ಕರಾವಳಿ

2018ರ ರಚನಾ ಪ್ರಶಸ್ತಿ ಪ್ರಕಟ : ನವೆಂಬರ್ 17ರಂದು ಸಾಧಕರಿಗೆ ಪ್ರಶಸ್ತಿ ಪ್ರದಾನ

Pinterest LinkedIn Tumblr

ಮಂಗಳೂರು : 1998ರಲ್ಲಿ ಕಥೋಲಿಕ್ ಉದ್ಯಮಿಗಳು, ವೃತ್ತಿಪರರು ಹಾಗೂ ಕೃಷಿಕರು ಒಟ್ಟಾಗಿ ಸೇರಿ ಆರಂಭಿಸಿದ ಕಥೋಲಿಕ್ ಚೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರಿ – ರಚನಾ ಸಂಸ್ಥೆಯು ವಿವಿಧ ಕ್ಷೇತ್ರಗಳ ಸಾಧಕರಿಗೆ ನೀಡುತ್ತಿರುವ ಪ್ರತಿಷ್ಠಿತ ರಚನಾ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.

ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಚನಾ ಅಧ್ಯಕ್ಷ ಸ್ಟ್ಯಾನಿ ಆಲ್ವಾರಿಸ್ ಅವರು, ಕಥೊಲಿಕ್ ಸಮಾಜದ ಯಶಸ್ವಿ ಉದ್ಯಮಿಗಳು, ವ್ಥತ್ತಿಪರರು, ಕೃಷಿಕರು ಹಾಗೂ ಮಹಿಳೆಯರು ಹಾಗೂ ಅನಿವಾಸಿ ಭಾರತೀಯರನ್ನು ಗುರುತಿಸಿ ಹುರಿದುಂಬಿಸುವ ಸಲುವಾಗಿ ರಚನಾ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಂಡು ಸಾಧಕರನ್ನು ಮುಖ್ಯವಾಹಿನಿಗೆ ತರುವ ಕಾರ್ಯಕ್ರಮವು ನಿರಂತರವಾಗಿ ನಡೆದಿದೆ.

ರಚನಾವತಿಯಿಂದ 2018 ಎಪ್ರಿಲ್‌ನಲ್ಲಿ ದೇಶ ವಿದೇಶಗಳ ಕಥೊಲಿಕ್ ಉದ್ಯಮಿಗಳನ್ನು ಒಟ್ಟುಗೂಡಿಸಿ `ಮ್ಯಾಗ್ನೆಟ್ 2014′ ಎಂಬ ಮಹಾಸಮ್ಮೇಳನವನ್ನು ಆಯೋಜಿಸಿತು. 20 ಜ್ಯೂರಿ ಸದಸ್ಯರು ನಾಮಸೂಚನೆಗಳನ್ನು ಪರಿಶೀಲಿಸಿ ಈ ಬಾರಿ ಐದು ಮಂದಿ ಸಾಧಕರನ್ನು 2018ನೇ ಸಾಲಿನ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ ಎಂದರು.

ರಚನಾ ಕೃಷಿಕ – ಶ್ರೀ ಲಾರೆನ್ಸ್ ಪಿಂಟೊ, ರಚನಾ ಉದ್ಯಮಿ – ಶ್ರೀ ರೊನಾಲ್ಡ್ ಕ್ಯಾಸ್ತೆಲಿನೊ, ರಚನಾ ವೃತ್ತಿಪರ – ಕು. ಫೇ ಡಿಸೋಜಾ, ರಚನಾ ಅನಿವಾಸಿ ಉದ್ಯಮಿ/ ವೃತ್ತಿಪರ – ಶ್ರೀ ಅಲೋಶಿಯಸ್ ರಿಚರ್ಡ್ ಲೋಬೊ, ರಚನಾ ಮಹಿಳಾ ಪ್ರಶಸ್ತಿ – ಸಿ. ಮರಿಯಾ ಜ್ಯೋತಿ ಎ.ಸಿ. ಇವರನ್ನು ಅಯ್ಕೆ ಮಾಡಲಾಗಿದೆ ಎಂದು ಸ್ಟ್ಯಾನಿ ಆಲ್ವಾರಿಸ್ ಅವರು ಹೇಳಿದರು.

ಈ ಪ್ರಶಸ್ತಿ ಪ್ರದಾನ ಕಾರ್‍ಯಕ್ರಮವು 2018ರ ನವೆಂಬರ್ 17ರಂದು ಶನಿವಾರ ಸಂಜೆ 6 ಗಂಟೆಗೆ ಮಂಗಳೂರಿನ ಮಿಲಾಗ್ರಿಸ್ ಜ್ಯುಬಿಲಿ ಸಭಾಭವನದಲ್ಲಿ ಮಂಗಳೂರಿನ ಬಿಷಪ್ ಅತೀ ವಂದನೀಯ ಪೀಟರ್ ಪಾವ್ಲ್ ಸಲ್ಡಾನ್ಹಾ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಡಾ. ಚಾರ್ಲ್ಸ್ ಲೋಬೊ, ಐಪಿ‌ಎಸ್, ಚೀಫ್ ಪೋಸ್ಟ್ ಮಾಸ್ಟರ್ ಜನರಲ್, ಕರ್ನಾಟಕ ಸರ್ಕಲ್ ಇವರು ಮುಖ್ಯ ಅತಿಥಿಯಾಗಿ ಮತ್ತು ಶ್ರೀ ರೊನಾಲ್ಡ್ ಕುಲಾಸೊ, ಅನಿವಾಸಿ ಉದ್ಯಮಿ, ಬೆಂಗಳೂರು ಇವರು ಗೌರವ ಅತಿಥಿಯಾಗಿರುವರು ಎಂದವರು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಎಲಿಯಾಸ್ ಸಾಂಕ್ತಿಸ್, ಕಾರ್ಯದರ್ಶಿ ಅನಿಲ್ ವಾಸ್, ಖಜಾಂಚಿ ಫೆಲಿಕ್ಸ್ ಜೆ. ಪಿಂಟೊ, ರಚನಾ ಪ್ರಶಸ್ತಿ 2018ರ ಸಂಚಾಲಕ ಜೋನ್ ಬಿ. ಮೊಂತೇರೊ ಉಪಸ್ಥಿತರಿದ್ದರು.

Comments are closed.