುದು ನಾವೆಲ್ಲರೂ ತಿಳಿದಿರುವ ಸತ್ಯ. ಆದರೆ ನಿಮಗೆ ನಿಮ್ಮ ಚರ್ಮದ ಬಗ್ಗೆ ಯೋಚನೆಯಿಲ್ಲದಿದ್ದರೆ ಇದು ನಿಜ ಕೂಡ. ನಿಮಗೆ ಮೊಡವೆ ಮುಕ್ತ, ಜಿಡ್ಡಿನಂಶದಿಂದ ಹೊರತಾದ ಚರ್ಮ ಹೊಂದಲು ಸಾಮಾನ್ಯವಾಗಿ ಡೈರಿ ಉತ್ಪನ್ನಗಳನ್ನು ಸೇವಿಸಬಾರದೆಂದು ಸಲಹೆ ನೀಡುತ್ತಾರೆ. ಈ ಬಗ್ಗೆ ಕೆಲವು ಅಂಶಗಳನ್ನು ತಿಳಿದುಕೊಳ್ಳೋಣ.
ಹಾಲಿನಲ್ಲಿ IGF-1 ಎನ್ನುವ ಹಾರ್ಮೋನ್ ಇದ್ದು ಇದು ನಮ್ಮ ಆರೋಗ್ಯಕ್ಕೆ ಒಳಿತಲ್ಲವೆಂದು ಹೇಳಲಾಗುತ್ತದೆ. ಇದನ್ನು ಬೆಳವಣಿಗೆಯ ಹಾರ್ಮೋನ್ ಎಂದು ಕರೆಯುತ್ತಾರೆ, ಇದು ಚರ್ಮದಲ್ಲಿರುವ ಸಮಸ್ಯೆಗಳನ್ನು ಉಲ್ಬಣಗೊಳಿಸುತ್ತದೆ ಎನ್ನುತ್ತಾರೆ. ಈ ಹಾರ್ಮೋನ್ ಚರ್ಮದಲ್ಲಿ ಉರಿಯನ್ನು ಉಂಟುಮಾಡುವುದರಿಂದ ಇದು ಮೊಡವೆ ಮೂಡಲು ಕಾರಣವಾಗುತ್ತದೆ.
ಡೈರಿ ಉತ್ಪನ್ನಗಳು ‘ಸೆಬಮ್’ ಎನ್ನುವ ಮೇದೋಜಿರಕಗ್ರಂಥಿಗಳ ಸ್ರಾವವನ್ನು ಉತ್ಪತ್ತಿ ಮಾಡುತ್ತವೆ. ಈ ಗ್ರಂಥಿ ಚರ್ಮದಲ್ಲಿ ಎಣ್ಣೆಯಂಶವನ್ನು ಹೆಚ್ಚಿಸುವುದರಿಂದ ಮೊಡವೆ ಸಮಸ್ಯೆಯೂ ಅಧಿಕವಾಗುತ್ತದೆ. ‘ಹಾಲು ಸೇವನೆಯಿಂದ ಮೊಡವೆಗಳು ಹೆಚ್ಚಾಗುತ್ತವೆ ಅದರಲ್ಲೂ ಮಹಿಳೆಯರಿಗೆ ಇದರ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತವೆ. ಹಾಲು ಪ್ರಾಣಿಗಳ ಮೂಲದಿಂದ ಬರುವುದರಿಂದ ಇದರಲ್ಲಿ ಬೆಳವಣಿಗೆಯ ಹಾರ್ಮೋನ್ IGF-1 ಇದ್ದು, ಇದು ಸರಿಯಾಗಿ ದೇಹದಲ್ಲಿ ಜೀರ್ಣವಾಗದೆ ನಮ್ಮ ದೇಹದ ನಿಯಮಿತ ಕಾರ್ಯಗಳಿಗೆ ತಡೆಯೊಡ್ಡುತ್ತದೆ’ ಎನ್ನುತ್ತಾರೆ ಡಾ.ಸಿಮ್ರಾನ್ ಸೈನಿ.
ಹಾಗೆಯೇ ಡೈರಿ ಉತ್ಪನ್ನಗಳಲ್ಲಿ ಇರುತ್ತದೆ ಎನ್ನಲಾಗುವ ಎಣ್ಣೆಯ ಅಂಶ ಚರ್ಮದ ಮೇಲಿರುವ ಒಣಗಿದ ಜೀವಕೋಶಗಳನ್ನು ಚರ್ಮಕ್ಕೆ ಅಂಟುವಂತೆ ಮಾಡಿ ಅಲ್ಲಿನ ರಂಧ್ರಗಳನ್ನು ಮುಚ್ಚಿಬಿಡುತ್ತವೆ. ಇದರಿಂದ ಚರ್ಮದ ಉಸಿರಾಟಕ್ಕೆ ತೊಂದರೆಯುಂಟಾಗಿ ಮೊಡವೆಗಳು ಏಳಲು ಕಾರಣವಾಗುತ್ತದೆ.
ಮೊಸರು ಉತ್ತಮ:
ಆದರೆ ಎಲ್ಲಾ ಡೈರಿ ಉತ್ಪನ್ನಗಳು ನಿಮ್ಮ ಚರ್ಮಕ್ಕೆ ಹಾನಿ ಮಾಡುವುದಿಲ್ಲ. ಐಸ್ ಕ್ರೀಮ್ ಮತ್ತು ಹಾಲು ಮೊಡವೆ ಮೂಡಲು ಕಾರಣವಾದರೆ ಮೊಸರು ಚರ್ಮಕ್ಕೆ ರಕ್ಷಣೆ ಒದಗಿಸುತ್ತದೆ. ಇದರಲ್ಲಿರುವ ನಿರೋಧಕ ಅಂಶಗಳು ಚರ್ಮದಲ್ಲಿ ಉಂಟಾಗುವ ಉರಿಯನ್ನು ಕಡಿಮೆ ಮಾಡುವುದಲ್ಲದೆ, ಹಾಲಿನಿಂದ ಬರುವ ಬೆಳವಣಿಗೆಯ ಹಾರ್ಮೋನ್ ನ್ನು ತಡೆಗಟ್ಟುತ್ತದೆ.
2007ರಲ್ಲಿ ಹಾರ್ವರ್ಡ್ ಸಾರ್ವಜನಿಕ ಆರೋಗ್ಯ ಶಿಕ್ಷಣ ಸಂಸ್ಥೆ ನಡೆಸಿದ ಸಂಶೋಧನೆಯ ಪ್ರಕಾರ ‘ಹಾಲು ಮತ್ತು ಮೊಡವೆಗಳಿಗೆ ನೇರ ಸಂಬಂಧವಿದೆ. ಯಾರು ಹೆಚ್ಚಾಗಿ ಹಾಲು ಕುಡಿಯುತ್ತಾರೋ ಅವರು ಮೊಡವೆ ಸಮಸ್ಯೆಗಳಿಂದ ಹೆಚ್ಚಾಗಿ ಬಳಲುತ್ತಾರೆ. ಇನ್ನು ಕೆನೆ ತೆಗೆದ ಹಾಲು ಕುಡಿಯುವವರಿಗೆ ಕಲೆಗಳ ಸಮಸ್ಯೆ 44% ಅಧಿಕವಾಗಿರುತ್ತದೆ. ಸಂಸ್ಕರಿಸಿದ ಹಾಲು ದೇಹದಲ್ಲಿ ಹಾರ್ಮೋನ್ ಗಳನ್ನು ಹೆಚ್ಚು ಮಾಡುತ್ತದೆ. ಇದರಿಂದ ಹಾರ್ಮೋನ್ ನ ಅಸಮತೋಲನ ಉಂಟಾಗಿ ಮೊಡವೆ, ಕಪ್ಪುಕಲೆಗಳ ಸಮಸ್ಯೆ ಹೆಚ್ಚಾಗಿ ಕಾಡುತ್ತವೆ.’
ಕ್ಯಾಲ್ಶಿಯಂಗಾಗಿ ನೀವು ಹಾಲು ಕುಡಿಯುತ್ತಿದ್ದರೆ ಅದರ ಬದಲು ಅಳವಿ ಬೀಜ(Chia seeds)ವನ್ನು ಸೇವಿಸಬಹುದು. ಇದರಲ್ಲಿ ಹಾಲಿಗಿಂತ 4 ಪಟ್ಟು ಕ್ಯಾಲ್ಶಿಯಂ ಅಂಶಗಳಿವೆ ಎನ್ನುತ್ತಾರೆ ತಜ್ಞರು.
Comments are closed.