ರಾಷ್ಟ್ರೀಯ

ಅಮೃತಸರ ರೈಲು ದುರಂತದಲ್ಲಿ ರಾವಣನ ಪಾತ್ರ ಮಾಡಿದ್ದ ವ್ಯಕ್ತಿ ಸಾವು

Pinterest LinkedIn Tumblr

ಅಮೃತ​ಸರ: ವಿಜಯದಶಮಿಯಂದು ಪಂಜಾಬ್​ನ ಅಮೃತಸರದಲ್ಲಿ ಸಂಭವಿಸಿದ ರೈಲು ಅವಘಡದಲ್ಲಿ 60ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಬಹುದೊಡ್ಡ ದುರಂತವೊಂದು ಸಂಭವಿಸಿದೆ. ಕಾಕತಾಳೀಯವೇನೆಂದರೆ ದಸರಾ ಅಂಗವಾಗಿ ವಿಜಯದಶಮಿ ದಿನ ರಾವಣ ದಹನ ಕಾರ್ಯಕ್ರಮದಲ್ಲಿ ಲಂಕಾಧಿಪತಿ ರಾವಣನ ಪಾತ್ರ ಮಾಡಿದ್ದ ವ್ಯಕ್ತಿ ಸಾವನ್ನಪ್ಪಿದ್ದಾರೆ.

ದಲ್ಬಿರ್ ಸಿಂಗ್​ ದುರಂತದಲ್ಲಿ ಸಾವನ್ನಪ್ಪಿದ ವ್ಯಕ್ತಿ. ಇವರು ತಾಯಿ, ಹೆಂಡತಿ ಹಾಗೂ 8 ತಿಂಗಳ ಮಗುವನ್ನು ಅಗಲಿದ್ದಾರೆ. ಗಂಡನನ್ನು ಕಳೆದುಕೊಂಡ ವಿಧವೆಗೆ ಸರ್ಕಾರಿ ನೌಕರಿ ನೀಡುವಂತೆ ದಲ್ಬಿರ್​ ಸಿಂಗ್​ ತಾಯಿ ಪಂಜಾಬ್​ ಸಿಎಂ ಅಮರಿಂದರ್​ ಸಿಂಗ್ ಅವರಿಗೆ ಮನವಿ ಮಾಡಿದ್ದಾರೆ. ನನ್ನ ಸೊಸೆಗೆ ಸರ್ಕಾರಿ ಕೆಲಸ ಕೊಡಿ, ಆಕೆಗೆ 8 ತಿಂಗಳ ಮಗುವಿದೆ ಎಂದು ಹೇಳಿದ್ದಾರೆ.

ನನ್ನ ಮಗ ಮೊದಲ ಬಾರಿಗೆ ರಾವಣನ ಪಾತ್ರ ಮಾಡಿದ್ದ. ಇತ್ತೀಚೆಗೆ ಹನುಮಂತ, ರಾಮ ಹಾಗೂ ಲಕ್ಷ್ಮಣನ ಪಾತ್ರವನ್ನೂ ಸಹ ಮಾಡಿದ್ದ, ನಿನ್ನೆ ನಡೆದ ಕಾರ್ಯಕ್ರಮಕ್ಕೆ ದಲ್ಬಿರ್​ ಸಿಂಗ್ ಎಲ್ಲರನ್ನೂ ಆಹ್ವಾನಿಸಿದ್ದ ಎಂದು ಆತನ​ ತಾಯಿ ಕಣ್ಣೀರು ಹಾಕಿದರು.

ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ನಮ್ಮ ಬಳಿ ಬಂದು ಸಹಾಯ ಕೇಳಿದ್ದವು. ನಾವು ಅವರ ಜೊತರೆಗೂಡಿ ಮನೆ ಮನೆ ಬಾಗಿಲಿಗೆ ಹೋಗಿ ಮತಕೇಳಿ ಸಹಾಯ ಮಾಡಿದ್ದೆವು. ಈಗ ನನ್ನ ಮಗನ ಸಾವಿಗೆ ನ್ಯಾಯ ದೊರಕಿಸಿಕೊಡಿ ಎಂದು ಆಗ್ರಹಿಸಿದ್ದಾರೆ.

ದಸರಾ ಅಂಗವಾಗಿ ವಿಜಯದಶಮಿ ದಿನ ಆಚರಿಸಿ ರಾವಣ ದಹನ ಮಾಡಲಾಗುತ್ತಿತ್ತು. ರಾವಣ ದಹನವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನರು ಭಾಗವಹಿಸಿದ್ದರು. ಈ ವೇಳೆ ನೆರೆದಿದ್ದ ಮಹಿಳೆಯರು, ಮಕ್ಕಳು ಸೇರಿದಂತೆ ಜನರು ರೈಲ್ವೆ ಹಳಿ ಮೇಲೆ ಓಡಿ ಹೋಗಿದ್ದಾರೆ. ಇದೇ ಸಂದರ್ಭದಲ್ಲಿ ಬಂದ ರೈಲು ಅವರ ಮೇಲೆ ಹರಿದಿದೆ. ಈ ಭೀಕರ ದುರಂತದಲ್ಲಿ 58 ಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವ ಎಂದು ಹೇಳಲಾಗುತ್ತಿದೆ.

ಇನ್ನು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಘಟನಾ ಸ್ಥಳದಲ್ಲಿ ಮೃತ ಕುಟುಂಬಸ್ಥರ ನೋವು ಮುಗಿಲು ಮುಟ್ಟಿದೆ. ಮೂಲಗಳ ಮಾಹಿತಿ ಪ್ರಕಾರ 300ಕ್ಕೂ ಹೆಚ್ಚು ಮಂದಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು ತುರ್ತು ನಿಗಾ ಘಟಕಕ್ಕೆ ಸೇರಿಸಲಾಗಿದೆ.

Comments are closed.