ಕರಾವಳಿ

ಮಂಗಳೂರಿನಲ್ಲಿ ಎಸಿಬಿ ಕಾರ್ಯಾಚರಣೆ : ಲಂಚ ಸ್ವೀಕರಿಸುತ್ತಿದ್ದ ಇಬ್ಬರು ಅಧಿಕಾರಿಗಳ ಬಂಧನ

Pinterest LinkedIn Tumblr

ಮಂಗಳೂರು, ಅಕ್ಟೋಬರ್. 27: ಶೌಚಾಲಯ ನಿರ್ಮಾಣ ಕಾಮಗಾರಿಯ ಫೈನಾನ್ಸಿಯಲ್ ಬಿಡ್ ತೆರೆಯಲು ಟೆಂಡರ್ ಮೊತ್ತದಲ್ಲಿ 25 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಇಬ್ಬರು ಅಧಿಕಾರಿಗಳು ಎಸಿಬಿ ಬಲೆಗೆ ಬಿದ್ದಿದ್ದಾರೆ.

ಸೂಪರಿಂಟೆಂಡಿಂಗ್ ಇಂಜಿನಿಯರಿಂಗ್ ಕಚೇರಿಯಲ್ಲಿ ಕಾರ್ಯನಿರ್ವಾಹಿಸುತ್ತಿದ್ದ ತಾಂತ್ರಿಕ ಸಹಾಯಕ ಸೂರ್ಯ ನಾರಾಯಣ್ ಭಟ್ ಮತ್ತು ಅಸಿಸ್ಟೆಂಟ್ ಇಂಜಿನಿಯರ್ ಸುಧೀನ್ ಬಂಧಿತ ಆರೋಪಿಗಳು.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಎಂಬಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜಿನ ಕಟ್ಟಡದ ಎರಡು ಕೊಠಡಿ ಹಾಗೂ ಶೌಚಾಲಯ ನಿರ್ಮಾಣ ಕಾಮಗಾರಿಯ ಟೆಂಡರ್ಗೆ (52,58,302.76 ಪೈಸೆ) ಗಳಿಗೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಪುನಗರದ ಆದಂ S/O ಅಬುಬಕ್ಕರ್.ಎಂ ಎಂಬವರು ಬಿಡ್ಡ್ ಮಾಡಿರುತ್ತಾರೆ.

ಈತಂದೆ ಅಬೂಬಕರ್‌ಗೆ ವಯಸ್ಸಾದ ಕಾರಣ ತಂದೆಯ ಪರವಾಗಿ ಈ ಬಿಡ್‌ನ್ನು ಪುತ್ರ ಆದಂ ಆನ್‌ಲೈನ್‌ನಲ್ಲಿ ಟೆಂಡರ್ ಸಲ್ಲಿಸಿದ್ದರು. ಆದಂ ಸಹ ಬಿ.ಇ. ಸಿವಿಲ್ ವ್ಯಾಸಂಗ ಮಾಡಿದ್ದು, ತಂದೆಯೊಂದಿಗೆ 10 ವರ್ಷಗಳಿಂದ ಕಂಟ್ರಾಕ್ಟ್ ಕೆಲಸ ಮಾಡಿಕೊಂಡಿದ್ದರು. ತಾಂತ್ರಿಕ ಬಿಡ್‌ನ್ನು ತೆರೆದಾಗ ಕಾಮಗಾರಿಯು ಆದಂ ತಂದೆಗೆ ಮಂಜೂರಾಗಿದೆ.

ಸುಮರು 10 ದಿನಗಳ ಹಿಂದೆ RDPR(ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ) ಟೆಕ್ನಿಕಲ್ ಅಸಿಸ್ಟೆಂಟ್(T.A) ರವರಾದ ಸೂರ್ಯನಾರಾಯಣ್ ಭಟ್ ರವರು ಮಂಗಳೂರಿನ ಕಛೇರಿಯಿಂದ ಅದೆ ಇಲಾಖೆಯ ಅಸಿಸ್ಟೆಂಟ್ ಇಂಜಿನಿಯರ್ (A.E) ಸುಧೀನ್ ಎಂಬವರ ಮೊಬೈಲ್ ನಿಂದ ಕಾಲ್ ಮಾಡಿ ಈ ನಿಮ್ಮ ಕಾಮಗಾರಿಯ ಫೈನಾನ್ಸಿಯಲ್ ಬಿಡ್ ತೆರೆಯಲು ಟೆಂಡರ್ ಮೊತ್ತದ 1% ಹಣವನ್ನು ಅಂದರೆ ರೂಪಾಯಿ 50,000/- ಸಾವಿರ ಹಣವನ್ನು ಅವರ ಕಛೇರಿಯ ಸೂಪರಿಡೆಂಟ್ ಇಂಜಿನಿಯರ್(S.E) ರವರಾದ ರವೀಂದ್ರ ಕಿಣಿಯವರು ಕೇಳುತ್ತಿದ್ದಾರೆ ಎಂದು ಹೇಳಿದರು

ಆಗ ಆದಂ ಹಣದ ವಿಚಾರವಾಗಿ ಚರ್ಚೆ ಮಾಡಿರುತ್ತಾರೆ ಅಗ 1/2% ತೆಗೆದುಕೊಂಡು ಬನ್ನಿ ಬಿಲ್ಡಿಂಗ್ ಕಾಮಗಾರಿ ಅಗಿದ್ದರಿಂದ ಕಡಿಮೆ ಮಾಡಬಹುದು ಎಂದು ಹೇಳಿದರು. ನಂತರ ಮಂಗಳೂರು ಎಸಿಬಿ ಕಛೇರಿಗೆ ಆದಂ ಹೋಗಿ ಮೂವರು ಅಧಿಕಾರಿಗಳ ವಿರುದ್ಧ ದೂರು ನೀಡಿದ್ದು ಎಸಿಬಿ ಅಧಿಕಾರಿಗಳ ಮಾರ್ಗದರ್ಶನದಲ್ಲಿ 26-10-2018 ಶುಕ್ರವಾರದಂದು ಸಂಜೆ ಮಂಗಳೂರು ಮಹಾನಗರದ ಕಟ್ಟಡದಲ್ಲಿರುವ ಪಂಚಾಯತ್ ರಾಜ್ ಇಂಜಿನಿಯರಿಂಗ್ ವೃತ್ತ, ಮಂಗಳೂರು ಇದರ ಸೂಪರಿಂಟೆಂಡಿಂಗ್ ಇಂಜಿನಿಯರಿಂಗ್ ಕಛೇರಿಯಲ್ಲಿ ತಾಂತ್ರಿಕ ಸಹಾಯಕ(T.A) ಸೂರ್ಯನಾರಾಯಣ್ ಭಟ್ ಮತ್ತು ಅಸಿಸ್ಟೆಂಟ್ ಇಂಜಿನಿಯರ್(A.E) ಸುಧೀನ್ ಇವರಿಬ್ಬರು ಇದ್ದು ಇವರು ಆದಂ ಬಳಿಯಲ್ಲಿದ್ದ 25,000/- ಸಾವಿರ ಲಂಚದ ಹಣವನ್ನು ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳು ಪಂಚರೊಂದಿಗೆ ದಾಳಿ ಮಾಡಿ ಇಬ್ಬರನ್ನು ಬಂಧಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ತಾಂತ್ರಿಕ ಸಹಾಯಕ ಸೂರ್ಯನಾರಾಯಣ್ ಭಟ್ ಬ್ಯಾಗ್‌ನಲ್ಲಿ ಹೆಚ್ಚುವರಿ 26 ಸಾವಿರ ರೂ. ಪತ್ತೆಯಾಗಿದ್ದು, ಅದನ್ನು ಅಧಿಕಾರಿಗಳು ವಶಪಡಿಸಿಕೊಳ್ಳಲಾಗಿದೆ.

ಎಸಿಬಿ ಎಸ್ಪಿ ಶ್ರುತಿ ಎನ್.ಎಸ್, ಡಿವೈಎಸ್ಪಿ ಸುಧೀರ್ ಎಂ.ಹೆಗ್ಡೆ, ಉಡುಪಿ ಡಿವೈಎಸ್ಪಿ ದಿನಕರ್ ಶೆಟ್ಟಿ, ಇನ್‌ಸ್ಪೆಕ್ಟರ್ ಯೊಗೀಶ್‌ ಕುಮಾರ್ ಬಿ.ಸಿ., ಸಿಬ್ಬಂದಿ ರಾಧಾಕೃಷ್ಣ ಡಿ.ಎ, ಹರಿಪ್ರಸಾದ್, ಪ್ರಶಾಂತ್, ಉಮೇಶ್, ರಾಮಕೃಷ್ಣ ಕೆ., ವೈಶಾಲಿ, ರಾಕೇಶ್ ವಾಗ್ಮನ್, ಗಣೇಶ್, ರಾಜೇಶ್, ಸುರೇಶ್ ನಾಯಕ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Comments are closed.