ಕರಾವಳಿ

ನೆನೆದ ಮೆಂತ್ಯೆಕಾಳಿನ ಆರೋಗ್ಯಕರ ಗುಣಗಳು

Pinterest LinkedIn Tumblr

ಅಡುಗೆ ಮನೆಯಲ್ಲಿ ಸಣ್ಣ ಡಬ್ಬದಲ್ಲಿರುವಂತಹ ಸಾಂಬಾರ ಪದಾರ್ಥಗಳಿಂದ ಹಲವಾರು ರೋಗಗಳನ್ನೇ ಗೆಲ್ಲಬಹುದು ಮತ್ತು ತಡೆಯಬಹುದು ಎಂದು ನಮ್ಮ ಹಿರಿಯರು ಹೇಳುತ್ತಲಿದ್ದರು. ಇದು ನಿಜ ಕೂಡ. ಆದರೆ ನಾವು ಆಸ್ಪತ್ರೆಯ ಔಷಧಿಗೆ ಒಗ್ಗಿಕೊಂಡಿರುವ ಕಾರಣದಿಂದಾಗಿ ನಮಗೆ ಇದರಲ್ಲಿರುವಂತಹ ಆರೋಗ್ಯಕಾರಿ ಗುಣಗಳು ಕಾಣುವುದೇ ಇಲ್ಲ. ನಾವು ಇದನ್ನು ಬಳಸಿದರೆ ಒಂದೆರಡು ದಿನಗಳು ಮಾತ್ರ.

ಇಷ್ಟು ವೇಗವಾಗಿ ಯಾವುದೇ ನೈಸರ್ಗಿಕ ಮದ್ದುಗಳು ಪರಿಣಾಮ ನೀಡಲ್ಲ. ಈ ಲೇಖನದಲ್ಲಿ ನಾವು ನೀರಿನಲ್ಲಿ ನೆನೆಸಿಟ್ಟ ಮೆಂತೆ ಕಾಳಿನ ಆರೋಗ್ಯ ಲಾಭಗಳ ಬಗ್ಗೆ ತಿಳಿಯುವ. ಇದು ಉರಿಯೂತ ಶಮನಕಾರಿ ಎಂದು ಎಲ್ಲರಿಗೂ ತಿಳಿದಿರುವ ವಿಚಾರ. ಮೆಂತ್ಯೆಯಲ್ಲಿ ಆಯಂಟಿಆಕ್ಸಿಡೆಂಟ್, ಸೂಕ್ಷ್ಮಾಣು ವಿರೋಧಿ ಗುಣಗಳು ತುಂಬಿವೆ. ಇದರಿಂದ ಹೆಚ್ಚಾಗಿ ಮೆಂತೆಯನ್ನು ಹಲವಾರು ರೋಗಗಳ ಶಮನಕ್ಕೆ ಬಳಸಿಕೊಳ್ಳುವರು. ಇದರ ಲಾಭಗಳ ಬಗ್ಗೆ ಮತ್ತಷ್ಟು ತಿಳಿಯುವ.

ಮೆಂತ್ಯೆ ಕಾಳಿನಿಂದ ಸಿಗುವ ಕೆಲವು ಆರೋಗ್ಯ ಲಾಭಗಳು

ತೂಕ ಇಳಿಸಿಕೊಳ್ಳಲು
ಮೆಂತೆಯು ತೂಕ ಕಳೆದುಕೊಳ್ಳಲು ಹೇಗೆ ನೆರವಾಗುವುದು? ಇದರಲ್ಲಿ ಇರುವಂತಹ ನಾರಿನಾಂಶವು ಹಸಿವನ್ನು ನಿವಾರಣೆ ಮಾಡುವುದು ಮತ್ತು ತೂಕ ಕಳೆದುಕೊಳ್ಳಲು ನೆರವಾಗುವುದು. ಖಾಲಿ ಹೊಟ್ಟೆಯಲ್ಲಿ ಕೆಲವು ಮೆಂತೆ ಕಾಳುಗಳನ್ನು ಜಗಿಯಿರಿ.

ಮಧುಮೇಹಿಗಳಿಗೆ ನೆರವು
ಮೆಂತೆ ಕಾಳುಗಳಲ್ಲಿ ಇರುವಂತಹ ನೈಸರ್ಗಿಕ ಹೀರಿಕೊಳ್ಳುವ ನಾರಿನಾಂಶವಾಗಿರುವಂತಹ ಗ್ಯಾಲಕ್ಟೋಮನ್ನನ್ ರಕ್ತದಲ್ಲಿ ಸಕ್ಕರೆ ಹೀರುವಿಕೆಯನ್ನು ನಿಧಾನವಾಗಿಸಿ ಮಧುಮೇಹಿಗಳಿಗೆ ನೆರವಾಗುವುದು. 2010ರಲ್ಲಿ ಭಾರತದ ಜರ್ನಲ್ ಆಫ್ ಬಯೊಕೆಮೆಸ್ಟ್ರಿ ಆಯಂಡ್ ಬಯೊಫಿಸಿಕ್ಸ್ ನಲ್ಲಿ ಪ್ರಕಟಗೊಂಡಿರುವ ಅಧ್ಯಯನದ ಪ್ರಕಾರ ಮೆಂತ್ಯೆ ಕಾಳು ಮಧುಮೇಹಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣ ತಗ್ಗಿಸುವುದು ಮಾತ್ರವಲ್ಲದೆ ಕಿಡ್ನಿ ಮತ್ತು ಹೃದಯವು ಹಾನಿಯಾಗದಂತೆ ತಡೆಯುವುದು.

ಚರ್ಮದ ಆರೋಗ್ಯ
ಮೆಂತೆ ಕಾಳುಗಳಲ್ಲಿ ಇರುವಂತಹ ಆಯಂಟಿಆಕ್ಸಿಡೆಂಟ್ ಮತ್ತು ಉರಿಯೂತ ಶಮನಕಾರಿ ಗುಣಗಳು ಚರ್ಮದ ಆರೋಗ್ಯಕ್ಕೆ ಅತೀ ಅಗತ್ಯ. ಸುಟ್ಟ, ಬಿಸಿ ನೀರು ಬಿದ್ದ, ಗಾಯ, ಮೊಡವೆ, ಇಸಬು, ಕಾಲಿನ ಅಲ್ಸರ್ ಮತ್ತು ಕೆಲವು ಇತರ ಚರ್ಮದ ಉರಿಯೂತ ನಿವಾರಣೆ ಮಾಡುವುದು. ಮೆಂತ್ಯೆಕಾಳುಗಳಲ್ಲಿ ಇರುವಂತಹ ಉರಿಯೂತ ಶಮನಕಾರಿ ಗುಣವು ಸ್ಟಿರಾಯ್ಡ್ ಮತ್ತು ಗ್ಲೈಕೊಸೈಡ್ ನಿಂದಾಗಿರುವುದು.

ಕೂದಲಿನ ಆರೋಗ್ಯ
ಕೂದಲಿನ ಆರೋಗ್ಯಕ್ಕೆ ಮೆಂತೆ ಕಾಳುಗಳು ತುಂಬಾ ಒಳ್ಳೆಯದು. ಇದರ ಪೇಸ್ಟ್ ಮಾಡಿಕೊಂಡು ನೀವು ಕೂದಲಿನ ಆರೋಗ್ಯಕ್ಕೆ ಬಳಸಬಹುದು. ತೆಂಗಿನೆಣ್ಣೆಯಲ್ಲಿ ರಾತ್ರಿ ವೇಳೆ ನೆನೆಸಿಟ್ಟ ಮೆಂತ್ಯೆ ಕಾಳುಗಳನ್ನು ಬೇಯಿಸಿ, ತಲೆಗೆ ಮಸಾಜ್ ಮಾಡಿ. ಕೂದಲು ತೆಳ್ಳಗಾಗುವುದು ಮತ್ತು ಉದುರುವುದನ್ನು ತಡೆಯಲು ಇದು ತುಂಬಾ ಪ್ರಮುಖ ಮನೆಮದ್ದು. ತಲೆಹೊಟ್ಟಿನ ಸಮಸ್ಯೆಗೂ ಇದನ್ನು ಬಳಸಬಹುದು.

ಕಾಮಾಸಕ್ತಿ ಹೆಚ್ಚಿಸುವುದು
ಪುರುಷರಲ್ಲಿ ಹರ್ನಿಯಾ ಮತ್ತು ಬೊಕ್ಕ ತಲೆಗೆ ಮೆಂತೆ ಕಾಳು ತುಂಬಾ ಪರಿಣಾಮಕಾರಿಯಾಗಿದೆ. ಅದೇ ರೀತಿಯಾಗಿ ಇದನ್ನು ನಿಮಿರು ದೌರ್ಬಲ್ಯಕ್ಕೂ ಚಿಕಿತ್ಸೆಯಾಗಿ ಬಳಸಬಹುದು. ಮೆಂತ್ಯೆಕಾಳುಗಳು ಟೆಸ್ಟೊಸ್ಟೆರಾನ್ ಮಟ್ಟವನ್ನು ಹೆಚ್ಚಿಸಿ, ಕಾಮಾಸಕ್ತಿ ಬರುವಂತೆ ಮಾಡುವುದು. ಮೆಂತ್ಯೆಯ ಸಪ್ಲಿಮೆಂಟ್ ಗಳಿಂದ ಲೈಂಗಿಕ ಆಸಕ್ತಿ ಹೆಚ್ಚಳ ಮತ್ತು ಪ್ರದರ್ಶನ ಉತ್ತಮವಾಗಿರುವುದು ಕಂಡುಬಂದಿದೆ. 2011ರಲ್ಲಿ ಪೈಥೋಥೆರಪಿ ರಿಸರ್ಚ್ ಜರ್ನಲ್ ನಲ್ಲಿ ಪ್ರಕಟಗೊಂಡಿರುವ ವರದಿಯ ಪ್ರಕಾರ ಮೆಂತ್ಯೆಯು ಶಕ್ತಿ ನೀಡುವುದು ಮಾತ್ರವಲ್ಲದೆ 25ರಿಂದ 52ರ ಹರೆಯದ ಪುರುಷರಲ್ಲಿ ಕಾಮಾಸಕ್ತಿ ಕೆರಳಿಸುವುದು. ಇದು ಸಾಮಾನ್ಯ ಟೆಸ್ಟೊಸ್ಟೆರಾನ್ ಮಟ್ಟವನ್ನು ಕಾಪಾಡಲು ನೆರವಾಗುವುದು. ನಿಮಿರು ದೌರ್ಬಲ್ಯವಿರುವಂತಹ ಪುರುಷರಿಗೆ ಆರು ವಾರಗಳ ಕಾಲ 600 ಮಿ.ಗ್ರಾಂ ಮೆಂತ್ಯೆ ಸಪ್ಲಿಮೆಂಟ್ ನ್ನು ಪ್ರತಿನಿತ್ಯ ನೀಡಿದಾಗ ಎಲ್ಲಾ ಪುರುಷರಲ್ಲಿಯೂ ಕಾಮಾಸಕ್ತಿ ಹೆಚ್ಚಾಗಿರುವುದು ಕಂಡುಬಂದಿದೆ.

ಮಹಿಳೆಯರ ಆರೋಗ್ಯ
ಮೆಂತೆಕಾಳಿನಲ್ಲಿ ಈಸ್ಟ್ರೋಜನ್ ನಂತಹ ಕೆಲವೊಂದು ಅಂಶಗಳಾಗಿರುವ ಐಸೊಫ್ಲವೊನ್ಸ್ ಮತ್ತು ಡಯೋಸ್ಜೆನಿನ್ ಎನ್ನುವ ಅಂಶಗಳಿವೆ. ಇದು ಸೆಳೆತ ಕಡಿಮೆ ಮಾಡುವುದು ಮತ್ತು ಋತುಚಕ್ರದ ಮೊದಲಿನ ಕಿರಿಕಿರಿ ತಪ್ಪಿಸುವುದು. ಈ ಅಂಶಗಳು ಋತುಬಂಧದ ಕೆಲವು ಸಮಸ್ಯೆಗಳಾಗಿರುವಂತಹ ಮನಸ್ಥಿತಿ ಬದಲಾವಣೆ ಮತ್ತು ಬಿಸಿಉರಿ ತಪ್ಪಿಸುವುದು. ಗರ್ಭನಾಳವನ್ನು ಹಿಗ್ಗಿಸುವ ಮೂಲಕ ಮತ್ತು ಹೆರಿಗೆ ನೋವನ್ನು ಕಡಿಮೆ ಮಾಡಿ ಹೆರಿಗೆ ವೇಳೆ ಮೆಂತ್ಯೆ ಕಾಳು ನೆರವಾಗುವುದು. ಆದರೆ ಅತಿಯಾಗಿ ಇದರ ಸೇವನೆ ಮಾಡಿದರೆ ಅದರಿಂದ ಅಕಾಲಿಕ ಹೆರಿಗೆ ಮತ್ತು ಗರ್ಭಪಾತ ಕಾಣಿಸಬಹುದು.

ಕ್ಯಾನ್ಸರ್ ತಡೆಯುವುದು ಮತ್ತು ಸಾಧ್ಯತೆಯ ಚಿಕಿತ್ಸೆ
ಕ್ಯಾನ್ಸರ್ ಚಿಕಿತ್ಸೆ ಹಾಗೂ ಇದನ್ನು ತಡೆಯಲು ಮೆಂತ್ಯೆ ಕಾಳು ತುಂಬಾ ನೆರವಾಗುವುದು. ಮೆಂತೆಕಾಳುಗಳಲ್ಲಿ ಇರುವಂತಹ ನಾರಿನಾಂಶವು ಆಹಾರದಲ್ಲಿರುವಂತಹ ವಿಷವನ್ನು ಒಟ್ಟಾಗಿಸಿ ದೇಹದಿಂದ ಹೊರಗೆ ಹಾಕುವುದು. ಇದರಿಂದ ಕರುಳಿನ ಕ್ಯಾನ್ಸರ್ ನಿಂದ ರಕ್ಷಿಸಬಹುದು. 2005ರಲ್ಲಿ ಸೆಲ್ ಬಯೋಲಾಜಿ ಇಂಟರ್ ನ್ಯಾಶನಲ್ ಜರ್ನಲ್ ನಲ್ಲಿ ಇಲಿಗಳ ಮೇಲೆ ನಡೆಸಿರುವ ಪ್ರಯೋಗದಿಂದ ಪಡೆದಿರುವ ವರದಿಯ ಪ್ರಕಾರ ಮೆಂತ್ಯೆ ಕಾಳುಗಳು ಸ್ತನ ಕ್ಯಾನ್ಸರ್ ನ್ನು ಕೂಡ ತಡೆಯುವ ಸಾಮರ್ಥ್ಯ ಹೊಂದಿದೆ.

ಬಾಣಂತಿ ಮಹಿಳೆಯರಲ್ಲಿ ಹಾಲಿನ ಉತ್ಪತ್ತಿ ಹೆಚ್ಚಿಸುವುದು
ಬಾಣಂತಿ ಮಹಿಳೆಯರಿಗೆ ಹೆಚ್ಚಾಗಿ ಮೆಂತ್ಯೆ ಕಾಳಿನಿಂದ ಮಾಡಿರುವ ಆಹಾರ ನೀಡಲಾಗುತ್ತದೆ. ಇದರಲ್ಲಿ ಇರುವಂತಹ ಡೈಸ್ಜೆಜಿನ್ ಎನ್ನುವ ಅಂಶವು ಹಾಲಿನ ಉತ್ಪತ್ತಿ ಹೆಚ್ಚಿಸುವುದು. ಹಲವಾರು ಅಧ್ಯಯನಗಳು ಕೂಡ ಇದನ್ನು ಹೇಳಿವೆ. ಬಾಣಂತಿ ಮಹಿಳೆಯರು ಮೆಂತೆ ಕಾಳುಗಳನ್ನು ಬಳಸಿಕೊಳ್ಳಬೇಕು ಎಂದು ಬಿಎಂಸಿ ಕಾಂಪ್ಲಿಮೆಂಟರಿ ಆಯಂಟ್ ಆಲ್ಟರ್ನೇಟಿವ್ ಮೆಡಿಸಿನ್ 2013ರಲ್ಲಿ ಪ್ರಕಟಿಸಿದ ವರದಿಯು ಹೇಳಿದೆ. 304 ಮಂದಿಯನ್ನು ಈ ಅಧ್ಯಯನಕ್ಕೆ ಒಳಪಡಿಸಿದಾಗ ಇದರಲ್ಲಿ ಮೆಂತ್ಯೆಕಾಳು ತುಂಬಾ ಪರಿಣಾಮಕಾರಿ ಎಂದು ಸಾಬೀತಾಗಿದೆ.

ತಿನ್ನುವ ಸಮಸ್ಯೆ ನಿವಾರಣೆ
ಮೆಂತೆಕಾಳುಗಳು ಇದರಲ್ಲಿರುವ ಕೆಲವೊಂದು ಅಂಶಗಳಿಂದಾಗಿ ಹಸಿವನ್ನು ಹೆಚ್ಚಿಸುವುದು. 1993ರಲ್ಲಿ ಜರ್ನಲ್ ಫಾರ್ಮಕಾಲಜಿ ಬಯೊಕೆಮಿಸ್ಟ್ರಿ ಆಯಂಡ್ ಬಿಹೇವಿಯರ್ ನಲ್ಲಿ ಪ್ರಕಟಗೊಂಡಿರುವ ಅಧ್ಯಯನ ವರದಿಯ ಪ್ರಕಾರ ಮೆಂತೆಕಾಳುಗಳು ಇಲಿಗಳಲ್ಲಿ ಹಸಿವನ್ನು ಹೆಚ್ಚು ಮಾಡಿ.

ಜೀರ್ಣಕ್ರಿಯೆ
ಹಲವಾರು ರೀತಿಯ ಜೀರ್ಣಕ್ರಿಯೆ ಸಮಸ್ಯೆಯನ್ನು ಮೆಂತೆಕಾಳು ನಿವಾರಣೆ ಮಾಡುವುದು. ಇದರಲ್ಲಿ ಪ್ರಮುಖವಾಗಿ ಹೊಟ್ಟೆಯ ಉರಿಯೂತ, ಕಿರಿಕಿರಿ, ಮಲಬದ್ಧತೆ, ಅಜೀರ್ಣ ಮತ್ತು ಎದೆಯುರಿ. ಹೊಟ್ಟೆಯ ಕಾಯಿಲೆ ಹಾಗೂ ಅಲ್ಸರೇಟಿವ್ ಕೊಲೈಟಿಸ್ ನ ಚಿಕಿತ್ಸೆಗೆ ಕೆಲವೊಂದು ಗಿಡಮೂಲಿಕೆಗಳೊಂದಿಗೆ ಮೆಂತ್ಯೆಕಾಳುಗಳನ್ನು ಕೂಡ ಬಳಸಲಾಗುವುದು.

ಸಂಧಿವಾತಕ್ಕೆ ಚಿಕಿತ್ಸೆ
ಜರ್ನಲ್ ಇಂಟರ್ನ್ಯಾಷನಲ್ ಇಮ್ಯುನೊಫಾರ್ಮಾಕೊಲಜಿಯಲ್ಲಿ 2012ರಲ್ಲಿ ಪ್ರಕಟಗೊಂಡಿರುವ ಅಧ್ಯಯನ ವರದಿಯ ಪ್ರಕಾರ, ಮೆಂತ್ಯೆಕಾಳುಗಳಲ್ಲಿ ಇರುವಂತಹ ಆಯಂಟಿಆಕ್ಸಿಡೆಂಟ್ ಹಾಗೂ ಉರಿಯೂತ ಶಮನಕಾರಿ ಗುಣಗಳು ಸಂಧಿವಾತವಿರುವ ಇಲಿಗಳಿಗೆ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ. ಇದರಿಂದ ಅಧ್ಯಯನ ತಂಡವು ಸಂಧಿವಾತ ನಿವಾರಣೆ ಮಾಡಲು ಮೆಂತ್ಯೆಕಾಳುಗಳು ತುಂಬಾ ಪರಿಣಾಮಕಾರಿ ಎಂದು ಕಂಡುಕೊಂಡಿವೆ.

ಮೆಂತೆಕಾಳು’ ದೇಹದ ತೂಕ ಇಳಿಸುವಲ್ಲಿ ಎತ್ತಿದ ಕೈ
ನಮ್ಮ ಅಡುಗೆಮನೆಯಲ್ಲಿ ಸಾಮಾನ್ಯವಾಗಿ ಬಳಕೆಯಾಗುವ ಮೆಂತೆ ಕಾಳು (Trigonella foenum-graecum) ನೋಡಲು ಪುಟ್ಟದಾದರೂ ಪೋಷಕಾಂಶಗಳ ದೃಷ್ಟಿಯಿಂದ ದೊಡ್ಡದೇ ಆಗಿದೆ. ಇದರ ಸೇವನೆಯ ಮೂಲಕ ಪಡೆಯಬಹುದಾದ ಪ್ರಯೋಜನಗಳ ಪಟ್ಟಿಯಲ್ಲಿ ಪ್ರಮುಖವಾದುದೆಂದರೆ ಜೀರ್ಣಕ್ರಿಯೆಗೆ ಸಹಕಾರ ಹಾಗೂ ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುವುದು. ಮೆಂತೆಕಾಳುಗಳಲ್ಲಿ ಗ್ಯಾಲಾಕ್ಟೋಮಾನ್ನನ್ (Galactomannan) ಎಂಬ ನೀರಿನಲ್ಲಿ ಕರಗುವ ಸಕ್ಕರೆಯಂತಹ ಪೋಷಕಾಂಶವಾಗಿದೆ (heteropolysaccharide). ಈ ಪೋಷಕಾಂಶವೇ ತೂಕ ಇಳಿಸಲು ನೆರವಾಗುವ ದೊಡ್ಡ ಗುಣ ಹೊಂದಿದೆ. ಅಂದರೆ ಇದು ಕೊಬ್ಬನ್ನು ಕರಗಿಸುವುದಿಲ್ಲ, ಬದಲಿಗೆ ಹೊಟ್ಟೆ ತುಂಬಿರುವ ಭಾವನೆ ಮೂಡಿಸಿ ಅಗತ್ಯಕ್ಕೂ ಹೆಚ್ಚು ತಿನ್ನದೇ ಇರಲು ನೆರವಾಗುವ ಮೂಲಕ ತೂಕ ಇಳಿಕೆಗೆ ಪರೋಕ್ಷವಾಗಿ ನೆರವಾಗುತ್ತದೆ. ಅಷ್ಟೇ ಅಲ್ಲ, ಜೀವರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸುವ ಮೂಲಕ ಅಧಿಕ ರಕ್ತದೊತ್ತಡ ಹಾಗೂ ಮಧುಮೇಹವನ್ನೂ ನಿಯಂತ್ರಿಸಲು ನೆರವಾಗುತ್ತದೆ.

ಹುರಿದ ಮೆಂತೆಕಾಳು
ತೂಕ ಇಳಿಸಲು ಇದಕ್ಕಿಂತ ಸರಳವಾದ ವಿಧಾನ ಇನ್ನೊಂದಿರಲಿಕ್ಕಿಲ್ಲ. ಅಷ್ಟೇ ಅಲ್ಲ, ಇದರೊಂದಿಗೆ ಬೇರೆ ಯಾವ ಔಷಧಿಯನ್ನೂ ಸೇವಿಸಬೇಕಾಗಿಲ್ಲ. ಕೊಂಚ ಮೆಂತೆಕಾಳುಗಳನ್ನು ಬಾಣಲಿಯಲ್ಲಿ ಮಧ್ಯಮ ಉರಿಯಲ್ಲಿ ಕೊಂಚ ಹೊತ್ತು ಹುರಿಯಿರಿ. ಕೊಂಚವೇ ಕಂದು ಬಣ್ಣಕ್ಕೆ ತಿರುಗಿದರೆ ಸಾಕು, ಕಪ್ಪಾಗಬಾರದು. ಬಳಿಕ ಇದನ್ನು ಮಿಕ್ಸಿಯ ಚಿಕ್ಕ ಜಾರ್ ನಲ್ಲಿ ಹಾಕಿ ನೀರಿಲ್ಲದೇ ಒಣದಾಗಿ ಪುಡಿ ಮಾಡಿ ಒಂದು ಚಿಕ್ಕ ಬಾಟಲಿಯಲ್ಲಿ ಹಾಕಿಡಿ. ಪ್ರತಿದಿನ ಬೆಳಿಗ್ಗೆ ಒಂದು ದೊಡ್ಡ ಚಮಚ ಪುಡಿಯನ್ನು ಉಗುರುಬೆಚ್ಚನೆಯ ನೀರಿನಲ್ಲಿ ಹಾಕಿ ದಿನದ ಪ್ರಥಮ ಆಹಾರವಾಗಿ ಸೇವಿಸಿ.

ಮೊಳಕೆ ಬರಿಸಿದ ಮೆಂತೆ ಕಾಳು
ಮೊಳಕೆ ಮೂಡಿದ ಮೆಂತೆಕಾಳುಗಳಲ್ಲಿ ಅತಿ ಹೆಚ್ಚಿನ ಪ್ರಮಾಣದ ಕ್ಯಾರೋಟೀನ್, ವಿಟಮಿನ್ ಎ,ಇ,ಸಿ ಹಾಗೂ ಬಿ, ಕ್ಯಾಲ್ಸಿಯಂ, ಮೆಗ್ನೀಶಿಯಂ, ಸತು, ಪೊಟ್ಯಾಶಿಯಂ, ಅಮೈನೋ ಆಮ್ಲಗಳು, ಜೀರ್ಣಕ್ರಿಯೆಗೆ ಸಹಕರಿಸುವ ಖನಿಜಗಳು ಹಾಗೂ ಇನ್ನಿತರ ಪೋಷಕಾಂಶಗಳಿರುತ್ತವೆ. ಮೊಳಕೆ ಬಂದ ಮೆಂತೆಕಾಳುಗಳನ್ನು ಪ್ರತಿದಿನ ಬೆಳಿಗ್ಗೆ ಪ್ರಥಮ ಆಹಾರವಾಗಿ ಸೇವಿಸುವ ಮೂಲಕವೂ ತೂಕ ಇಳಿಕೆ ಸುಲಭವಾಗುತ್ತದೆ.
ಒಂದು ತೆಳುವಾದ ಸ್ವಚ್ಛಹತ್ತಿಯ ಬಟ್ಟೆಯನ್ನು ನೀರಿನಲ್ಲಿ ನೆನೆಸಿ. ಇದರಲ್ಲಿ ಮೆಂತೆಕಾಳುಗಳನ್ನಿರಿಸಿ ಬಟ್ಟೆಯನ್ನು ಮಡಚಿ. ಬಟ್ಟೆ ಬಿಚ್ಚಿಕೊಳ್ಳದಂತೆ ಇದರ ಮೇಲೊಂದು ಕಲ್ಲು ಅಥವಾ ನೀರು ತುಂಬಿದ ಚಿಕ್ಕ ಪಾತ್ರೆಯನ್ನಿರಿಸಿ. ಇದು ಮೂರು ದಿನಗಳವರೆಗೆ ಹಾಗೇ ಇರಲಿ. ಈಗ ಮೆಂತೆ ಕಾಳುಗಳಲ್ಲಿ ಮೊಳಕೆ ಮೂಡಿರುತ್ತದೆ. ಅಂದಿನಿಂದಲೇ ಅಥವಾ ಮರುದಿನದ ಸೇವನೆಗೂ ಇರಿಸಿಕೊಳ್ಳಲು ಕೊಂಚ ನೀರನ್ನು ಚಿಮುಕಿಸುತ್ತಿದ್ದರಾಯಿತು. ಮೊಳಕೆ ಬೆಳೆಯುತ್ತಲೇ ಹೋಗುತ್ತದೆ. ಮೊಳಕೆ ಒಂದಿಂಚಿಗೂ ಹೆಚ್ಚು ಬೆಳೆಯುವ ಮುನ್ನವೇ ಸೇವಿಸಬೇಕು.

ಮೆಂತೆಯ ಟೀ
ಒಂದು ವೇಳೆ ಸ್ಥೂಲಕಾಯದೊಂದಿಗೆ ಮಧುಮೇಹವೂ ಆವರಿಸಿದ್ದರೆ ಈ ವಿಧಾನ ತುಂಬಾ ಉಪಯುಕ್ತವಾಗಿದೆ. ಇದರ ಸೇವನೆಯಿಂದ ತೂಕ ಇಳಿಕೆಯಾಗುವುದು ಮಾತ್ರವಲ್ಲ, ಜೀರ್ಣಕ್ರಿಯೆ ಸುಲಭವಾಗುವುದು, ಅಧಿಕ ರಕ್ತದೊತ್ತಡ ಕಡಿಮೆಯಾಗುವುದು ಮೊದಲಾದ ಪ್ರಯೋಜನಗಳ ಸಹಿತ ಇನ್ನೂ ಹಲವಾರು ಪ್ರಯೋಜನಗಳನ್ನು ಪಡೆಯಬಹುದು.

ಈ ಟೀ ತಯಾರಿಸುವ ವಿಧಾನ
*ಮೊದಲು ಕೊಂಚ ಮೆಂತೆಕಾಳುಗಳನ್ನು ಕೊಂಚವೇ ನೀರಿನೊಂದಿಗೆ ನುಣ್ಣಗೆ ಅರೆಯಿರಿ.
*ಟೀ ಮಾಡುವ ಪಾತ್ರೆಯಲ್ಲಿ ಕೊಂಚ ನೀರನ್ನು ಕುದಿಸಿ.
*ಅರೆದ ಮೆಂತೆಯನ್ನು ಕುದಿಯುವ ನೀರಿಗೆ ಹಾಕಿ.
*ಇದರೊಂದಿಗೆ ನಿಮ್ಮ ಆಯ್ಕೆಯ ಮಸಾಲೆ, ಉದಾಹರಣೆಗೆ ಶುಂಠಿ, ಕಾಳುಮೆಣಸು, ದಾಲ್ಚಿನ್ನಿ ಪುಡಿ ಮೊದಲಾದವುಗಳನ್ನು ಚಿಟಿಕೆಯಷ್ಟು ಸೇರಿಸಿ.
*ಸುಮಾರು ಐದು ನಿಮಿಷಗಳ ಕಾಲ ಈ ನೀರು ಚಿಕ್ಕ ಉರಿಯಲ್ಲಿ ಕುದಿಯಲಿ. ಬಳಿಕ ಉರಿ ಆರಿಸಿ ತಣಿಯಲು ಬಿಡಿ.
*ಈ ಟೀಯನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪ್ರತಿದಿನವೂ ಕುಡಿಯಿರಿ.

ಮೆಂತೆ ಮತ್ತು ಜೇನು
ತೂಕ ಇಳಿಸಲು ಇವೆರಡು ಉತ್ತಮವಾದ ಪರಿಣಾಮವನ್ನು ಬೀರುತ್ತವೆ. ಪರಿಣಾಮವಾಗಿ ತೂಕ ಇಳಿಯುವ ಜೊತೆಗೇ ನೈಸರ್ಗಿಕವಾಗಿ ಆಕರ್ಷಕ ಮೈಕಟ್ಟು ಪಡೆಯಲು ನೆರವಾಗುತ್ತದೆ.
*ಮೊದಲು ಮೆಂತೆಯನ್ನು ಮಿಕ್ಸಿಯ ಗ್ರೈಂಡರ್ ನಲ್ಲಿ ಕೊಂಚ ದೊರಗಾಗಿಯೇ ಇರುವಂತೆ ಪುಡಿಮಾಡಿ.
*ಒಂದು ಪಾತ್ರೆಯಲ್ಲಿ ಕೊಂಚ ನೀರನ್ನು ಕುದಿಸಿ ಮೆಂತೆಪುಡಿಯನ್ನು ಸೇರಿಸಿ ಒಂದು ನಿಮಿಷ ಕುದಿಸಿದ ಬಳಿಕ ಉರಿ ಆರಿಸಿ. *ಸುಮಾರು ಮೂರು ಘಂಟೆಗಳ ಕಾಲ ಇದನ್ನು ಹಾಗೇ ಬಿಡಿ.
*ಈ ನೀರಿನಿಂದ ಮೆಂತೆಕಾಳುಗಳನ್ನು ಸೋಸಿ ತೆಗೆಯಿರಿ
*ಈ ನೀರಿಗೆ ಕೊಂಚವೇ ಜೇನು ಹಾಗೂ ಲಿಂಬೆರಸವನ್ನು ಬೆರೆಸಿ. *ಉತ್ತಮ ಪರಿಣಾಮಕ್ಕಾಗಿ ಪ್ರತಿದಿನ ಬೆಳಿಗ್ಗೆ ಪ್ರಥಮ ಆಹಾರವಾಗಿ ಒಂದು ಲೋಟ ಸೇವಿಸಿ.

ತೂಕ ಇಳಿಯಲು ಮೆಂತೆ ಹೇಗೆ ನೆರವಾಗುತ್ತದೆ?
ಅಲ್ಲದೇ ಮೆಂತೆಯಲ್ಲಿ ಕರಗುವ ನಾರು ಸಹಾ ಹೆಚ್ಚಿನ ಪ್ರಮಾಣದಲ್ಲಿದ್ದು 75%ರಷ್ಟಿದೆ. ಇದು ಮಲಬದ್ದತೆಯನ್ನು ನಿವಾರಿಸಿ ಜೀರ್ಣಕ್ರಿಯೆಯನ್ನು ಸುಲಭವಾಗಿಸುತ್ತದೆ. ಜೀವರಾಸಾಯನಿಕ ಕ್ರಿಯೆ ಚುರುಕುಗೊಳ್ಳುವ ಮೂಲಕ ಅನಿವಾರ್ಯವಾಗಿ ದೇಹದಲ್ಲಿ ಕೊಬ್ಬಿನ ಸಂಗ್ರಹವನ್ನು ಬಳಸಿಕೊಳ್ಳಬೇಕಾಗಿ ಬರುತ್ತದೆ. ಇದೇ ತೂಕ ಇಳಿಕೆಯ ರಹಸ್ಯ. ವಿಶೇಷವಾಗಿ ಸೊಂಟದಲ್ಲಿರುವ ಕೊಬ್ಬು ಕರಗಲು ಮೆಂತೆ ಸಹಕಾರಿಯಾಗಿದೆ. ಇದರ ಇನ್ನೊಂದು ಪ್ರಯೋಜನವೆಂದರೆ ಹಸಿವಿನ ಭಾವನೆಯನ್ನು ಇಲ್ಲವಾಗಿಸುವುದು. ಇಡಿಯ ದಿನ ಹೊಟ್ಟೆ ತುಂಬಿದಂತೆಯೇ ಇರುವ ಭಾವನೆ ಇದ್ದರೆ ಏನನ್ನೂ ತಿನ್ನಲು ಮನಸ್ಸಾಗುವುದಿಲ್ಲ. ಊಟದ ಹೊತ್ತಿನಲ್ಲಿಯೂ ಅಗತ್ಯಕ್ಕಿಂತ ಹೆಚ್ಚು ತಿನ್ನುವುದನ್ನು ತಡೆಯುವ ಮೂಲಕ ಅನಗತ್ಯ ಆಹಾರ ಸೇವನೆಗೂ ಕಡಿವಾಣ ಹಾಕಿದಂತಾಗುತ್ತದೆ. ತನ್ಮೂಲಕ ಹೆಚ್ಚಿನ ಶ್ರಮವಿಲ್ಲದೇ ತೂಕ ಇಳಿಸಲು ಮೆಂತೆ ಅದ್ಭುತವಾದ ಆಯ್ಕೆಯಾಗಿದೆ.

Comments are closed.