ಪರಿಣಿತಿ ಚೋಪ್ರಾ ಹಾಗೂ ನಟ ಅರ್ಜುನ್ ಕಪೂರ್ ಯಶ್ ರಾಜ್ ಫಿಲ್ಮ್ಸ್ನಲ್ಲಿ ನಾಯಕ-ನಾಯಕಿಯಾಗಿ ಬಿ-ಟೌನ್ಗೆ ಪರಿಚಿತರಾದವರು. 2012 ರಲ್ಲಿ ತೆರೆ ಕಂಡ ‘ಇಷಕ್ಜಾದೆ’ ಸಿನಿಮಾದಲ್ಲಿ ಇವರಿಬ್ಬರ ಕೆಮಿಷ್ಟ್ರಿ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗಿತ್ತು. ಈಗ ಈ ಜೋಡಿ ಮತ್ತೆ ‘ನಮಸ್ತೆ ಇಂಗ್ಲೆಂಡ್’ ಸಿನಿಮಾಗಾಗಿ ಒಂದಾಗಿದ್ದು, ಕಳೆದ ಗುರುವಾರ ಈ ಚಿತ್ರ ತೆರೆ ಕಂಡಿದೆ.
ಪರಿಣಿತಿ -ಅರ್ಜುನ್ ಕಪೂರ್ ಅಭಿಮಾನಿಗಳು ಮಾತ್ರವಲ್ಲದೆ, ಇವರ ಮನೆಯವರೂ ಸಹ ಈ ಜೋಡಿಯ ಕೆಮಿಸ್ಟ್ರಿಯನ್ನು ತೆರೆ ಮೇಲೆ ನೋಡಲು ಇಷ್ಟಪಡುತ್ತಾರೆ. ಹೌದು ಅರ್ಜುನ್ ಕಪೂರ್ ಅವರ ಅಜ್ಜಿ ನಿರ್ಮಲ್ ಕಪೂರ್ ಅವರಿಗೂ ಅರ್ಜುನ್ ಹಾಗೂ ಪರಿಣಿತಿಯ ಆನ್ಸ್ಕ್ರೀನ್ ಕೆಮಿಸ್ಟ್ರಿ ನೋಡಲು ತುಂಬಾ ಇಷ್ಟವಂತೆ. ‘ನಮಸ್ತೆ ಇಂಗ್ಲೆಂಡ್’ ಟ್ರೈಲರ್ ನೋಡಿದ ನಿರ್ಮಲ್ ಅವರೇ ಅರ್ಜುನ್ಗೆ ಹೇಳಿದ್ದಾರಂತೆ. ಹೀಗೆಂದು ಖುದ್ದು ಅರ್ಜುನ್ ಕಳೆದ ವಾರ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ. ಅಷ್ಟೆ ಅಲ್ಲದೆ ಪರಿಣಿತಿ, ಅರ್ಜುನ್ಗೆ ಹೇಳಿ ಮಾಡಿಸಿದ ಜೋಡಿ ಎಂದೂ ಹೇಳಿದ್ದಾರಂತೆ.
‘ತೆರೆ ಮೇಲೆ ನಮ್ಮಿಬ್ಬರ ಜೋಡಿ ನೋಡಲು ಚೆನ್ನಾಗಿರುತ್ತೆ ಅಂತ ಅರ್ಜುನ್ ಅವರ ಅಜ್ಜಿ ಹೇಳಿರೋದು ನಿಜಕ್ಕೂ ಖುಷಿ ನೀಡಿದೆ. ನಮ್ಮಿಬ್ಬರ ಸ್ನೇಹ ಸಹ ಅಷ್ಟೇ ಗಟ್ಟಿಯಾಗಿದೆ. ತೆರೆ ಹಿಂದೆಯೂ ನಾವಿಬ್ಬರು ಒಳ್ಳೆಯ ಸ್ನೇಹಿತರು. ಈ ಸಿನಿ ರಂಗದಲ್ಲಿ ನಿಜವಾದ ಸ್ನೇಹಿತರು ಸಿಗುವುದು ಕಷ್ಟ’ ಎಂದು ಪರಿಣಿತಿ ಹೇಳಿದ್ದಾರೆ.
Comments are closed.