ಬೆಂಗಳೂರು: ಬಹುನಿರೀಕ್ಷೆಯ ಬಿಗ್ಬಾಸ್ ಸೀಸನ್ ಸಿಕ್ಸ್ ಭಾನುವಾರದಿಂದ ಆರಂಭವಾಗಿದೆ. ಈ ಬಾರಿ ಬಿಗ್ಬಾಸ್ ಮನೆ ಪ್ರವೇಶಿಸುತ್ತಿರುವ ಸ್ಪರ್ಧಿಗಳನ್ನು ನೋಡಿದರೆ ವೀಕ್ಷಕರಿಗೆ ಒಂದು ಕ್ಷಣ ಅಚ್ಚರಿಯಾಗಬಹುದು. ಏಕೆಂದರೆ, ಆಯ್ಕೆಯಾಗಿರುವ ಸ್ಪರ್ಧಿಗಳಲ್ಲಿ ಸೆಲೆಬ್ರೆಟಿಗಳಿಗಿಂತ ಕಾಮನ್ ಮ್ಯಾನ್ಗಳ ಸಂಖ್ಯೆಯೇ ಹೆಚ್ಚಾಗಿದೆ.
ಖ್ಯಾತ ಹಿನ್ನೆಲೆ ಗಾಯಕ ನವೀನ್ ಸಜ್ಜು, ಪೋಷಕ ನಟಿ ಜಯಶ್ರೀ, ಒಗ್ಗರಣೆ ಡಬ್ಬಿ ಖ್ಯಾತಿಯ ಮುರಳಿ, ಅಂತರರಾಷ್ಟ್ರೀಯ ಖ್ಯಾತಿಯ ಬಾಡಿ ಬಿಲ್ಡರ್ ಜಿಮ್ ರವಿ, ಕ್ರಿಕೆಟರ್ ರಕ್ಷಿತಾ ರೈ ಹಾಗೂ ರ್ಯಾಪಿಡ್ ರಶ್ಮಿ, ನಟಿ ಗದಗದ ಸೋನು ಪಾಟೀಲ್, ಆ್ಯಂಡ್ರ್ಯೂ, ತೃತೀಯ ಲಿಂಗಿ ಆ್ಯಡಂ ಪಾಷಾ, ರೆಡಿಯೋ ಜಾಕಿ ಎಂ.ಜೆ.ರಾಕೇಶ್, ರಂಗಭೂಮಿ ನಟಿ ಅಕ್ಷತಾ ಪಾಂಡವಪುರ, ಕವಿತಾ ಗೌಡ, ನಟಿ ರೀಮಾ, ಸ್ನೇಹಾ ಆಚಾರ್ಯ, ರೈತ ಶಶಿಕುಮಾರ್, ಬಸ್ ಕಂಡಕ್ಟರ್ ಆನಂದ್ ಮಾಲಗತ್ತಿ, ಕಿರುತೆರೆ ನಟಿ ನಯನಾ ಪುಟ್ಟಸ್ವಾಮಿ ಹಾಗೂ ಕಲಾವಿದ ಧನರಾಜ್ ಇದ್ದಾರೆ.
ಈ ಸೀಸನ್ನಲ್ಲಿ ವಿಶೇಷವೆಂದರೆ ಶೋನಲ್ಲಿ 18 ಸ್ಪರ್ಧಿಗಳು ಭಾಗವಹಿಸುತ್ತಿದ್ದು, ಇವರಲ್ಲಿ ಹಲವು ಮಂದಿ ಯಾರಿಗೂ ತಿಳಿಯದ ಸಾಮಾನ್ಯ ಜನರೇ ಇದ್ದಾರೆ. ಇನ್ನು ಕೆಲವು ಮಂದಿ ಸಣ್ಣಪುಟ್ಟ ಪಾತ್ರಗಳಲ್ಲಿ ತೆರೆ ಮೇಲೆ ಪಾತ್ರ ನಿರ್ವಹಿಸಿದ ನಟಿಯರು ಇದ್ದಾರೆ. ಇನ್ನು ಬೆರಳೆಣಿಕೆಯಷ್ಟು ಮಾತ್ರ ಸೆಲೆಬ್ರೆಟಿಗಳು ಇದ್ದಾರೆ. ಈ ಬಾರಿ 9 ಜನ ಮಹಿಳೆಯರು, 8 ಜನ ಪುರುಷ ಸ್ಪರ್ಧಿಗಳಿದ್ದು, ಒಬ್ಬ ತೃತೀಯ ಲಿಂಗಿ (ಆ್ಯಡಂ) ಸ್ಪರ್ಧಿಸುತ್ತಿದ್ದಾರೆ. ಈ ಮೂಲಕ ಕನ್ನಡ ಬಿಗ್ಬಾಸ್ನಲ್ಲಿ ಮೊದಲ ಬಾರಿಗೆ ತೃತೀಯ ಲಿಂಗಿಯೊಬ್ಬರು ಸ್ಪರ್ಧಿಯಾಗಿದ್ದಾರೆ. ಬಿಗ್ಬಾಸ್ 6 ವಿಜಯದ ಮಾಲೆ ಯಾರ ಕೊರಳಿಗೆ ಬೀಳಲಿದೆ ಎಂಬುದಕ್ಕೆ ನೂರು ದಿನ ಕಾಯಬೇಕಿದೆ.
Comments are closed.