ರಾಷ್ಟ್ರೀಯ

ಶಬರಿಮಲೆ ಮಹಿಳೆಯರ ಪ್ರವೇಶದ ಬಗ್ಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದೇನು…?

Pinterest LinkedIn Tumblr

ಮುಂಬೈ: ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರಿಗೂ ಅವಕಾಶ ಕಲ್ಪಿಸಿದ ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ಭಾರೀ ಪ್ರತಿಭಟನೆ ನಡೆಯುತ್ತಿರುವ ಬೆನ್ನಲ್ಲೇ ಪ್ರಾರ್ಥನೆಯ ಹಕ್ಕು ಎಂದರೆ ಅಪವಿತ್ರಗೊಳಿಸುವುದಲ್ಲ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಮಂಗಳವಾರ ಹೇಳಿದ್ದಾರೆ.

ನಾನು ಒಬ್ಬ ಕೇಂದ್ರ ಸಚಿವೆಯಾಗಿರುವುದರಿಂದ ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ಮಾತನಾಡುವುದಿಲ್ಲ. ಸುಪ್ರೀಂ ತೀರ್ಪಿನ ಬಗ್ಗೆ ಟೀಕೆ ಮಾಡಲು ನಾನು ಯಾರು ಅಲ್ಲ ಎಂದರು. ಆದರೆ ರಕ್ತದ ಕಲೆಗಳಿರುವ ನ್ಯಾಪ್ಕಿನ್ ಜತೆ ಸ್ನೇಹಿತರ ಮನೆಗೆ ಹೋದರೆ ಹೇಗೆ ಎಂಬ ಸಾಮಾನ್ಯ ಪರಿಜ್ಞಾನ ಇರಬೇಕು. ನ್ಯಾಪ್ಕಿನ್ ಜತೆ ಸ್ನೇಹಿತರ ಮನೆಗೆ ಹೋಗಲು ನಮ್ಮಿಂದ ಸಾಧ್ಯವಿಲ್ಲ ಎಂದ ಮೇಲೆ ದೇವಸ್ಥಾನಕ್ಕೆ ಹೋಗುವುದು ಸರಿಯೇ? ನಮಗೆ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುವ ಹಕ್ಕು ಇದೆ. ಆದರೆ ಅದನ್ನು ಅಪವಿತ್ರಗೊಳಿಸುವ ಹಕ್ಕು ಇಲ್ಲ ಎಂದು ಸ್ಮೃತಿ ಇರಾನಿ ತಿಳಿಸಿದ್ದಾರೆ.

ಇಂದು ಮುಂಬೈನಲ್ಲಿ ‘ಯಂಗ್​ ಥಿಂಕರ್’ ಸಮಾವೇಶದಲ್ಲಿ ಮಾತನಾಡಿದ ಕೇಂದ್ರ ಸಚಿವೆ, ಪೂಜಿಸುವುದು ಮತ್ತು ಅಪವಿತ್ರಗೊಳಿಸುವ ವಿಚಾರದ ನಡುವೆ ಬಹಳ ವ್ಯತ್ಯಾಸ ಇದೆ. ಅದನ್ನು ನಾವು ಗುರುತಿಸಿ, ಗೌರವಿಸಬೇಕು ಎಂದರು.

ಹಿಂದೂ ಧರ್ಮವನ್ನು ಪಾಲಿಸುವ ನಾನು ಪಾರ್ಸಿಧರ್ಮದ ವ್ಯಕ್ತಿಯೊಂದಿಗೆ ಮದುವೆಯಾಗಿದ್ದೇನೆ. ನಮ್ಮ ಇಬ್ಬರು ಮಕ್ಕಳು ಪಾರ್ಸಿ ಧರ್ಮವನ್ನು ಪಾಲಿಸುತ್ತಾರೆ. ನಾವು ಪಾರ್ಸಿ ಆರಾಧ್ಯ ದೇವರಾದ ಅಗ್ನಿ ದೇವಾಲಯಕ್ಕೆ ಭೇಟಿನೀಡುತ್ತೇವೆ. ನಾನು ನನ್ನ ಮಗ ಹುಟ್ಟಿದಾಗ ಅಗ್ನಿ ದೇವಾಲಯಕ್ಕೆ ಭೇಟಿ ನೀಡಿದಾಗ ನಾನು ದೇವಾಸ್ಥಾನದ ಹೊರಗೆ ನಿಂತು ಮಗುವನ್ನು ನನ್ನ ಗಂಡನ ಕೈಗೆ ನೀಡಿದೆ, ನಾನು ದೇವಾಲಯದಿಂದ ದೂರ ಉಳಿದೆ ಎಂದರು.

Comments are closed.