ಪಂಪಾ: ಮತ್ತೊಮ್ಮ ಮಹಿಳೆ ಸೋಮವಾರ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನ ಪ್ರವೇಶಿಸಲು ಯತ್ನಿಸಿ ವಿಫಲರಾಗಿದ್ದಾರೆ.
ಅಯ್ಯಪ್ಪಸ್ವಾಮಿ ದರ್ಶನಕ್ಕೆ ಇಂದು ಬಿಂದು ಎಂಬ ದಲಿತ ಮಹಿಳೆ ಪೊಲೀಸರ ಭದ್ರತೆಯಲ್ಲೇ ದೇವಸ್ಥಾನ ಪ್ರವೇಶಿಸಲು ಯತ್ನಿಸಿದರು. ಆದರೆ ಪ್ರತಿಭಟನಾಕರರ ತೀವ್ರ ವಿರೋಧಕ್ಕೆ ಮಣಿದ ಮಹಿಳೆ ಅರ್ಧಕ್ಕೆ ವಾಪಸ್ ಬಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸ್ ಸಿಬ್ಬಂದಿಯೊಂದಿಗೆ ಕೇರಳ ಸಾರಿಗೆ ಸಂಸ್ಥೆಯ ಬಸ್ ನಲ್ಲಿ ತೆರಳುತ್ತಿದ್ದ ಬಿಂದು ಅವರನ್ನು ಪಂಪಾ ತಲುಪುವ ಮೊದಲೆ ಬಿಜೆಪಿ ಕಾರ್ಯಕರ್ತರು ಮತ್ತು ಅಯ್ಯಪ್ಪಸ್ವಾಮಿ ಭಕ್ತರು ತಡೆದಿದ್ದು, ಬಳಿಕ ಅವರನ್ನು ಪೊಲೀಸ್ ಜೀಪ್ ನಲ್ಲಿ ಸುರಕ್ಷಿತವಾಗಿ ಕರೆದೊಯ್ಯಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇರಳದ ಪ್ರಸಿದ್ಧ ಪುಣ್ಯ ಕ್ಷೇತ್ರ ಶಬರಿಮಲೆ ಅಯ್ಯಪ್ಪ ದೇಗುಲದೊಳಕ್ಕೆ ಯಾವುದೇ ವಯೋಮಾನದ ಮಹಿಳೆಯರು ಪ್ರವೇಶಿಸಬಹುದು ಎಂದು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದ ಬಳಿಕ ದೇಗುಲದ ಬಾಗಿಲು ತೆರೆದು 5 ದಿನಗಳಾಗುತ್ತಾ ಬಂದಿದ್ದರೂ, ಈ ವರೆಗೂ 10-50 ವರ್ಷದೊಳಗಿನ ಒಬ್ಬರೋ ಒಬ್ಬ ಮಹಿಳೆಯರೂ ದರ್ಶನ ಪಡೆದಿಲ್ಲ.
ಭಾನುವಾರ ದೇವರ ದರ್ಶನಕ್ಕೆ 6 ಮಹಿಳೆಯರು ಯತ್ನಸಿದರೂ ಅವರನ್ನು ತಡೆಯಲಾಯಿತು. ಈ ನಡುವೆ ಮಾಸಿಕ ಪೂಜೆ ನಿಮಿತ್ತ ತೆರೆಯಲಾಗಿರುವ ದೇಗುಲ ಇಂದು ರಾತ್ರಿ 10 ಗಂಟೆಗೆ ಬಂದ್ ಆಗಲಿದೆ. ಕಳೆದ 5 ದಿನಗಳಿಂದ ನಡೆದ ಹೈಡ್ರಾಮಾ, ಪ್ರತಿಭಟನೆಗೂ ತಾತ್ಕಾಲಿಕ ವಿರಾಮ ಸಿಗಲಿದೆ.
Comments are closed.