ಕರ್ನಾಟಕ

ರಾಹುಲ್‌ ನಮ್ಮ ಪ್ರಧಾನಿ ಅಭ್ಯರ್ಥಿ: ಮಲ್ಲಿಕಾರ್ಜುನ ಖರ್ಗೆ

Pinterest LinkedIn Tumblr

2
ಕಲಬುರಗಿ: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರೇ ಮುಂದಿನ ಲೋಕಸಭೆ ಚುನಾವಣೆಯ ಪ್ರಧಾನಿ ಅಭ್ಯರ್ಥಿ ಎಂದು ಲೋಕಸಭೆ ಕಾಂಗ್ರೆಸ್‌ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ಮಾಜಿ ಸಚಿವ ಪಿ ಚಿದಂಬರಂ ಅವರ ಹೇಳಿಕೆಯೇ ಹೊರತು ಪಕ್ಷದ್ದಲ್ಲ. ವೈಯಕ್ತಿಕವಾದದ್ದು. ಯಾವ ಸಂದರ್ಭದಲ್ಲಿ ಮತ್ತು ಯಾವ ಅರ್ಥದಲ್ಲಿ ಚಿದಂಬರಂ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ನಾನು ರಾಹುಲ್ ಗಾಂಧಿಯೇ ಪ್ರಧಾನಿ ಅಭ್ಯರ್ಥಿಯಾಗಬೇಕು ಎಂದು ಬಯಸುತ್ತೇನೆ ಎಂದು ಹೇಳಿದ್ದಾರೆ.

ಮಹಾಘಟಬಂಧನ್‌ ಆದ ಬಳಿಕ, ಬದಲಾವಣೆ ಏನಾದರೂ ಆದರೆ, ಅದು ಚುನಾವಣೆಯ ಬಳಿಕವೇ ಹೊರತು ಈಗಲ್ಲ. ಪ್ರಸ್ತುತ ರಾಹುಲ್‌ ಗಾಂಧಿಯೇ ನಮ್ಮ ಪಕ್ಷದ ಪ್ರಧಾನಿ ಅಭ್ಯುರ್ಥಿ ಎಂಬುದು ನಿಸ್ಸಂಶಯ ಎಂದು ಖರ್ಗೆ ಹೇಳಿದ್ದಾರೆ.

ಭ್ರಷ್ಟಾಚಾರ ಆರೋಪ ಹೊತ್ತಿರುವ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನ್ ನೇರವಾಗಿ ಪ್ರಧಾನಿ ನರೇಂದ್ರ ಮೋದಿಗೆ ಪರಿಚಯದ ವ್ಯಕ್ತಿ ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

ಇಂದು ಮಾದ್ಯಮಗಳಿಂದ ತಿಳಿದುಕೊಂಡಿದ್ದೇನೆ. ರಾಕೇಶ್ ಆಸ್ಥಾನ್ ಜಾರ್ಖಂಡ್ ಮೂಲದವರು ಹಾಗೂ ಗುಜರಾತ್ ಕೇಡರ್ ಐಪಿಎಸ್ ಅಧಿಕಾರಿ. ಆಸ್ಥಾನ್‌ ಅವರನ್ನ ನೇರವಾಗಿ ಪ್ರಧಾನಿ ಕಚೇರಿಯವರೇ ನೇಮಕ ಮಾಡಿಕೊಂಡಿದ್ದಾರೆ. ಅಂತಹ ಅಧಿಕಾರಿಗೆ ಈ ರೀತಿಯಾಗಿ ಮೋದಿ ಬೆಂಬಲ ಇದೇ ಅಂತಾ ಆದ್ರೆ, ನೀವೆ ಯೋಚನೆ ಮಾಡಿ ದೇಶದಲ್ಲಿ ಅವರು ಯಾವ ರೀತಿ ವಾತಾವರಣ ಸೃಷ್ಟಿ ಮಾಡ್ತಿದ್ದಾರೆ ಎಂದು ಖರ್ಗೆ ಪ್ರಶ್ನಿಸಿದ ಅವರು, ಕೂಡಲೇ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು

Comments are closed.