ಕರಾವಳಿ

ಮದ್ದಲೆ ಮಾಂತ್ರಿಕ ಹಿರಿಯಡ್ಕ ಗೋಪಾಲ ರಾವ್‌ಗೆ ಕಾರಂತ ಪುರಸ್ಕಾರ

Pinterest LinkedIn Tumblr

ಕಾರ್ಕಡ ಗೆಳೆಯರ ಬಳಗದ ಆಶ್ರಯದಲ್ಲಿ ಕಾರ್ಕಡ ಹೊಸ ಹಿರಿಯ ಪ್ರಾಥಮಿಕ ಶಾಲೆ ವಠಾರದಲ್ಲಿ ಕಾರಂತ ಸಂಸ್ಮರಣೆ ಹಾಗೂ ಕಾರಂತ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು.

ರಾಜ್ಯ ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಕಾರ್ಯಕ್ರಮ ಉದ್ಘಾಟಿಸಿ, ಕಾರಂತರ ಚಿಂತನೆಗಳು ಸಾರ್ವಕಾಲಿಕ ಸತ್ಯಗಳು ಹಾಗೂ ಅವರ ಅಧ್ಯಯನಶೀಲತೆ ಸರ್ವರಿಗೂ ಮಾದರಿಯಾಗಿದೆ. ಕಾರ್ಕಡ ಗೆಳೆಯರ ಬಳಗ ಈ ಕಾರ್ಯಕ್ರಮದ ಮೂಲಕ ಕಾರಂತರ ನೆನಪುಗಳನ್ನು ಶಾಶ್ವತವಾಗಿಸಿದೆ ಎಂದರು.

ಮುಖ್ಯ ಅತಿಥಿ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಮಾತನಾಡಿ, ಕಾರಂತರ ಹೆಸರಲ್ಲಿ ಕೊಡಮಾಡುವ ಪ್ರಶಸ್ತಿಯನ್ನು ಅವರ ಒಡನಾಡಿಯಾದ ಹಿರಿಯಡ್ಕ ಗೋಪಾಲ ರಾವ್‌ಗೆ ನೀಡುತ್ತಿರುವುದು ತುಂಬಾ ಅರ್ಥಪೂರ್ಣವಾಗಿದೆ ಎಂದರು
ಗೆಳೆಯರ ಬಳಗದ ಅಧ್ಯಕ್ಷ ಕೆ. ತಾರನಾಥ ಹೊಳ್ಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭ ಹಿರಿಯ ಮದ್ದಲೆ ವಾದಕ, ಕಾರಂತರ ಒಡನಾಡಿ ಹಿರಿಯಡ್ಕ ಗೋಪಾಲ ರಾವ್‌ಗೆ ಕಾರಂತ ಪ್ರಶಸ್ತಿ ನೀಡಿ ಗೌರವಿಸಸಲಾಯಿತು.

ಸಾಹಿತಿ ಬೆಳಗೋಡು ರಮೇಶ್ ಭಟ್ ಕಾರಂತರ ಕುರಿತು ಸಂಸ್ಮರಣೆ ಮಾತನಾಡಿದರು. ಮಂಗಳೂರು ಕಲ್ಕೂರ ಪ್ರತಿಷ್ಠಾನದ ಎಸ್. ಪ್ರದೀಪಕುಮಾರ್ ಕಲ್ಕೂರ ಕಾರಂತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಸಾಲಿಗ್ರಾಮ ಪ.ಪಂ. ಸದಸ್ಯ ಕಾರ್ಕಡ ರಾಜು ಪೂಜಾರಿ, ಸಂಜೀವ ದೇವಾಡಿಗ, ಗಿರಿಜಾ ಪೂಜಾರ್‍ತಿ, ಧರ್ಮಸ್ಥಳ ಜನಜಾಗೃತಿ ಯೋಜನೆಯ ಜನಜಾಗೃತಿ ಸಮಿತಿ ಅಧ್ಯಕ್ಷ ಅಚ್ಯುತ್ ಪೂಜಾರಿ, ಕೋಟ ವಿವೇಕ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಜಗದೀಶ್ ನಾವುಡ, ಹಿರಿಯ ಸಾಂಸ್ಕೃತಿಕ ಚಿಂತಕ ಜನಾರ್ಧನ ಹಂದೆ, ಗೆಳೆಯರ ಬಳಗದ ಕಾರ್ಯದರ್ಶಿ ಚಂದ್ರಕಾಂತ್ ನಾರಿ ಉಪಸ್ಥಿತರಿದ್ದರು.

ಗೆಳೆಯರ ಬಳಗದ ಅಧ್ಯಕ್ಷ ಕೆ.ತಾರನಾಥ ಹೊಳ್ಳ ಸ್ವಾಗತಿಸಿ, ಮಾಜಿ ಕಾರ್ಯದರ್ಶಿ ಕೆ.ಶಿವರಾಮ ಕಾರ್ಯಕ್ರಮ ನಿರೂಪಿಸಿದರು.

Comments are closed.