ಅಂತರಾಷ್ಟ್ರೀಯ

ವಿಶ್ವದ ಅತಿ ಉದ್ದದ ಸಮುದ್ರ ಸೇತುವೆಯನ್ನು ಲೋಕಾರ್ಪಣೆ ಮಾಡಿದ ಚೀನಾ ಅಧ್ಯಕ್ಷ ಕ್ಸಿ- ಜಿನ್ ಪಿಂಗ್

Pinterest LinkedIn Tumblr

ಹಾಂಗ್ ಕಾಂಗ್ :ಜುಹೈನಲ್ಲಿ ಇಂದು ನಡೆದ ಸಮಾರಂಭದಲ್ಲಿ ಹಾಂಗ್ ಕಾಂಗ್ ಹಾಗೂ ಜುಹೈ ಸಂಪರ್ಕಿಸುವ ವಿಶ್ವದ ಅತಿ ಉದ್ದದ ಸಮುದ್ರದ ಸೇತುವೆಯನ್ನು ಚೀನಾ ಅಧ್ಯಕ್ಷ ಕ್ಸಿ- ಜಿನ್ ಪಿಂಗ್ ಲೋಕಾರ್ಪಣೆಗೊಳಿಸಿದರು.

ಚೀನಾದ ಪ್ರಮುಖ ನಗರವಾಗಿರುವ ಹಾಂಗ್ ಕಾಂಗ್ ಹಾಗೂ ಜುಹೈ ಸಂಪರ್ಕಿಸಿರುವ ಸುಮಾರು 55 ಕಿಲೋ ಮೀಟರ್ ಉದ್ದದ ಈ ಸೇತುವೆಯನ್ನು ಪರ್ಲ್ ಸಮುದ್ರದ ಮೇಲೆ ನಿರ್ಮಿಸಲಾಗಿದ್ದು, ಸಂಚಾರ ದಟ್ಟಣೆ ನಿಯಂತ್ರಣ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ.

400, 000 ಟನ್ ಸ್ಟೀಲ್ ನಿಂದ ಕೂಡಿರುವ ಈ ಸೇತುವೆ ನಿರ್ಮಾಣಕ್ಕಾಗಿ ಒಂಬತ್ತು ವರ್ಷ ತೆಗೆದುಕೊಳ್ಳಲಾಗಿದೆ. ಭೂಕಂಪನ ಹಾಗೂ ಚಂಡಮಾರುತದಿಂದಾಗಿ ಸ್ಯಾನ್ ಫ್ರಾನ್ಸಿಸ್ಕೋ ರೀತಿಯ ಗೋಲ್ಡೆನ್ ಗೇಟ್ ಸೇತುವೆಯನ್ನು ನಾಲ್ಕೈದು ಬಾರಿ ನಿರ್ಮಿಸಲಾಗಿದೆ.

ಸೇತುವೆ ನಿರ್ಮಾಣಕ್ಕಾಗಿ 20 ಬಿಲಿಯನ್ ಅಮೆರಿಕನ್ ಡಾಲರ್ ವೆಚ್ಚ ಮಾಡಲಾಗಿದ್ದು, ಕೇವಲ 30 ನಿಮಿಷಗಳಲ್ಲಿ ಹಾಂಗ್ ಕಾಂಗ್ ಹಾಗೂ ಜುಹೈ ನಡುವೆ ಸಂಚರಿಸಬಹುದಾಗಿದೆ.

ಪ್ರಸ್ತುತ ಮೂರು ಗಂಟೆ ಬೇಕಾಗುತ್ತದೆ. ಆದಾಗ್ಯೂ, ರಾಜಕೀಯವಾಗಿ ಜನರನ್ನು ಒಲಿಸಿಕೊಳ್ಳಲು ದುಬಾರಿ ಬೆಚ್ಚದ ಸೇತುವೆ ನಿರ್ಮಿಸಲಾಗಿದೆ ಎಂಬಂತಹ ಮಾತುಗಳು ಕೇಳಿಬರುತ್ತಿವೆ.

ಹಾಂಗ್ ಕಾಂಗ್, ಮಾಕಾಹು, ಮತ್ತಿತರ ದಕ್ಷಿಣ ಚೀನಾದ ನಗರಗಳಲ್ಲಿ ಆರ್ಥಿಕ ಕೇಂದ್ರ ಗುರಿಯೊಂದಿಗೆ ಈ ಸಮುದ್ರ ಸೇತುವೆಯನ್ನು ಲೋಕಾರ್ಪಣೆಗೊಳಿಸಲಾಗಿದೆ.

Comments are closed.