ಕರಾವಳಿ

ಡಿಸೆಂಬರ್ 23- 30 : ಕುಲಶೇಖರದಲ್ಲಿ ಲೋಕಕಲ್ಯಾಣಾರ್ಥ ಶನೀಶ್ವರ ಯಾಗ : ಡಾ.ಹೆಗ್ಗಡೆಯವರಿಗೆ ಅಹ್ವಾನ

Pinterest LinkedIn Tumblr

ಮಂಗಳೂರು : ಮಂಗಳೂರಿನ ಕುಲಶೇಖರದಲ್ಲಿರುವ ಮೇಗಿನಮನೆ ಪರಿಸರದಲ್ಲಿ ಡಿಸೆಂಬರ್ 23 ರಿಂದ 30 ರವರೆಗೆ ಲೋಕಕಲ್ಯಾಣಾರ್ಥವಾಗಿ ಶನೀಶ್ವರ ಯಾಗ ನಡೆಯಲಿದ್ದು . ಸಹಸ್ರ ಮುಖ ಶನೀಶ್ವರ ಯಾಗ ಸಮಿತಿಯ ಪ್ರಮುಖರು ಶನಿವಾರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆರ್ಶೀವಾದ ಮತ್ತು ಮಾರ್ಗದರ್ಶನ ಕೋರಿದರು.

ನಂತರ ಮಾತನಾಡಿದ ಸಮಿತಿಯ ಅಧ್ಯಕ್ಷರೂ ಆಗಿರುವ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್, ಹದಿನಾರು ವರ್ಷಗಳ ಬಳಿಕ ಇಂತಹ ಒಂದು ಬೃಹತ್ ಯಾಗ ಮಂಗಳೂರು ನಗರದಲ್ಲಿ ನಡೆಯುತ್ತಿದೆ. ಸಮಸ್ತ ಜನರ ಶ್ರೇಯೋಭಿವೃದ್ಧಿಯನ್ನು ದೇವರಲ್ಲಿ ಬೇಡುತ್ತಾ ಈ ಯಾಗದ ಕಾರ್ಯಕ್ರಮಗಳ ರೂಪುರೇಶೆ ಸಿದ್ಧಪಡಿಸಿದ್ದೇವೆ. ಈ ಯಾಗದ ಸಂದರ್ಭದಲ್ಲಿ ಪೂಜ್ಯ ಖಾವಂದರ ಮಾರ್ಗದರ್ಶನ, ಸಲಹೆ ನಮಗೆ ಅತ್ಯವಶ್ಯಕವಾಗಿದೆ. ಆದ್ದರಿಂದ ಅವರನ್ನು ಭಕ್ತಿಪೂರ್ವಕವಾಗಿ ಆಹ್ವಾನಿಸಲು ಅವರನ್ನು ಭೇಟಿಯಾಗಿದ್ದೇವೆ.

ಅನೇಕ ಸಾಧು, ಸಂತರು, ಸ್ವಾಮೀಜಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ. ಮಂಗಳೂರಿನ ಸಾವಿರಾರು ಆಸ್ತಿಕ ಬಂಧುಗಳು ಈ ಯಾಗದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸಹಸ್ರ ಮುಖ ಶನೀಶ್ವರ ಯಾಗ ಸಮಿತಿಯ ಗೌರವ ಅಧ್ಯಕ್ಷರಾಗಿರುವ ಮೋನಪ್ಪ ಭಂಡಾರಿ, ವಾಸುದೇವ ಕೊಟ್ಟಾರಿ, ಕಾರ್ಯಾಧ್ಯಕ್ಷ ಎಚ್ ಕೆ ಪುರುಷೋತ್ತಮ್, ಸಂಚಾಲಕರಾದ ರಾಮಚಂದ್ರ ಚೌಟ, ಪ್ರಧಾನ ಕಾರ್ಯದರ್ಶಿ ಕಿಶೋರ್ ಕೊಟ್ಟಾರಿ ಉಪಸ್ಥಿತರಿದ್ದರು

Comments are closed.