ಜಮ್ಮು ಕಾಶ್ಮೀರ: ಶಸ್ತ್ರಸಜ್ಜಿತರಾದ ಇಬ್ಬರು ಪಾಕಿಸ್ತಾನಿ ಉಗ್ರರು ಭಾರತ-ಪಾಕ್ ಗಡಿಯೊಳಗೆ ನುಗ್ಗಿ ಮೂವರು ಭಾರತೀಯ ಸೈನಿಕರನ್ನು ಹತ್ಯೆಗೈದಿದ್ದಾರೆ.
ಇಂದು ಮಧ್ಯಾಹ್ನ 1.45ಕ್ಕೆ ಜಮ್ಮು ಕಾಶ್ಮೀರದ ರಾಜೋರಿ ಜಿಲ್ಲೆಯಲ್ಲಿ ಗಡಿ ನಿಯಂತ್ರಣ ರೇಖೆ (ಎಲ್ಓಸಿ) ಪ್ರವೇಶಿಸಿದ ಪಾಕ್ ಉಗ್ರರು ಮತ್ತು ಭಾರತೀಯ ಸೈನಿಕರ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಮೂವರು ಸೈನಿಕರು ಹುತಾತ್ಮರಾಗಿದ್ದಾರೆ.
ದಾಳಿಯ ವೇಳೆ ಭಾರತೀಯ ಸೈನಿಕರು ಇಬ್ಬರು ಉಗ್ರರನ್ನು ಎನ್ಕೌಂಟರ್ ಮಾಡಿ ಸದೆಬಡಿದಿದ್ದಾರೆ. ಅವರ ಬಳಿಯಿದ್ದ ಎರಡು ಎಕೆ 47 ಗನ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ ವೇಳೆ ಮೂವರು ಸೈನಿಕರು ಸಾವನ್ನಪ್ಪಿದ್ದಾರೆ. ಇನ್ನೂ ಕೆಲವರಿಗೆ ಗಂಭೀರ ಗಾಯಗಳಾಗಿವೆ. ಅವರನ್ನು ಉದಾಂಪುರದ ಆರ್ಮಿ ಕಮ್ಯಾಂಡ್ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಸೇನಾಧಿಕಾರಿ ಮಾಹಿತಿ ನೀಡಿದ್ದಾರೆ.
Comments are closed.