ಮನೋರಂಜನೆ

2017ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಮೊದಲ ಅತ್ಯುತ್ತಮ ಚಿತ್ರ ಶುದ್ಧಿ

Pinterest LinkedIn Tumblr

2017ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದೆ. ಈ ಬಾರಿಯ ಅತ್ಯುತ್ತಮ ಚಿತ್ರ ಎಂಬ ಖ್ಯಾತಿ ‘ಶುದ್ಧಿ’ ಸಿನಿಮಾ ಪಾಲಾಗಿದೆ. ಮಾರ್ಚ್-22 ಸಿನಿಮಾ 2ನೇ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು, ಮೂರನೇ ಅತ್ಯುತ್ತಮ ಚಿತ್ರವಾಗಿ ಪಡ್ಡಾಯಿ ಆಯ್ಕೆಯಾಗಿದೆ. ‘ಮಂಜರಿ’ ಚಿತ್ರದ ಅಭಿನಯಕ್ಕಾಗಿ ವಿಶೃತ್ ನಾಯ್ಕಗೆ ಅತ್ಯುತ್ತಮ ನಟ ಪ್ರಶಸ್ತಿ ಪಡೆದರೆ, ಹಿರಿಯ ನಟಿ ತಾರಾ ಅನುರಾಧಾ ಅತ್ಯುತ್ತಮ ನಟಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಹಾಗೆಯೇ ಪುನೀತ್ ರಾಜ್ ಕುಮಾರ್ ಅಭಿನಯದ ‘ರಾಜಕುಮಾರ’ ಸಿನಿಮಾಗೆ ಈ ಬಾರಿಯ ಅತ್ಯುತ್ತಮ ಮನರಂಜನಾ ಚಿತ್ರ ಪಶಸ್ತಿ ಲಭಿಸಿದೆ.

ಮೊದಲ ಅತ್ಯುತ್ತಮ ಚಿತ್ರ
1-ಶುದ್ಧಿ

2-ಮಾರ್ಚ್ 22

3-ಪಡ್ಡಾಯಿ

ಅತ್ಯುತ್ತಮ ನಟ- ವಿಶೃತ್ ನಾಯ್ಕ

ಅತ್ಯುತ್ತಮ ನಟಿ-ತಾರಾ ಅನುರಾಧಾ (ಹೆಬ್ಬೆಟ್ ರಾಮಕ್ಕ)

ವಿಶೇಷ ಸಮಾಜಿಕ ಕಾಳಜಿಯ ಚಿತ್ರ-ಹೆಬ್ಬಟ್ ರಾಮಕ್ಕ
ಅತ್ಯುತ್ತಮ ಮನರಂಜನಾ ಚಿತ್ರ- ರಾಜಕುಮಾರ
ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ- ಅಯನ
ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ- ಸೋಫಿಯಾ(ಕೊಂಕಣಿ)
ಅತ್ಯುತ್ತಮ ಮಕ್ಕಳ ಚಿತ್ರ- ಎಳೆಯರು ನಾವು ಗೆಳೆಯರು
ಅತ್ಯುತ್ತಮ ಪೋಷಕ ನಟ- ಮಂಜುನಾಥ ಹೆಗಡೆ (ಲಕ್ಷ್ಮೀನಾರಾಯಣರ ಪ್ರಪಂಚಾನೇ ಬೇರೆ)
ಅತ್ಯುತ್ತಮ ಪೋಷಕ ನಟಿ- ರೇಖಾ (ಮೂಕ ನಾಯಕ)
ಅತ್ಯುತ್ತಮ ಚಿತ್ರಕಥೆ- ವೆಂಕಟ್ ಭಾರದ್ವಾಜ್ (ಕೆಂಪಿರ್ವೆ)
ಅತ್ಯುತ್ತಮ ಸಂಭಾಷಣೆ- ಎಸ್.ಜಿ.ಸಿದ್ದರಾಮಯ್ಯ(ಹೆಬ್ಬೆಟ್ಟು ರಾಮಕ್ಕ)
ಅತ್ಯುತ್ತಮ ಛಾಯಾಗ್ರಹಣ- ಸಂತೋಶ್ ರೈ ಪತಾಜೆ, (ಚಮಕ್)
ಅತ್ಯುತ್ತಮ ಸಂಗೀತ ನಿರ್ದೇಶನ- ವಿ.ಹರಿಕೃಷ್ಣ (ರಾಜಕುಮಾರ)

‘ಅತ್ಯತ್ತಮ ಗೀತಾ ರಚನಕಾರ’-ಜೆ.ಎಂ.ಪ್ರಹ್ಲಾದ್ (ಮಾರ್ಚ್ 22)
ಅತ್ಯುತ್ತಮ ಸಂಕಲನ- ಹರೀಶ್ ಕೊಮ್ಮ (ಮಫ್ತಿ)
ಅತ್ಯುತ್ತಮ ಬಾಲನಟ- ಮಾಸ್ಟರ್ ಕಾರ್ತಿಕ್
ಅತ್ಯುತ್ತಮ ಬಾಲನಟಿ- ಶ್ಲಘ ಸಾಲಿಗ್ರಾಮ (ಕಟಕ)

Comments are closed.