ಕರಾವಳಿ

ಮಾನಸಿಕ ಮತ್ತು ದೈಹಿಕ ಒತ್ತಡವನ್ನು ಕಡಿಮೆ ಮಾಡಿ ಅರಾಮದಾಯಕ ನಿದ್ರೆಗೆ ಈ ಟಿಪ್ಸ್

Pinterest LinkedIn Tumblr

ನಿದ್ದೆ ಬರ್ತಿಲ್ಲ ಅಂತ ಮಾತ್ರೆ ಮತ್ತು ಮಧ್ಯಪಾನದ ಮೊರೆ ಹೋಗ್ತಿರೋವ್ರಿಗೆ ಇಲ್ಲಿದೆ ಸಿಹಿ ಸುದ್ದಿ..ಇನ್ಮುಂದೆ ನಿಮ್ಮ ಸಮಸ್ಯೆಗಳಿಗೆ ಕಬ್ಬಿನ ಹಾಲು ರಾಮಬಾಣ ಆಗೋದ್ರಲ್ಲಿ ಸಂಶಯನೇ ಇಲ್ಲ…ಹೇಗೆ ಅಂತೀರಾ ಮುಂದೆ ಓದಿ..

ನಿದ್ದೆ ಬರ್ತಿಲ್ಲ, ಒತ್ತಡ ಇದೆ ಅಂತ ಮಧ್ಯಪಾನ ಮಾಡೋ ಬದ್ಲು ಕಬ್ಬಿನ ಹಾಲು ಕುಡೀರಿ…ನಿದ್ದೆನೂ ಬರುತ್ತೆ, ನಿಮ್ಮ ಲಿವರ್ ಸಹ ಚೆನ್ನಾಗಿರುತ್ತೆ…
ನಮಗೆಲ್ಲ ತಿಳಿದಿರುವ ಹಾಗೆ ನಿದ್ರಾ ಹೀನತೆಯು ಮನೋರೋಗಗಳಾದ ಖಿನ್ನತೆ, ಉದ್ವೇಗ, ಮರೆಗುಳಿತನ, ಮಧುಮೇಹ, ರಕ್ತದೊತ್ತಡ, ಬೊಜ್ಜು, ಹೃದ್ರೋಗಗಳಿಗೆ ಮೂಲ ಕಾರಣವಾಗುತ್ತಿದೆ. ಬದಲಾಗುತ್ತಿರುವ ಜೀವನ ಶೈಲಿ, ಅನಿಯಮಿತ ಆಹಾರ ಪದ್ದತಿ ಮತ್ತು ವ್ಯಸನಗಳ ಚಟಗಳು ನಮ್ಮ ನಿದ್ರೆಯ ಗುಣಮಟ್ಟವನ್ನು ಕ್ಷೀಣಿಸಿ ಅನಾರೋಗ್ಯದತ್ತ ದಬ್ಬುತ್ತಿವೆ.

ಇತ್ತೀಚಿಗೆ ಭಾರತೀಯ ಮೂಲದ ಸಂಶೋಧಕರು ನಡೆಸಿದ ಅಧ್ಯಯನದ ಪ್ರಕಾರ ನಾವು ಸೇವಿಸುವ ಕಬ್ಬಿನ ಹಾಲು, ರೈಸ್ ಬ್ರಾನ್ ( ಅಕ್ಕಿ ಹೊಟ್ಟು), ವೀಟ್ ಜರ್ಮ ಆಯಿಲ್,, ಜೇನು ಮೇಣದಲ್ಲಿ ಒಕ್ಟೋಕೋಸನೊಲ್ ಎಂಬ ಅಂಶವಿದ್ದು ಇದು ಮಾನಸಿಕ ಮತ್ತು ದೈಹಿಕ ಒತ್ತಡವನ್ನು ಕಡಿಮೆ ಮಾಡಿ ನಿದ್ರೆ ಬರಸುವಲ್ಲಿ ಸಹಾಯಕಾರಿ ಎಂಬುದು ತಿಳಿದು ಬಂದಿದೆ.

ಮೇಲಿರುವ ಪದಾರ್ಥಗಳಲ್ಲಿರುವ ಒಕ್ಟೋಕೋಸನೊಲ್ ಎಂಬ ಅಂಶವು ದೇಹದಲ್ಲಿ ಕಾರ್ಟಿಕೊಸ್ಟೆರೋನ್ (ಒತ್ತಡದ ಹಾರ್ಮೋನ್) ಪ್ರಮಾಣವನ್ನು ಕಡಿಮೆ ಮಾಡಿ ದೇಹ ಮತ್ತು ಮನಸ್ಸನ್ನು ವಿಶ್ರಾಂತಿಗೊಳಿಸುತ್ತದೆ. ಇದರಿಂದ ಉದ್ವೇಗ ಕಡಿಮೆಯಾಗಿ ಅದರಿಂದ ಉಂಟಾದ ನಿದ್ರಾಹೀನತೆಯು ಕಡಿಮೆಯಾಗುತ್ತದೆ.

ಇದಲ್ಲದೆ ಕಬ್ಬಿನ ಹಾಲಿನ ಸೇವನೆಯು ಯಕೃತ್ತಿನ ಆರೋಗ್ಯವನ್ನು ವೃದ್ಧಿಸಿ ಡಿಟೊಕ್ಸಿಫಿಕೇಷನ್ ಪ್ರೋಸೆಸ್ ಅನ್ನು ಹೆಚ್ಚು ಮಾಡುತ್ತದೆ. ಅದಲ್ಲದೆ ಕ್ಯಾನ್ಸರ್, ಹೃದ್ರೋಗ, ಮಧುಮೇಹದಂತಹ ಹತ್ತು ಹಲವು ಖಾಯಿಲೆಗಳು ಬಾರದಂತೆ ತಡೆಗಟ್ಟುತ್ತದೆ. ಇಷ್ಟೆಲ್ಲ ಉಪಯೋಗ ಇರಬೇಕಾದರೆ ಇನ್ನು ಏನು ಯೋಅನೆ ಮಾಡ್ತಾ ಇದ್ದೀರಾ? ಈಗಲೇ ಕಬ್ಬಿನ ಹಾಲಿನ ಸೇವನೆ ಪ್ರಾರಂಭಿಸಿ…

Comments are closed.