ರಾಷ್ಟ್ರೀಯ

ಭಾರತದಲ್ಲಿ ಕೋಟ್ಯಾಧಿಪತಿಗಳ ಸಂಖ್ಯೆ ಎಷ್ಟಿದೆ ಗೊತ್ತಾ..?

Pinterest LinkedIn Tumblr

ನವದೆಹಲಿ: ಕಳೆದ ನಾಲ್ಕು ವರ್ಷಗಳಲ್ಲಿ ದೇಶದಲ್ಲಿ ವರ್ಷಕ್ಕೆ ಒಂದು ಕೋಟಿ ರುಪಾಯಿಗೂ ಹೆಚ್ಚು ಆದಾಯ ಗಳಿಸುವವರ ಸಂಖ್ಯೆ ಶೇ.60ರಷ್ಟು ಹೆಚ್ಚಳವಾಗಿದೆ ಎಂದು ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಸೋಮವಾರ ತಿಳಿಸಿದೆ.

ಕಳೆದ ನಾಲ್ಕು ವರ್ಷಗಳ ತೆರಿಗೆದಾರರ ಅಂಕಿ ಸಂಖ್ಯೆಗಳನ್ನು ಬಿಡುಗಡೆ ಮಾಡಿದ ಸಿಬಿಡಿಟಿ, ವರ್ಷಕ್ಕೆ ಒಂದು ಕೋಟಿ ರುಪಾಯಿಗೂ ಹೆಚ್ಚು ಸಂಪಾದನೆ ಮಾಡುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದೆ.

2014 -15ರಲ್ಲಿ ಒಟ್ಟು 88, 649 ತೆರಿಗೆದಾರರು ತಮ್ಮ ವಾರ್ಷಿಕ ಆದಾಯ 1 ಕೋಟಿ ರುಪಾಯಿಗೂ ಹೆಚ್ಚಾಗಿದೆ ಎಂದು ಘೋಷಿಸಿಕೊಂಡಿದ್ದಾರೆ.

2017 -18ರಲ್ಲಿ 1,40,139 ತೆರಿಗೆದಾರರು ತಮ್ಮ ವಾರ್ಷಿಕ ಆದಾಯ 1 ಕೋಟಿ ರುಪಾಯಿ ಘೋಷಿಸಿಕೊಂಡಿದ್ದು, ಇದು ಶೇ.60ರಷ್ಟು ಹೆಚ್ಚಳ ಎಂದು ಸಿಬಿಡಿಟಿ ತಿಳಿಸಿದೆ.

ಇದೇ ಅವಧಿಯಲ್ಲಿ 1 ಕೋಟಿ ರುಪಾಯಿಗೂ ಹೆಚ್ಚು ಆದಾಯ ಗಳಿಸುವ ವೈಯಕ್ತಿಕ ತೆರಿಗೆದಾರರ ಸಂಖ್ಯೆಯೂ ಹೆಚ್ಚಳವಾಗಿದ್ದು, ಅವರ ಸಂಖ್ಯೆ 48,416ರಿಂದ 81,344 ಏರಿಕೆಯಾಗಿದೆ. ಇದು ಶೇ.68ರಷ್ಟು ಹೆಚ್ಚಳ ಎಂದು ಸಿಬಿಡಿಟಿ ಅಧ್ಯಕ್ಷ ಸುಶಿಲ್ ಚಂದ್ರ ಅವರು ಹೇಳಿದ್ದಾರೆ.

Comments are closed.