ಕರ್ನಾಟಕ

ರಾಜ್ಯ ಮಹಿಳಾ ಕಾಂಗ್ರೆಸ್​​ ಘಟಕದ ಅಧ್ಯಕ್ಷೆ ಸ್ಥಾನದಿಂದ ಲಕ್ಷ್ಮೀ ಹೆಬ್ಬಾಳ್ಕರ್​​ಗೆ ಕೋಕ್​​​

Pinterest LinkedIn Tumblr


ಬೆಂಗಳೂರು: ಜಾರಕಿಹೊಳಿ ಬ್ರದರ್ಸ್​​ ವಿರುದ್ಧ ಬಂಡಾಯ ಸೇರಿದಂತೆ ಹಲವು ವಿವಾದಗಳ ಕಾರಣದಿಂದಾಗಿಯೇ ಸದಾ ಸುದ್ದಿಯಲ್ಲಿರುವ ರಾಜ್ಯ ಮಹಿಳಾ ಕಾಂಗ್ರೆಸ್​​ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಸಂಕಷ್ಟ ಎದುರಾಗಿದೆ. ಸದ್ಯದಲ್ಲೇ ಅಧ್ಯಕ್ಷ ಸ್ಥಾನದಿಂದ ಶಾಸಕಿ ಹೆಬ್ಬಾಳ್ಕರ್​​ ಅವರನ್ನು ಕೆಳಗಿಳಿಸಲು ಕಾಂಗ್ರೆಸ್​ನಲ್ಲಿ ಚಿಂತನೆ ನಡೆದಿದೆ ಎನ್ನಲಾಗಿದೆ.

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​​ ಅವರ ಪದಚ್ಯುತಿಗೆ ಮುಹೂರ್ತ ಸಿದ್ಧವಾಗಿದೆ. ಇಲ್ಲಿಯವರೆಗೂ ಕೇವಲ ಗಾಳಿ ಸುದ್ದಿಯಂತೆ ಹರಿದಾಡುತ್ತಿದ್ದ ಅಧ್ಯಕ್ಷೆ ಸ್ಥಾನದಿಂದ ಕೋಕ್​​ ವಿಚಾರ ನಿಜವಾಗುವ ಹಂತದಲ್ಲಿದೆ. ರಾಜ್ಯ ಕಾಂಗ್ರೆಸ್​ ಮಹಿಳಾ ಅಧ್ಯಕ್ಷೆ ಸ್ಥಾನದಿಂದ ಹೆಬ್ಬಾಳ್ಕರ್ ಅವರನ್ನು ಕೆಳಿಗಿಳಿಸಲು ದೆಹಲಿಯಲ್ಲಿ ಮುಹೂರ್ತ ನಿಗದಿ ಮಾಡಿದ್ಧಾರೆ ಎಂದು ಹೇಳುತ್ತಿವೆ ಉನ್ನತ ಮೂಲಗಳು.

ಹೆಬ್ಬಾಳ್ಕರ್ ಅಧ್ಯಕ್ಷೆ ಪಟ್ಟವನ್ನು ಕಳೆದುಕೊಳ್ಳುವುದು ಬಹುತೇಕ ಖಚಿತ ಎಂಬ ಸುದ್ದಿ ಹಾರಿದಾಡುತಿದ್ದಂತೆಯೇ ಕಾಂಗ್ರೆಸ್​​ನ ಹಲವು ಮಹಿಳ ನಾಯಕಿಯರು ಲಾಬಿ ನಡೆಸುತ್ತಿದ್ಧಾರೆ ಎಂಬ ಚರ್ಚೆ ನಡೆಯುತ್ತಿದೆ. ತೆರವಾಗುವ ಅಧ್ಯಕ್ಷೆ ಸ್ಥಾನ ತುಂಬಲು ರಾಜ್ಯ ಕಾಂಗ್ರೆಸ್​​ ನಾಯಕರ ಮುಖಾಂತರವೇ ಲಾಬಿಗೆ ಮುಂದಾಗಿದ್ದಾರೆ. ಈ ರೇಸ್​ನಲ್ಲಿ ಸುಮಾರು 12 ಜನ ಮಹಿಳಾ ನಾಯಕಿಯರು ಎಂದು ಹೇಳಲಾಗ್ತಿದೆ.

ಮುಂದಿನ ಲೋಕಸಭಾ ಚುನಾವಣೆವರೆಗೂ ನಾನೇ ಮುಂದುವರೆಯುತ್ತೇನೆ ಎಂದು ಶಾಸಕಿ ಲಕ್ಮೀ ಹೆಬ್ಬಾಳ್ಕರ್​​​ ಮನವಿ ಮಾಡಿದ್ಧಾರೆ. ಹಿರಿಯ ಕಾಂಗ್ರೆಸ್​​ ನಾಯಕ ಗುಲಾಂ ನಬೀ ಆಜಾದ್​​ ಮೂಲಕ ಸುಶ್ಮಿತಾ ದೇವ್ ಅವರಿಗೆ ಹೇಳಿಸಿದ್ದಾರೆ. ಯಾರ ಮನವಿಗೂ ಸೊಪ್ಪು ಹಾಕದ ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಶ್ಮಿತಾ ದೇವ್ ಸದ್ಯದಲ್ಲೇ ಹೊಸ ಹೆಸರನ್ನು ಘೋಷಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಈ ಹಿಂದೆಯೇ ಅಧ್ಯಕ್ಷೆ ಸ್ಥಾನದಿಂದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಅವರನ್ನು ಕಿತ್ತೊಗೆಯುವುದು ಬಹುತೇಖ ಖಚಿತವಾಗಿತ್ತು. ಲಕ್ಷ್ಮೀ ಹೆಬ್ಬಾಳ್ಕರ್‌ ​​ಅವರನ್ನು ಪದಚ್ಯುತಗೊಳಿಸಲು ಹೈಕಮಾಂಡ್​​ ಮಟ್ಟದಲ್ಲಿ ಜಾರಕಿಹೊಳಿ ಬ್ರದರ್ಸ್ ನಡೆಸಿದ ಪ್ರಯತ್ನಕ್ಕೂ ಫಲಿಸಿತ್ತು. ಸಿದ್ದರಾಮಯ್ಯನವರ ಮೂಲಕ ಒತ್ತಡ ಹಾಕಿಸಿದ್ದ ಜಾರಕೊಹೊಳಿ ಸಹೋದರರು ಹೆಬ್ಬಾಳ್ಕರ್​​​ ವೇಗಕ್ಕೆ ತೆರೆ ಎಳೆದರು.

ಮೊದಲಿಗೆ ನಾಲ್ವರು ಮಹಿಳಾ‌ ನಾಯಕಿಯರು ಕಾಂಗ್ರೆಸ್​​ ಮಹಿಳಾ ಅಧ್ಯಕ್ಷೆ ಸ್ಥಾನಕ್ಕಾಗಿ ಮಂಚೂಣಿಯಲ್ಲಿದ್ದರು. ಇದೀಗ ಮತ್ತಷ್ಟು ಜನ ಮಹಿಳಾ ನಾಯಕಿಯರು ಲಾಬಿ ನಡೆಸಲು ಮುಂದಾಗಿದ್ದು, ಪಟ್ಟಿಯಲ್ಲಿ ಸಂಖ್ಯೆ 12ಕ್ಕೇರಿದೆ. ಮಾಜಿ‌ ಮೇಯರ್ ಪದ್ಮಾವತಿ ಸೇರಿದಂತೆ ಹಲವರು ಡಿಕೆಶಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮೂಲಕ ಒತ್ತಡ ಹಾಕಿಸುತ್ತಾ ಅಧ್ಯಕ್ಷೆ ಸ್ಥಾನಕ್ಕೆ ಆಯ್ಕೆ ಮಾಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂಬ ಮಾತುಗಳು ಬಲವಾಗಿ ಕೇಳಿ ಬಂದಿದ್ದವು.

Comments are closed.