ರಾಷ್ಟ್ರೀಯ

ಅಮೃತಸರ ರೈಲು ದುರಂತ: ಸಾವೀಗೀಡಾದವರು ಉ.ಪ್ರ, ಬಿಹಾರದ ಕೂಲಿ ಕಾರ್ಮಿಕರು

Pinterest LinkedIn Tumblr


ಅಮೃತಸರ: ಶುಕ್ರವಾರ ಸಂಜೆ ವಿಜಯದಶಮಿ ಆಚರಣೆ ಸಂದರ್ಭದಲ್ಲಿ ಪಂಜಾಬ್​ನ ಅಮೃತಸರದಲ್ಲಿ ಸಂಭವಿಸಿದ ರೈಲು ದುರಂತದಲ್ಲಿ ಸಾವೀಗೀಡಾದವರು ಹೆಚ್ಚಾಗಿ ಉತ್ತರ ಪ್ರದೇಶ ಮತ್ತು ಬಿಹಾರದಿಂದ ವಲಸೆ ಬಂದಿದ್ದ ಕೂಲಿ ಕಾರ್ಮಿಕರು ಎನ್ನಲಾಗಿದೆ.

ಈ ದುರ್ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 59 ಎಂದು ಹೇಳಲಾಗುತ್ತಿದ್ದು, ಈ ವರೆಗೆ 39 ಮೃತದೇಹಗಳನ್ನು ಗುರುತಿಸಲಾಗಿದೆ. ಆದಾಗ್ಯೂ 20 ಕ್ಕೂ ಅಧಿಕ ದೇಹಗಳನ್ನು ಇನ್ನೂ ಖಚಿತವಾಗಿ ಗುರುತಿಸಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಉತ್ತರ ಪ್ರದೇಶ ಮತ್ತು ಬಿಹಾರದಿಂದ ವಲಸೆ ಬಂದ ಹೆಚ್ಚಿನ ಸಂಖ್ಯೆಯ ಕಾರ್ಮಿಕರು ತಮ್ಮ ಹೊಟ್ಟೆಪಾಡಿಗಾಗಿ ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿದ್ದರು ಜಿಲ್ಲಾಡಳಿತದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: ರೈಲು ದುರಂತ: ನಾನಾ-ನೀನಾ ಆರೋಪ ಬೇಡ, ನಾಲ್ಕು ವಾರದಲ್ಲಿ ತನಿಖಾ ವರದಿ ಬರಲಿದೆ; ಪಂಜಾಬ್​ ಸಿಎಂ

ಶುಕ್ರವಾರ ಸಾಯಂಕಾಲ ದಸರಾ ಉತ್ಸವ ಆಚರಣೆ ವೇಳೆಯಲ್ಲಿ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳಿಗೆ ಸೇರಿದ ಜನರು ನೆರೆದಿದ್ದರು. ಭಕ್ತಿ ಪೂರ್ವಕವಾಗಿ ನಮಿಸಿ ತಮ್ಮ ಊರುಗಳಿಗೆ ಹಿಂದಿರುಗುವ ತವಕದಲ್ಲಿದ್ದರು. ಅಷ್ಟರಲ್ಲಾಗಲೇ ಜವರಾಯ ಬಂದು ಎರಗಿದ್ದ.

ಅವಘಡದಲ್ಲಿ ದುರಂತಕ್ಕೀಡಾದವರು ಹೆಚ್ಚಾಗಿ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳಿಂದ ವಲಸೆ ಬಂದವರಾಗಿದ್ದು, ತಮ್ಮ ಹೊಟ್ಟೆಪಾಡಿಗಾಗಿ ಕೈಗಾರಿಕೆಗಳಲ್ಲಿ ದುಡಿಯುತ್ತಿದ್ದರು ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.

ಉತ್ತರ ಪ್ರದೇಶದ ಹಾರ್ದೊಯಿಯ 40 ವರ್ಷದ ಕೂಲಿ ಕಾರ್ಮಿಕ ಜಗುನಂದನ್​​​​​ ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದು, ತಲೆ ಮತ್ತು ಕಾಲಿಗೆ ಪೆಟ್ಟಾಗಿದೆ. ನಾನು ಹಳಿ ಪಕ್ಕ ನಿಂತಿರಲಿಲ್ಲ. ಆದರೆ ಜನರು ಓಡುವಾಗ ತಳ್ಳಿದರು ಎಂದು ಕಣ್ಣೀರು ಹಾಕುತ್ತಾ ಮಾತನಾಡಿದರು.

ಮೃತದೇಹಗಳನ್ನು ಅವರವರ ಕುಟುಂಬಕ್ಕೆ ರವಾನೆ ಮಾಡಲು ಸಾಧ್ಯವಿರುವ ಎಲ್ಲಾ ಅವಕಾಶ ಮತ್ತು ಸಹಾಯವನ್ನು ಜಿಲ್ಲಾಡಳಿತವು ಮಾಡುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Comments are closed.