ಕರಾವಳಿ

ಕಲ್ಕೂರ ಪ್ರತಿಷ್ಠಾನದಿಂದ ಅಕ್ಷರಾಭ್ಯಾಸ ವಿದ್ಯಾರಂಭ ಕಾರ್ಯಕ್ರಮ

Pinterest LinkedIn Tumblr

ಮಂಗಳೂರು : ಕಲ್ಕೂರ ಪ್ರತಿಷ್ಠಾನದ ವತಿಯಿಂದ ‘ವಿಜಯದಶಮಿ’ ಪ್ರಯುಕ್ತ ಕದ್ರಿಯ ‘ಮಂಜುಪ್ರಸಾದ’ದಲ್ಲಿ‌ ಅಕ್ಷರಾಭ್ಯಾಸ ವಿದ್ಯಾರಂಭ ಕಾರ್ಯಕ್ರಮವು ಜರಗಿತು. ನವರಾತ್ರಿಯ ಕಡೆಯ ದಿನ ವಿಜಯದಶಮಿ ಆಚರಿಸಲಾಗುತ್ತದೆ. ಶುಭಕಾರ್ಯಗಳಿಗೆ ಈ ದಿನ ಸೂಕ್ತವೆಂಬ ನಂಬಿಕೆಯಿದೆ. ಅದರಲ್ಲೂ ಸಣ್ಣ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲು ಪ್ರಶಸ್ತವಾದ ದಿನ ಎಂಬ ಪ್ರತೀತಿ. ಈ ಹಿನ್ನೆಲೆಯಲ್ಲಿ ಇಲ್ಲಿನ ಮಂಜುಪ್ರಸಾದ’ದಲ್ಲಿ ಅಕ್ಷರಾಭ್ಯಾಸ ಕಾರ್ಯಕ್ರಮ ನಡೆಯಿತು.

ವೇದಮೂರ್ತಿ ಗಣಪತಿ‌ ಆಚಾರ್ಯ ಮತ್ತು ಪ್ರಭಾಕರ‌ ಅಡಿಗರ ಮಾರ್ಗದರ್ಶನದಲ್ಲಿ ಎಳೆಯ ಮಕ್ಕಳಿಗೆ ಅಕ್ಷರಾಭ್ಯಾಸ ನಡೆಸಲಾಯಿತು. ಈ ಸಂದರ್ಭ ಶ್ರೀಮತಿ ಸುಮಿತ್ರಾ‌ಆಚಾರ್ ಮತ್ತು ಬಳಗದವರಿಂದ ಭಜನೆ ನಡೆಯಿತು. ಪ್ರತಿಷ್ಠಾನದ‌ ಅಧ್ಯಕ್ಷ‌ ಎಸ್. ಪ್ರದೀಪ ಕುಮಾರ ನೇತೃತ್ವದಲ್ಲಿ ಸಮಾರಂಭ ಜರಗಿತು.

ಹಿನ್ನೆಲೆ : ವಿದ್ಯಾ ದೇವತೆಯಾದ ಸರಸ್ವತಿ ದೇವಿಯ ಪ್ರಾರ್ಥನೆಯೊಂದಿಗೆ ಸಣ್ಣ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದರೆ ಮುಂದೆ ಮಕ್ಕಳು ಜ್ಞಾನವಂತರಾಗುತ್ತಾರೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಮೊದಲಿಗೆ ಸರಸ್ವತಿ ಪೂಜೆ ಮಾಡಿ, ಮಕ್ಕಳ ಬೆರಳ ತುದಿಯನ್ನು ಅವರ ತಾಯಿ- ತಂದೆ ಹಿಡಿದು ಅಕ್ಕಿಯ ಮೇಲೆ ಓಂ ನಾಮ, ಶ್ರೀನಾಮ ಹಾಗೂ ವರ್ಣಮಾಲೆಯ ಮೊದಲ ಅಕ್ಷರವನ್ನು ಬರೆಸಲಾಗುತ್ತದೆ.

Comments are closed.