ಕರಾವಳಿ

ಕುಂದಾಪುರ(ಗೋಪಾಡಿ): ಸಮುದ್ರದಲೆಗಳ ಅಬ್ಬರಕ್ಕೆ ಸಿಲುಕಿ ಮೀನುಗಾರ ಸಾವು

Pinterest LinkedIn Tumblr

ಕುಂದಾಪುರ : ಕೈರಂಪಣಿ‌ ಬಲೆ ಬಳಸಿ ಮೀನುಗಾರಿಕೆ ನಡೆಸುತ್ತಿದ್ದಾಗ ಅಲೆಗಳ ರಭಸಕ್ಕೆ ಸಿಕ್ಕು ಮೀನುಗಾರ ಮೃತಪಟ್ಟ ಘಟನೆ ಕುಂದಾಪುರ ತಾಲೂಕಿನ ಗೋಪಾಡಿ ಚರ್ಕಿಕಡು ಎಂಬಲ್ಲಿ ಶನಿವಾರ ನಡೆದಿದೆ.

ಪಡುಗೋಪಾಡಿ ಪಡಾಯಿನ ಮನೆ ನಿವಾಸಿ ಸದಿಯ ಮರಕಾಲ (65) ಮೃತ ದುರ್ದೈವಿ.

ಗೋಪಾಡಿ ಚರ್ಕಿಕಡು ಎಂಬಲ್ಲಿ ಇತರರ ಜೊತೆ ಸಮುದ್ರದಲ್ಲಿ ಮೀನುಗಾರಿಕೆಗೆ ಇತರರೊಂದಿಗೆ ತೆರಳಿದ್ದು ಬಲೆ ಬೀಸಿ ಮೀನುಗಾರಿಕೆ ನಡೆಸುತ್ತಿರುವಾಗ ಏಕಾಏಕಿ ಬಂದ ಬೃಹತ್ ಅಲೆಯೊಂದಕ್ಕೆ ಸಿಲುಕಿ ಕಾಲು ಜಾರಿ ಬಿದ್ದು ಸಮುದ್ರದಲ್ಲಿ ಮುಳುಗಿ ಕೊಚ್ಚಿಕೊಂಡು ಹೋದವರನ್ನು ಅಲ್ಲಿದ್ದ ಇತರ ಮೀನುಗಾರರು ಮೇಲೆತ್ತಿ ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ಕರೆ ತಂದು ಪರೀಕ್ಷಿಸಿದ್ದು ಅಷ್ಟರಲ್ಲಾಗಲೇ ಸದಿಯ ಅವರು ಮೃತಪಟ್ಟಿದ್ದರೆನ್ನಲಾಗಿದೆ. ಇವರು ಮೊಗವೀರ ಸಮಾಜದ ಆ ಭಾಗದ ಗುರಿಕಾರರಾಗಿದ್ದರು.

ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

Comments are closed.