ಕರಾವಳಿ

ರಾಫೆಲ್ ಯುದ್ಧವಿಮಾನ ಖರೀದಿಯ ತನಿಖೆಯನ್ನು ಜಂಟಿ ಪಾರ್ಲಿಮೆಂಡರಿ ಸಮಿತಿ (JPC)ಗೆ ವಹಿಸುವಂತೆ ಆಗ್ರಹ

Pinterest LinkedIn Tumblr

ಮಂಗಳೂರು : ‘ದೇಶದಲ್ಲಿ ಯಾವುದೇ ಹಗರಣವಾದರೂ ಅದರ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸಬೇಕೆಂದು ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) ಹಿಂದಿನಿಂದಲೂ ಒತ್ತಾಯಿಸುತ್ತಾ ಬಂದಿದೆ. ಅದೇ ರೀತಿ ರಾಫೆಲ್ ಯುದ್ಧ ವಿಮಾನ ಖರೀದಿಯಲ್ಲಿ ನಡೆದಿದೆ ಎನ್ನಲಾದ ಹಗರಣ ಅಥವಾ ಭೃಷ್ಟಾಚಾರವನ್ನು ಕೂಡಲೇ ಜಂಟಿ ಪಾರ್ಲಿಮೆಂಡರಿ ಸಮಿತಿ  (JPC)ಗೆ ವಹಿಸಬೇಕು’ ಎಂದು ಸಿಪಿಐನ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ವಿ ಕುಕ್ಯಾನ್ ಹೇಳಿದರು.

ಅವರು ರಾಫೆಲ್ ಯುದ್ಧ ವಿಮಾನ ಖರೀದಿಯಲ್ಲಿ ನಡೆದಿದೆ ಎನ್ನಲಾದ ಭೃಷ್ಟಾಚಾರದ ತನಿಖೆಗಾಗಿ ಒತ್ತಾಯಿಸಿ ಸಿಪಿ‌ಐ ದೇಶದಾದ್ಯಂತ ನಡೆಸುತ್ತಿರುವ ಪ್ರತಿಭಟನೆಯ ಅಂಗವಾಗಿ ಮಂಗಳೂರಲ್ಲಿ ಜಿಲ್ಲಾಧಿಕಾರಿ ಕಛೇರಿ ಎದುರು ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡುತ್ತಿದ್ದರು.

‘ಹಿಂದೆ ಯುಪಿಎ ಸರಕಾರ ರಾಫೆಲ್ ಯುದ್ಧ ವಿಮಾನ ಕರೀದಿಗೆ ಪ್ರಯತ್ನಿಸಿದ ಸಮಯದಲ್ಲಿ ವಿಮಾನ ಒಂದಕ್ಕೆ ೬೩೭ ಕೋಟಿ ಎಂದು ನಮೂದಾಗಿತ್ತು. ಆದರೆ ಈಗ ಕೇಂದ್ರದಲ್ಲಿರುವ ಸರಕಾರ ವಿಮಾನ ಒಂದಕ್ಕೆ 1660 ಕೋಟಿ ತೆತ್ತು 36 ಅದೇ ವಿಮಾನಗಳನ್ನು ಕರೀದಿಸುತ್ತಿದೆ. ಅಂದರೆ ಸಾಧಾರಣ 40000 ಕೋಟಿ ಹಣವನ್ನು ಹೆಚ್ಚಿಗೆ ತೆತ್ತಂತಾಗಿದೆ. ಇದು ಹರಗಣವಲ್ಲದೆ ಮತ್ತಿನ್ನೇನು?’ ಎಂದು ಅವರು ಪ್ರಶ್ನಿಸಿದರು.

ಸಿಪಿಐ ಮುಂದಾಳು ಎಚ್ ವಿ ರಾವ್ ಮಾತನಾಡಿ, ದೇಶದಲ್ಲಿರುವ ಅನುಭವಸ್ಥ ಸಾರ್ವಜನಿಕ ಸಂಸ್ಥೆಗೆ ಈ ವಿಮಾನಗಳ ನಿರ್ವಹಣೆ ನೀಡುವುದರ ಬದಲು ಮೊನ್ನೆ ಮೊನ್ನೆ ಆರಂಭಗೊಂಡ ಅಂಬಾನಿ ಸಂಸ್ಥೆಗೆ ಕೊಟ್ಟಿರುವ ಹಿಂದಿನ ಉದ್ಧೇಶವೇನು ಎಂಬುದರ ಬಗ್ಗೆಯೂ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಕ್ರಾಂತಿಗೀತೆ ಮತ್ತು ಘೋಷಣೆಗಳೊಂದಿಗೆ ಪ್ರಾರಂಭವಾದ ಪ್ರತಿಭಟನೆಯನ್ನು ಸುರೇಶ್ ಬಂಟ್ವಾಳ್ ಸ್ವಾಗತಿಸಿ ಪ್ರತಿಭಟನೆಯ ಉದ್ಧೇಶವನ್ನು ವಿವರಿಸಿದರು. ಬಿ ಶೇಖರ ವಂದಿಸಿದರು. ಕಾರ್ಯಕ್ರಮದಲ್ಲಿ ಸಿಪಿ‌ಐ ಮುಂದಾಳುಗಳಾದ ಕೆ ವಿ ಭಟ್, ಪ್ರಭಾಕರ ರಾವ್, ಆರ್ ಡಿ ಸೋನ್ಸ್, ಬಾಬು ಭಂಡಾರಿ, ಕರುಣಾಕರ, ಶಿವಪ್ಪ, ಸರಸ್ವತಿ, ಸುಲೋಚನ, ಭಾರತಿ ಮುಂತಾದವರು ಭಾಗವಹಿಸಿದ್ದರು.

Comments are closed.